• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

|

ತಮ್ಮ ಮದುವೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯಲೆಂದು ಟರ್ಕಿ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ರಾಯಭಾರ ಕಚೇರಿಗೆ ತೆರಳಿದ್ದ ಜಮಲ್ ಖಶೋಕಿ ಎಂಬ ಸುಪ್ರಸಿದ್ಧ ಪತ್ರಕರ್ತ ಎಲ್ಲಿ ಹೋದರು? ರಾಯಭಾರ ಕಚೇರಿಯ ಹೊರಗೆ ಪತಿಗಾಗಿಯೇ ಕಾಯುತ್ತ ನಿಂತ ಪತ್ನಿ ಇನ್ನೂ ಕಾಯುತ್ತಲೇ ಇದ್ದಾರೆ!

ಸೌದಿ ದೊರೆಗಳೇ ಜಮಲ್ ಖಶೋಗಿ ಅವರನ್ನು ಕೊಲ್ಲಿಸಿಬಿಟ್ಟರಾ? ಅನುಮತಿ ಇಲ್ಲದೆ ತನಿಖಾಧಿಕಾರಿಗಳೂ ಪ್ರವೇಶಿಸಲು ಸಾಧ್ಯವಿಲ್ಲದ ರಾಯಭಾರ ಕಚೇರಿಯಲ್ಲಿ ಅಂದು ನಡೆದಿದ್ದೇನು?

ದೆಹಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು: ಮಗನೇ ಕೊಲೆಗಾರ!

ಅಕಸ್ಮಾತ್ ಖಶೋಗಿ ಅವರು ಹತ್ಯೆ ಆಗಿಲ್ಲವಾದರೆ ಇಷ್ಟರಲ್ಲೇ ಅವರ ಬಗ್ಗೆ ಏನಾದರೂ ಮಾಹಿತಿ ಲಭ್ಯವಾಗಬೇಕಿತ್ತು, ಆದರೆ ಕೊಂಚ ಸುಳಿವನ್ನೂ ನೀಡದೆ ಖಶೋಗಿ ಅವರ ನಾಪತ್ತೆ ಪ್ರಕರಣ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಈ ಪ್ರಕರಣ ಸೌದಿಯ ರಾಜರತ್ತ ಅನುಮಾನದ ಕಣ್ಣು ಹರಿಸುವಂತೆ ಮಾಡಿದೆ.

ಜಮಲ್ ಖಶೋಗಿ ಯಾರು?

ಸೌದಿ ಅರೇಬಿಯಾ ಮದೀನಾದಲ್ಲಿ ಜನಿಸಿದ ಜಮಲ್ ಖಶೋಗಿ ಉಗ್ರ ಒಸಾಮಾ ಬಿನ್ ಲಾಡೆನ್ ರಂಥವರನ್ನೂ ಸಂದರ್ಶನ ಮಾಡಿ ಖ್ಯಾತಿ ಗಳಿಸಿದ್ದರು. ಮೂವತ್ತು ವರ್ಷಗಳಷ್ಟು ದೀರ್ಘ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಭವ ಪಡೆದ ಖಶೋಗಿ ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಸೌಧಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅಫ್ಘಾನಿಸ್ತಾನ, ಅಲ್ಜೀರಿಯಾ, ಕುವೈಟ್‌ ಮುಂತಾದ ದೇಶಗಳ ಬಗ್ಗೆ ಅವರು ಮಾಡಿದ ವರದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅವರಿಗೆ ಇವು ಖ್ಯಾತ ಪತ್ರಕರ್ತನ ಪಟ್ಟವನ್ನೂ ನೀಡಿದ್ದವು. ಸೌದಿ ರಾಜ ಬಿನ್ ಸಲ್ಮಾನ್ ಅವರ ವಿರುದ್ಧ ಸಾಕಷ್ಟು ಲೇಖನಗಳನ್ನು ಬರೆದು ರಾಜನ ಕೆಂಗಣ್ನಿಗೂ ಅವರು ಗುರಿಯಾಗಿದ್ದರು.

ಕೊನೆಗೂ ಬಯಲಾಯಿತು ಗಂಜಿಮಠ ಮಹಮ್ಮದ್‌ ಸಮೀರ್ ಕೊಲೆ ರಹಸ್ಯ

ವಾಷಿಂಗ್ಟನ್ ಪೋಸ್ಟ್ ನಲ್ಲಿ ಒಪಿನಿಯನ್ ಎಡಿಟರ್

ಕೆಲ ವರ್ಷಗಳ ನಂತರ ಸೌದಿ ಅರೆಬಿಯಾವನ್ನು ಬಿಟ್ಟು ಅಮೆರಿಕದ ವಾಷಿಂಗ್ಟನ್ ಗೆ ಹಾರಿದ ಅವರನ್ನು ಅಮೆರಿಕದ ಪ್ರಸಿದ್ಧ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಕೈಬೀಸಿ ಕರೆದಿತ್ತು. ವಾಷಿಂಗ್ಟನ್ ಪೋಸ್ಟ್ ನಲ್ಲಿ ಒಪಿನಿಯನ್ ಎಡಿಟರ್ ಆಗಿ ಕಾರ್ಯಾರಂಭ ಮಾಡಿದ ನಂತರವಂತೂ ಸೌದಿ ರಾಜರ ಬಗ್ಗೆ ಇನ್ನಷ್ಟು ನಿರ್ಭೀತಿಯಿಂದ ಬರೆಯುವುದಕ್ಕೆ ಆರಂಭಿಸಿದ್ದರು ಖುಶೋಗಿ!

ಬೆಚ್ಚಿಬಿತ್ತು ಯುರೋಪ್: ಪತ್ರಕರ್ತೆಯ ಅತ್ಯಾಚಾರ-ಕೊಲೆ, ಕಾರಣ ನಿಗೂಢ!

ಅಕ್ಟೋಬರ್ 2 ರಂದು ನಡೆಯಬಾರದ್ದು ನಡೆಯಿತಾ?

ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್ ಸೆಂಗಿಜ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ಎಷ್ಟು ಹೊತ್ತಾದರೂ ಹೊರಬರಲೇ ಇಲ್ಲ! ಗಂಟೆಯಾಯಿತು, ದಿನವಾಯಿತು... ಈಗ ವಾರವೇ ಕಳೆದಿದೆ. ಆದರೂ ಅವರ ಪತ್ತೆಯಿಲ್ಲ. ಕಚೇರಿಯ ಹೊರಗೆ ಅವರಿಗಾಗಿಯೇ ಕಾಯುತ್ತ ನಿಂತಿದ್ದ ಪತ್ನಿ ಪತಿಯನ್ನು ಹುಡುಕಿಕೊಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದಾರೆ! ಆದರೆ ಯಾರಿಗೂ ಖಶೋಗಿ ಸುಳಿವು ಸಿಕ್ಕಿಲ್ಲ!

ರಾಯಭಾರ ಕಚೇರಿಗೆ ತೆರಳಿದ್ದ ಅನುಮಾನಾಸ್ಪದ ವ್ಯಕ್ತಿಗಳು

ಖಶೋಗಿ ರಾಯಭಾರಿ ಕಚೇರಿಗೆ ಬರುವ ಮುನ್ನಾದಿನವೇ ಎರಡು ವಿಮಾನಗಳಲ್ಲಿ ಅಪರಿಚಿತ ವ್ಯಕ್ತಿಗಳು ಸೌದಿಯಿಂದ ಬಂದಿಳಿದಿದ್ದರು. ಅವರು ರಾಯಭಾರ ಕಚೇರಿಯ ಪಕ್ಕದಲ್ಲೇ ಇದ್ದ ಹೊಟೇಲ್ ನಲ್ಲಿ ತಂಗಿದ್ದರು! ಖಶೋಗಿ ರಾಯಭಾರ ಕಚೇರಿಗೆ ತೆರಳಿದ ನಂತರದ ಒದು ಗಂಟೆಯ ನಂತರ ಸುಮಾರು 15 ಜನರನ್ನು ಹೊತ್ತ ಆರು ಕಾರುಗಳು ರಾಯಭಾರ ಕಚೇರಿಯಿಂದ ಹೊರನಡೆದವು. ಆ ಎಲ್ಲಾ ಕಾರುಗಳೂ ಡಿಪ್ಲೊಮೆಟಿಕ್ ಲೈಸೆನ್ಸ್ ಹೊಂದಿದ್ದವು! ಅಷ್ಟಕ್ಕೂ ಆಗ ರಾಯಭಾರ ಕಚೇರಿಗೆ ಬಂದಿದ್ದು ಯಾರು?

ಖಶೋಗಿ ಅವರನ್ನು ಕೊಲ್ಲಲಾಗಿದೆಯಾ?

ಖಶೋಗಿ ಅವರನ್ನು ರಾಯಭಾರ ಕಚೇರಿಯಲ್ಲಿ ಕೊಲ್ಲಲಾಗಿದೆಯಾ? ಕೊಂದಿದ್ದರೆ ಅವರ ದೇಹವೆಲ್ಲಿ? ಪತ್ರಿಕೆಯೊಂದು ಅನುಮಾನ ವ್ಯಕ್ತಪಡಿಸಿರುವ ಪ್ರಕಾರ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ಅವರನ್ನು ಕೊಂದು, ಅವರ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಲಾಗಿದೆ. ನಂತರ ಕಚೇರಿಯಿಂದ ಹೊರಟ 15 ಜನ ಅವರ ದೇಹದ ಭಾಗಗಳನ್ನು ಅನುಮಾನ ಬಾರದಂತೆ ಬ್ಯಾಗಿನಲ್ಲಿ ಹಾಕಿ ಹೊತ್ತೊಯ್ದಿದ್ದಾರೆ!

ರಾಯಭಾರ ಕಚೇರಿಗೆ ತನಿಖಾಧಿಕಾರಿಗಳಿಗೆ ಪ್ರವೇಶವಿಲ್ಲ!

ಅನುಮತಿ ಇಲ್ಲದೆ ಯಾವುದೇ ರಾಯಭಾರ ಕಚೇರಿಗೆ ತನಿಖಾಧಿಕಾರಿಗಳು ಪ್ರವೇಶಿಸುವಂತಿಲ್ಲ. ಈ ನಿಯಮವನ್ನೇ ಸೌದಿ ರಾಯಭಾರ ಕಚೇರಿ ದುರುಪಯೋಗ ಪಡಿಸಿಕೊಂಡಿದೆಯಾ? ವಿಶ್ವಸಂಸ್ಥೆಯು ತನಿಖೆಗೆ ಸ್ಪಂದಿಸುವಂತೆ ಸೌದಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ನಂತರ ಟರ್ಕಿ ಪೊಲೀಸರು ರಾಯಭಾರ ಕಚೇರಿಗೆ ತೆರಳಲು ಸೌದಿ ಸರ್ಕಾರ ಅನುಮತಿ ನೀಡಿದೆ. ಆದರೆ ಖಶೋಗಿ ಅವರ ದೇಹವನ್ನೇ ಬೇರೆಡೆ ಸಾಗಿಸಿಬಿಟ್ಟಿದ್ದರೆ ರಾಯಭಾರ ಕಚೇರಿಗೆ ತನಿಖಾಧಿಕಾರಿಗಳು ತೆರಳಿದರೂ ಪ್ರಯೋಜನವಿಲ್ಲ! ಒಟ್ಟಿನಲ್ಲಿ ನಿರ್ಭೀತ ಪತ್ರಕರ್ತ ಖಶೋಗಿ ಅವರ ನಿಗೂಢ ನಾಪತ್ತೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jamal Khashoggi, a world famous journalist who continously critisizes Saudi kings, has mysteriously missing from Diplomatic office of Saudi Arabia in Turkie. He was working for Washigton Post.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more