ರೇಪ್ ಕೇಸ್ ನಡೆಸುವಾಗ ಜಡ್ಜ್ ನಿದ್ದೆ ಹೊಡೆಯುತ್ತಿದ್ದ!

ಮ್ಯಾಂಚೆಸ್ಟರ್, ಜು. 26 : ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರಬೇಕಾದರೆ, ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಗೊರ್ ಗೊರ್ ಗೊರಕೆ ಹೊಡೆಯುವ ಪುಢಾರಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಲೈಂಗಿಕ ದೌರ್ಜನ್ಯದ ವಿಚಾರಣೆ ನಡೆಯುವಾಗ ನಿದ್ದೆ ಹೋದ ನ್ಯಾಯಾಧೀಶನ ಬಗ್ಗೆ ಕೇಳಿದ್ದೀರಾ?

ಇಲ್ಲವಾದರೆ ಇಲ್ಲಿದೆ ಓದಿರಿ ಒಂದು ರೋಚಕ ಕಥೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಕ ಬಾಲಕಿ ಪ್ರತಿವಾದಿ ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವಾಗ ನ್ಯಾಯಾಧೀಶ ನಿರಂತರವಾಗಿ ತೂಕಡಿಸುತ್ತಿದ್ದ ಮತ್ತು ನಿದ್ದೆಗೆ ಜಾರಿದ ಕಾರಣ ಇಡೀ ಪ್ರಕರಣವೇ ತಿರುವುಮುರುವಾಗುವ ಪ್ರಸಂಗ ಎದುರಾಗಿತ್ತು.

ಇದು ನಡೆದಿರುವುದು ಮ್ಯಾಂಚೆಸ್ಟರ್ ಕೋರ್ಟಿನಲ್ಲಿ. ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆರೋಪಿಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು. ಆದರೆ, ಪ್ರಕರಣ ನಡೆಸುತ್ತಿದ್ದ ಹಿರಿಯ ನ್ಯಾಯಾಧೀಶ ಫಿಲಿಪ್ ಕಾಟನ್ ರನ್ನು ನಿದಿರಾದೇವಿ ಗಾಢವಾಗಿ ಆಲಂಗಿಸಿಕೊಂಡುಬಿಟ್ಟಿದ್ದಳು. [ಸದನದಲ್ಲಿ ನಿದ್ದೆರಾಮಯ್ಯ ಆದ ಸಿದ್ದು]

Judge sleeps during trial in child abuse case

ಪ್ರಕರಣ ಹಳ್ಳ ಹಿಡಿಯಲು ಇನ್ನೇನು ಬೇಕು? ಇದನ್ನು 2006ರಿಂದ 2013ರವರೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿಯ ಕುಟುಂಬದವರು ಗಮನಿಸಿದ್ದಾರೆ. ಈ ಕುರಿತು ದೂರು ನೀಡಿದ ಕಾರಣ ಪ್ರಕರಣವನ್ನು ಮತ್ತೆ ನಡೆಸಬೇಕೆಂದು ಆದೇಶಿಸಲಾಗಿದೆ. ನಿದ್ದೆ ಹೊಡೆಯುತ್ತಿದ್ದ ನ್ಯಾಯಾಧೀಶನನ್ನು ಈ ಕೇಸಿನಿಂದ ಕಿತ್ತುಹಾಕಲಾಗಿದೆ.

ಆರೋಪಿ ಜಾನ್ ಕ್ಲಿಗ್ಲೆ ಎಂಬಾತ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ, ಆಕೆಯ ಎದುರು ಅಸಹ್ಯಕರವಾಗಿ ವರ್ತಿಸಿದ, ಹಲ್ಲೆ ಮಾಡಿದ, ಲೈಂಗಿಕ ಕ್ರಿಯೆ ನಡೆಸಲು ಬಾಲಕಿಯನ್ನು ಪ್ರೇರೇಪಿಸಿದ ಮತ್ತು ಸಂಭೋಗಿಸಿದ ಆರೋಪಗಳನ್ನು ಎದುರಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕಿ ಮತ್ತೊಮ್ಮೆ ಹೇಳಿಕೆ ನೀಡಬೇಕಾಗುತ್ತದೆ. [ಕಥೆ : ಸ್ವಪ್ನಧರ್ ನಿದ್ರಾಪುರಾಣ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+