Breaking: ಕಾಬೂಲ್‌ನ ಚೀನಾ ಅತಿಥಿ ಗೃಹದ ಬಳಿ ಬಾಂಬ್ ಸ್ಫೋಟ
ಕಾಬೂಲ್, ಡಿಸೆಂಬರ್ 12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಚೀನಾ ಮೂಲದ ಹೋಟೆಲ್ ಬಳಿಯಲ್ಲಿ ಭಾರೀ ಸದ್ದಿನ ಸ್ಫೋಟ ಸಂಭವಿಸಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಚೀನಾದ ವ್ಯಾಪಾರ ಸಂದರ್ಶಕರಿಂದ ಜನಪ್ರಿಯವಾಗಿರುವ ಅತಿಥಿ ಗೃಹದ ಬಳಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ರಾಷ್ಟ್ರೀಯ ಭದ್ರತೆಯನ್ನು ಸುಧಾರಿಸಿದೆ ಎಂದು ಹೇಳಿಕೊಂಡರೂ, ಹಲವಾರು ಬಾಂಬ್ ಸ್ಫೋಟಗಳು ಮತ್ತು ದಾಳಿಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ.
"ಮೊದಲು ತುಂಬಾ ಜೋರಾದ ಸ್ಫೋಟದ ಸದ್ದು ಕೇಳಿ ಬಂದಿತು ನಂತರ ಸಾಕಷ್ಟು ಗುಂಡಿನ ಚಕಮಕಿ ನಡೆಯಿತು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್ ಸ್ಫೋಟದ ಬಗ್ಗೆ ಅಧಿಕಾರಿಗಳಿಂದಿಲ್ಲ ಸ್ಪಷ್ಟನೆ:
ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಶಹರ್-ಎ-ನಾವ್‌ನಲ್ಲಿ ಸಂಭವಿಸಿದ ಸ್ಫೋಟದ ಭದ್ರತಾ ಅಧಿಕಾರಿಗಳು ಈವರೆಗೂ ಯಾವುದೇ ರೀತಿ ಸ್ಪಷ್ಟನೆಯನ್ನು ನೀಡಿಲ್ಲ. ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಗಮನಾರ್ಹ ಸಂಖ್ಯೆಯ ಚೀನೀ ವ್ಯಾಪಾರಸ್ಥರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಬೀಜಿಂಗ್ ಅಧಿಕೃತವಾಗಿ ಆಡಳಿತವನ್ನು ಗುರುತಿಸದಿದ್ದರೂ ಸಹ ಪೂರ್ಣ ರಾಯಭಾರ ಕಚೇರಿಯನ್ನು ನಿರ್ವಹಿಸುತ್ತದೆ.












Click it and Unblock the Notifications