ಖಶೋಗಿ ಹತ್ಯೆ: ತನಿಖೆಗೆ ಆದೇಶ ನೀಡದ ವಿಶ್ವಸಂಸ್ಥೆ ಮುಖ್ಯಸ್ಥರ ಮೇಲೆ ಅಸಮಾಧಾನ

ನ್ಯೂಯಾರ್ಕ, ಅಕ್ಟೋಬರ್ 28: ಖ್ಯಾತ ಪತ್ರಕರ್ತ ಜಮಲ್ ಖಶೋಗಿ ಹತ್ಯೆಯ ಕುರಿತಂತೆ ಕ್ರಿಮಿನಲ್ ತನಿಖೆಗೆ ಅವಕಾಶ ನೀಡದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗಟರರ್ಸ್ ಕುರಿತು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಅಂಟೋನಿಯೋ ಗಟರರ್ಸ್ ಕಶೋಗಿ ಹತ್ಯಾಕಾರರನ್ನು ಪತ್ತೆ ಮಾಡುವ ಮತ್ತು ಆರೋಪ ಸಾಬೀತು ಪಡಿಸುವಲ್ಲಿ ಸಿಕ್ಕ ಹಲವು ಅವಕಾಶಗಳನ್ನು ಉಪಯೋಗಿಸಿಕೊಂಡಿಲ್ಲ. ಇದಕ್ಕೆ ಸಂಬಮಧಿಸಿದ ಹಲವು ಸಾಕ್ಷ್ಯಗಳನ್ನೂ ನಾನು ಅವರಿಗೆ ನೀಡಿದ್ದೆ" ಎಂದು ವಿಶ್ವಸಂಸ್ಥೆಯ ಅಧಿಕಾರಿ ಆಗ್ನಸ್ ಕೊಲ್ಲಾಮಾರ್ಡ್ ಹೇಳಿದ್ದಾರೆ.

2018 ರ ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್ ಸೆಂಗಿಜ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ನಂತರ ಹೊರಬರಲೇ ಇಲ್ಲ. ಅವರು ಏನಾದರೂ? ಬದುಕಿದ್ದಾರೆಯೇ? ಕೊಲೆ ಮಾಡಲಾಗಿದೆಯೇ ಎಂಬ ಯಾವ ಸುಳಿವೂ ದೊರಕಿರಲಿಲ್ಲ.

Jamal Khashoggi Murder Case: UN official disappoited with Antonio Guterrers

ಸೌದಿ ಯುವರಾಜನ ವಿರುದ್ಧ ವಾಷಿಂಗ್ಟನ್ ಪೋಸ್ಟ್ ನಲ್ಲಿ ನಿರಂತರವಾಗಿ ಖಶೋಗಿ ಲೇಖನಗಳನ್ನು ಬರೆಯುತ್ತಿದ್ದರು. ಒಂದು ಕಾಲದಲ್ಲಿ ಸೌದಿ ಯುವರಾಜನ ಆಪ್ತ ವಲಯದಲ್ಲಿ ಗುರುತಿಸಿಕೊಂದಿದ್ದರಿಂದ ಅವರಿಗೆ ಹಲವು ಸತ್ಯಗಳು ತಿಳಿದಿದ್ದವು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಅವರ ಮೃತದೇಹ ಪತ್ತೆಯಾಗಿರಲಿಲ್ಲ.

ಕೊನೆಗೆ ಕಳೆದ ಸೆಪ್ಟೆಂಬರ್ ನಲ್ಲಿ ಜಮಲ್ ಖಶೋಗಿ ಕೊಲೆ ನನ್ನ ಕಣ್ಣೆದುರಲ್ಲೇ ನಡೆದಿತ್ತು ಎಂಬ ಸ್ಫೋಟಕ ಸತ್ಯವನ್ನು ಸೌದಿ ಅರೇಬಿಯಾದ ಯುವರಾಜ, ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದರು.

ಪ್ರಸಿದ್ಧ ಪತ್ರಕರ್ತ ಜಮಲ್ ಖಶೋಗಿ ಅವರ ಹತ್ಯೆಯ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಆದರೆ ಅದಕ್ಕೆ ಆದೇಶ ನೀಡಿದ್ದು ನಾನು ಎಂಬ ಆರೋಪವನ್ನು ನಾನೆಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+