ಕಾಬೂಲ್ ಏರ್‌ಪೋರ್ಟ್ ಬಾಂಬ್ ದಾಳಿ: ಮೃತರ ಸಂಖ್ಯೆ 103ಕ್ಕೆ ಏರಿಕೆ

ಕಾಬೂಲ್, ಆಗಸ್ಟ್ 27: ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಆಗಸ್ಟ್ 26ರಂದು ಸಂಭವಿಸಿದ ಸರಣಿ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.

ಈ ಕುರಿತು ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ. ಸ್ಫೋಟಗಳು ಕನಿಷ್ಠ 90 ಅಫ್ಘಾನ್ ನಾಗರಿಕರನ್ನು ಬಲಿ ತೆಗೆದುಕೊಂಡಿವೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ.

ದಾಳಿ ನಂತರ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಐಎಸ್ ನ ಈ ದಾಳಿಗೆ ಜಯವಿಲ್ಲ. ಅಮೆರಿಕದ ಜನರನ್ನು ನಾವು ರಕ್ಷಿಸುತ್ತೇವೆ, ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

 Kabul Airport Blast: Death Toll Rises To 103

ದಾಳಿ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಹೆಚ್ಚುವರಿ ಮಿಲಿಟರಿ ನಿಯೋಜನೆ ಕುರಿತಂತೆ ಪ್ರತಿಕ್ರಿಯಿಸಿದ ಜೋ ಬೈಡನ್, ಒಂದು ವೇಳೆ ಹೆಚ್ಚುವರಿ ಮಿಲಿಟರಿ ಪಡೆ ಅಗತ್ಯವಾದರೆ ಅದಕ್ಕೆ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ.

ಪೆಂಟಗನ್ ಈ ಹಿಂದೆ 13 ಸೈನಿಕರ ಸಾವನ್ನು ದೃಢಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣ ಮತ್ತು ಅದರ ಹೊರವಲಯವನ್ನು ಗುರಿಯಾಗಿಸಿಕೊಂಡು ಗುರುವಾರ, ಕನಿಷ್ಠ ನಾಲ್ಕು ಸ್ಫೋಟಗಳು ನಡೆದವು. ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪು ಈ ದಾಳಿಯ ಹೊಣೆ ಹೊತ್ತಿದೆ ಎಂದು ವರದಿಯಾಗಿದೆ.

ತಾಲಿಬಾನ್ ಹಿತದೃಷ್ಟಿಯಿಂದ ಉಗ್ರಗಾಮಿ ಸಂಘಟನೆ ಹೊಂದಾಣಿಕೆ ಮಾಡಿಕೊಂಡು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣ ಬಳಿ ಕಳೆದ ರಾತ್ರಿ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಹುತಾತ್ಮರಾಗಿದ್ದು 18 ಮಂದಿ ಗಾಯಗೊಂಡಿದ್ದಾರೆ. 90 ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ. ಅಮೆರಿಕ ಸೈನಿಕರನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಸ್ಥಳೀಯ ಶಾಖೆ ಐಸಿಸ್-ಕೆ ನಿನ್ನೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ತಾಲಿಬಾನ್ ಹಿತಾಸಕ್ತಿಗೆ ಅದರ ವ್ಯಾಪ್ತಿ ಮೀರಿ ಹೋಗಲು ಐಸಿಸ್-ಕೆಗೆ ಹೋಗಲು ಸಾಧ್ಯವಿಲ್ಲ ಎಂದು ನಿನ್ನೆ ದಾಳಿ ಬಳಿಕ ಅಮೆರಿಕದ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಹೇಳಿದ್ದಾರೆ.

ತಾಲಿಬಾನಿಯರನ್ನು ಯಾರೂ ನಂಬುತ್ತಿಲ್ಲ. ಅವರ ಸ್ವಹಿತಾಸಕ್ತಿ ಪ್ರಕಾರ ಕೆಲಸ ಮಾಡುತ್ತಿದ್ದು ಅದರ ಬಗ್ಗೆ ಯೋಚಿಸುತ್ತಿದ್ದೇವೆ. ಅವರ ಸ್ವಾರ್ಥದಿಂದ ನಮ್ಮ ಸೈನಿಕರು ವಾಪಸ್ ಬಂದಿದ್ದು ಸಾಧ್ಯವಾದಷ್ಟು ಸೈನಿಕರು ವಾಪಸ್ ಕರೆಸಿಕೊಂಡಿದ್ದೇವೆ ಎಂದಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಭಾರೀ ಅಪಾಯದ ಪರಿಸ್ಥಿತಿ ಹೊರತಾಗಿಯೂ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸಾಧ್ಯವಾಯಿತು. ಸ್ಥಳಾಂತರದ ನಮ್ಮ ಧ್ಯೇಯವನ್ನು ಮುಂದುವರಿಸುತ್ತೇವೆ ಎಂದು ಜೊ ಬೈಡನ್ ಹೇಳಿದ್ದಾರೆ.

ತಮ್ಮ ಪ್ರಾಣವನ್ನು ಅರ್ಪಿಸಿದ ಅಮೆರಿಕಾದ ಸೇನಾ ಸದಸ್ಯರು ವೀರರು. ಇತರರ ಜೀವಗಳನ್ನು ಉಳಿಸಲು ಅಪಾಯಕಾರಿ, ನಿಸ್ವಾರ್ಥ ಕಾರ್ಯಾಚರಣೆಯಲ್ಲಿ ತೊಡಗಿರುವ ವೀರರು. ನಾವು ಅವರ ಕುಟುಂಬಗಳಿಗೆ ನಿರಂತರ ಬಾಧ್ಯತೆಯನ್ನು ಕೃತಜ್ಞತೆಯನ್ನು ಹೊಂದಿದ್ದೇವೆ ಎಂದಿದ್ದಾರೆ.

ತಾಲಿಬಾನೀಯರು ಒಳ್ಳೆಯ ವ್ಯಕ್ತಿಗಳಲ್ಲ, ಆದರೆ ಅವರಿಗೆ ತೀವ್ರ ಆಸಕ್ತಿಯಿದೆ. ವಿಮಾನ ನಿಲ್ದಾಣವನ್ನು ಹೇಗೆ ಮುಕ್ತವಾಗಿಡಬೇಕು, ಅವುಗಳ ಸಾಮರ್ಥ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಉತ್ಸಾಹವಿದೆ. ನಿರ್ವಹಿಸಲು ಸಾಧ್ಯವೇ ಎಂದು ನೋಡುತ್ತಿದ್ದಾರೆ. ದೇಶದ ಆರ್ಥಿಕತೆ ಮೇಲೆ ಹಿಡಿತ ಸಾಧಿಸಲು ನೋಡುತ್ತಿದ್ದಾರೆ ಎಂದರು.

ತಾಲಿಬಾನ್ ಮತ್ತು ಐಸಿಸ್-ಕೆ ಮಧ್ಯೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಗ್ಗೆ ಸುದ್ದಿಗಾರರ ಜೊತೆ ಸಂವಾದ ನಡೆಸುವ ವೇಳೆ ಪ್ರಸ್ತಾಪಿಸಿದ ಅಧ್ಯಕ್ಷ ಬೈಡನ್, ವಿಮಾನ ನಿಲ್ದಾಣ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ಮತ್ತು ಐಸಿಸ್ ಮಧ್ಯೆ ಒಳಸಂಚು ನಡೆದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ.

ಇಬ್ಬರು ಆತ್ಮಾಹುತಿ ಬಾಂಬ್ ದಾಳಿಕೋರರು ನಿನ್ನೆ ಕಾಬೂಲ್ ನ ಜನನಿಬಿಡ ಪ್ರದೇಶಕ್ಕೆ ಬಂದು ಸ್ಫೋಟಿಸಿದ್ದು ಇದರಲ್ಲಿ 13 ಅಮೆರಿಕಾದ ಸೈನಿಕರು ಹುತಾತ್ಮಗೊಂಡು 60ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+