ಸರ್ವಾಧಿಕಾರಿ ವಿರುದ್ಧ ರಿವೇಂಜ್: ಜಪಾನ್, ದ.ಕೊರಿಯಾ ಮಾಡಿದ್ದೇನು?
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಾನು ಮಾಡಿದ್ದೇ ರೂಲ್ಸ್, ಆಡಿದ್ದೇ ಆಟ ಎನ್ನುವಂತಾಗಿದೆ. ಅದರಲ್ಲೂ ರಷ್ಯಾ ಜೊತೆ ಸೇರಿ ವಿಶ್ವಸಂಸ್ಥೆ ನಿಯಮಗಳನ್ನ ಇದೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುರಿದಿದ್ದಾನೆ ಎಂಬ ಆರೋಪಗಳ ನಡುವೆ, ಜಪಾನ್ & ದಕ್ಷಿಣ ಕೊರಿಯಾ ಸರ್ವಾಧಿಕಾರಿ ಕಿಮ್‌ಗೆ ಭೀಕರ ಆಘಾತ ನೀಡಿವೆ.
ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾಗೆ ಈಗ ಆಧಾರವಾಗಿ ನಿಂತಿರುವುದು ಕೆಲವೇ ಕೆಲವು ದೇಶಗಳು. ಅದ್ರಲ್ಲೂ ರಷ್ಯಾಗೆ ಉತ್ತರ ಕೊರಿಯಾ ಮತ್ತು ಚೀನಾ ಭಾರಿ ಬೆಂಬಲವನ್ನು ಘೋಷಿಸಿ, ನೇರವಾಗಿ ಯುದ್ಧಕ್ಕೆ ಬೇಕಾದ ಅಸ್ತ್ರಗಳನ್ನು ಸರಬರಾಜು ಮಾಡುತ್ತಿವೆ ಎನ್ನುವ ಆರೋಪ ಇದೆ. ಈ ಆರೋಪಗಳ ಬೆನ್ನಲ್ಲೇ ಜಪಾನ್ ಮತ್ತು ದಕ್ಷಿಣ ಕೊರಿಯಾ ಈಗ ಶಾಕ್ ಕೊಟ್ಟಿದ್ದು ಉತ್ತರ ಕೊರಿಯಾ ಥಂಡಾ ಆಗೋಗಿದೆ. ಅದ್ರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಈಗ ಮತ್ತೊಮ್ಮೆ ತನ್ನ ದೇಶವನ್ನು ಸಂಕಷ್ಟದ ಸುಳಿಗೆ ಸಿಲುಕಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

11 ಸಂಸ್ಥೆಗಳಿಗೆ ಜಪಾನ್ ಶಾಕ್!
ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿರುವ ರಷ್ಯಾಗೆ ಶಸ್ತ್ರಾಸ್ತ್ರಗಳು ಬೇಕಿವೆ. ಹೀಗಾಗಿ ಗನ್ & ಬಾಂಬ್ ಸೇರಿ, ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ರಷ್ಯಾ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತರ ಕೊರಿಯಾ ರಷ್ಯಾ ನೆರವಿಗೆ ಬಂದಿದ್ದು, ಭಾರಿ ಪ್ರಮಾಣದಲ್ಲಿ ಗನ್ & ಬಾಂಬ್ ಸೇರಿ ಯುದ್ಧಕ್ಕೆ ಬೇಕಾದ ಅಸ್ತ್ರಗಳನ್ನು ಉತ್ತರ ಕೊರಿಯಾ ಸಪ್ಲೈ ಮಾಡ್ತಿದೆ ಎಂಬ ಆರೋಪ ಇದೆ. ಯಾಕಂದ್ರೆ ಉತ್ತರ ಕೊರಿಯಾ ಮತ್ತು ರಷ್ಯಾ ಗಡಿ ಹತ್ತಿರವೇ ಇದ್ದು ಅಲ್ಲಿಂದ ಗುಟ್ಟಾಗಿ ಹಡಗುಗಳ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.
ರಷ್ಯಾ ಸೇನೆಗೆ ಸಂಕಷ್ಟ ಎದುರಾಯ್ತಾ?
ಈ ಆರೋಪದ ಬೆನ್ನಲ್ಲೇ ಜಪಾನ್ & ದಕ್ಷಿಣ ಕೊರಿಯಾ ಈಗ ರಿವೇಂಜ್ ತೆಗೆದುಕೊಂಡಿವೆ. ಹೀಗೆ ಗುಟ್ಟಾಗಿ ರಷ್ಯಾಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ ಆರೋಪದ ಹಿನ್ನೆಲೆ 11 ಸಂಸ್ಥೆಗಳು ಸೇರಿದಂತೆ ಕೆಲ ದೊಡ್ಡ ಪ್ರಮಾಣದ ಹಡಗುಗಳು & ವ್ಯಕ್ತಿಗಳ ವಿರುದ್ಧ ಜಪಾನ್ & ದಕ್ಷಿಣ ಕೊರಿಯಾ ನಿರ್ಬಂಧ ಹೇರಿದೆ. ಇದು ಉತ್ತರ ಕೊರಿಯಾ ಮತ್ತು ರಷ್ಯಾಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಅಲ್ಲದೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ ಸಮಸ್ಯೆ ತಂದೊಡ್ಡುವ ಆತಂಕ ಆವರಿಸಿದೆ.
2022ರಲ್ಲಿ ಯುದ್ಧ ಶುರುವಾದ ನಂತರ ರಷ್ಯಾ & ಉಕ್ರೇನ್ ಕದಾಡುತ್ತಿವೆ. ಯುದ್ಧದಲ್ಲಿ ಉಕ್ರೇನ್ ಪರವಾಗಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನಿಂತಿವೆ ಆದ್ರೆ ರಷ್ಯಾ ಪರ ನಿಂತಿರುವುದು ಚೀನಾ & ಉತ್ತರ ಕೊರಿಯಾ ಮಾತ್ರ. ಹೀಗಾಗಿ ರಷ್ಯಾ ಕೂಡ ಇಬ್ಬರ ಸಹಾಯ ನಂಬಿದೆ. ಆದರೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಬಿರುಗಾಳಿ ಸೃಷ್ಟಿ ಮಾಡುತ್ತಿದ್ದು. ಮುಂದೆ ಈ ಬೆಳವಣಿಗೆ ದೊಡ್ಡ ತಿರುವು ಪಡೆಯುವ ಸಾಧ್ಯತೆ ಇದೆ.












Click it and Unblock the Notifications