ಪಾಕಿಸ್ತಾನದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಮಸೂದ್ ಗೆ ಚಿಕಿತ್ಸೆ
ಜೈಶ್-ಇ-ಮೊಹ್ಮದ್ ನ ಸ್ಥಾಪಕ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಶಂಕೆ ಇದ್ದು, ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ನಿರಂತರವಾಗಿ ಡಯಾಲಿಸಿಸ್ ನಡೆಯುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಜೆಇಎಂ ಮುಖ್ಯಸ್ಥನಿಗೆ ಅನಾರೋಗ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ ಹೇಳಿದ ನಂತರ ಈ ಹೇಳಿಕೆ ಬಂದಿದೆ.
"ಇತ್ತೀಚಿನ ವರದಿಗಳ ಪ್ರಕಾರ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾನೆ. ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ನಿರಂತರವಾಗಿ ಡಯಾಲಿಸಿಸ್ ನಡೆಯುತ್ತಿದೆ" ಎಂದು ಹಿರಿಯ ಭದ್ರತಾ ಅಧಿಕಾರಿ ಹೇಳಿದ್ದಾರೆ.
ವಿದೇಶಾಂಗ ಸಚಿವ ಖುರೇಷಿ ಮಾತನಾಡಿ, ಮಾಹಿತಿಗಳ ಪ್ರಕಾರ ಆತ ಪಾಕಿಸ್ತಾನದಲ್ಲೇ ಇದ್ದಾನೆ. ಅತ ಮನೆ ಬಿಟ್ಟು ಹೊರಗೆ ಬರಲಾರದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದಿದ್ದರು.

ಆಂದ ಹಾಗೆ ಮಸೂದ್ ಅಜರ್ ಹಾಗೂ ಅಮೆರಿಕದಿಂದ ಹತನಾದ ಒಸಾಮಾ ಬಿನ್ ಲಾಡೆನ್ ಸಮೀಪವರ್ತಿಗಳಾಗಿದ್ದರು. ಆಫ್ರಿಕಾದ ಹಲವು ದೇಶಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು. ಬಹಳ ಜನಕ್ಕೆ ಈತ ಪಾಕಿಸ್ತಾನದ ಮೌಲ್ವಿ ಅಂತಲೇ ಪರಿಚಯ. ಆದರೆ ಈತ ಯು.ಕೆ. ಮಸೀದಿಗಳಲ್ಲಿ ಧಾರ್ಮಿಕ ಪ್ರವಚನಗಳ ಜಾಗಕ್ಕೆ ಜಿಹಾದ್ ತಂದವನು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಂದಹಾರ್ ಗೆ ವಿಮಾನವನ್ನು ಅಪಹರಿಸಿಕೊಂಡು ಹೋಗಿ, ಭಾರತದಿಂದ ಮಸೂದ್ ಅಜರ್ ನನ್ನು ಬಿಡಿಸಿಕೊಳ್ಳಲಾಯಿತು. ಆಗ ಅಜರ್ ಗೆ ಅಫ್ಘಾನಿಸ್ತಾನದಲ್ಲಿ ನೆಲೆ ಒದಗಿಸಿದ್ದು ಒಸಾಮಾ ಬಿನ್ ಲಾಡೆನ್.












Click it and Unblock the Notifications