Japan Earthquake: ಹೊಕ್ಕೈಡೋದಲ್ಲಿ ರಿಕ್ಟರ್ ಮಾಪನ 6.1 ತೀವ್ರತೆಯ ಭೂಕಂಪ
ಹೊಕ್ಕೈಡೋ ದ್ವೀಪದ ಪೂರ್ವ ಭಾಗದಲ್ಲಿ ರಾತ್ರಿ ಸ್ಥಳೀಯ ಕಾಲಮಾನ 10.27ಕ್ಕೆ ಭೂಕಂಪ ಸಂಭವಿಸಿದ್ದು, ಯಾವುದೇ ಸುನಾಮಿ ಎಚ್ಚರಿಕೆಯನ್ನು ಜಪಾನ್ ಹವಾಮಾನ ಸಂಸ್ಥೆ ನೀಡಿಲ್ಲ.
ಟೋಕಿಯೋ, ಫೆ 25: ಜಪಾನ್ ದೇಶದ ಉತ್ತರದ ಪ್ರಮುಖ ದ್ವೀಪ ಹೊಕ್ಕೈಡೋದಲ್ಲಿ ಶನಿವಾರ (ಫೆ 25), ರಿಕ್ಟರ್ ಮಾಪನದಲ್ಲಿ 6.1ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವೈಜ್ಞಾನಿಕ ಸಮೀಕ್ಷಾ ಇಲಾಖೆ ಹೇಳಿದೆ. ಪ್ರಾಧಮಿಕ ವರದಿಗಳ ಪ್ರಕಾರ, ಯಾವುದೇ ಸಾವುನೋವು ಸಂಭವಿಸಿಲ್ಲ.
ಭೂಕಂಪನವು ನೆಮುರೊ ಪೆನಿನ್ಸುಲಾ ದ್ವೀಪದಲ್ಲಿ ಸುಮಾರು 61 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಅರ್ಥ್ ಸೈನ್ಸ್ ಅಂಡ್ ಡಿಸಾಸ್ಟರ್ ರೆಸಿಲಿಯನ್ಸ್ (NIED) ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಹೊಕ್ಕೈಡೋ ದ್ವೀಪದ ಪೂರ್ವ ಭಾಗದಲ್ಲಿ ರಾತ್ರಿ ಸ್ಥಳೀಯ ಕಾಲಮಾನ 10.27ಕ್ಕೆ ಭೂಕಂಪ ಸಂಭವಿಸಿದ್ದು, ಯಾವುದೇ ಸುನಾಮಿ ಎಚ್ಚರಿಕೆಯನ್ನು ಜಪಾನ್ ಹವಾಮಾನ ಸಂಸ್ಥೆ ನೀಡಿಲ್ಲ. ಜಪಾನಿನಲ್ಲಿ ಭೂಕಂಪ ಸಂಭವಿಸುವುದು ಸಾಮಾನ್ಯವಾಗಿದ್ದು, ಪೆಸಿಫಿಕ್ ಮಹಾಸಾಗರದ 'ರಿಂಗ್ ಆಫ್ ಫೈರ್' ಎಂದು ಕರೆಯಲ್ಪಡುವ ಪ್ರದೇಶಗಳಲ್ಲೊಂದಾಗಿದೆ.
ಏನಿದು ರಿಂಗ್ ಆಫ್ ಫೈರ್: ಪೆಸಿಫಿಕ್ ಮಹಾಸಾಗರದ ಅಂಚಿನ ಈ ಭೂಪ್ರದೇಶವನ್ನು ರಿಂಗ್ ಆಫ್ ಫೈರ್, ರಿಮ್ ಆಫ್ ಫೈರ್, ಗರ್ಡಲ್ ಆಫ್ ಫೈರ್ ಎಂದೂ ಕರೆಯಲಾಗುತ್ತದೆ. ಹಾರ್ಸ್‌ಶೂ ಆಕಾರದಲ್ಲಿರುವ ಈ ಭೂಪ್ರದೇಶ ಸುಮಾರು 40 ಸಾವಿರ ಕಿ.ಮೀ ಉದ್ದ ಮತ್ತು ಐನೂರು ಕಿಲೋಮೀಟರ್ ಅಗಲದ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶಗಳಲ್ಲಿ, ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕಂಪಗಳು ಆವಾಗಾವಾಗ ಸಂಭವಿಸುತ್ತಿರುತ್ತವೆ.












Click it and Unblock the Notifications