ಕೆನಡಾದ ಗರ್ಲ್‌ಫ್ರೆಂಡ್ ಜತೆ ಜಾಕಿ ಚಾನ್ ಮಗಳ ಮದುವೆ!
ಬೀಜಿಂಗ್, ನವೆಂಬರ್ 27: ಖ್ಯಾತ ನಟ ಜಾಕಿ ಚಾನ್ ಅವರ ಮಗಳು ಎಟ್ಟಾ ಎನ್ಜಿ, ತಮ್ಮ 31 ವರ್ಷದ ಕೆನಡಾದ ಪ್ರೇಯಸಿಯೊಂದಿಗೆ ಮದುವೆಯಾಗಿರುವುದಾಗಿ ಪ್ರಕಟಿಸಿದ್ದಾರೆ.
ತಂದೆ ಜಾಕಿ ಚಾನ್ ಅವರಿಂದ ಬೇರ್ಪಟ್ಟಿರುವ 19 ವರ್ಷದ ಎಟ್ಟಾ, ತಮ್ಮ ಸಲಿಂಗ ವಿವಾಹವನ್ನು ಬಹಿರಂಗಪಡಿಸಿಕೊಂಡಿದ್ದಾರೆ.
ಎಟ್ಟಾ ಮತ್ತು ಆಕೆಯ ಪ್ರೇಯಸಿ ಆಂಡಿ ಆಟಮನ್ ನವೆಂಬರ್ 8ರ ದಿನಾಂಕ ನಮೂದಿಸಿರುವ ತಮ್ಮ ಮದುವೆ ಪ್ರಮಾಣಪತ್ರದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಇಬ್ಬರೂ ಕೆನಡಾದಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದು, ಈಗ ಎಟ್ಟಾ ತವರಾದ ಹಾಂಕಾಂಗ್‌ನಲ್ಲಿ ಇದ್ದಾರೆ.

ಜಾಕಿ ಚಾನ್ ಮತ್ತು ಚೀನಾದ ಮಾಜಿ ಸುಂದರಿ ಎಲೈನ್ ಎನ್ಜಿ ಯಿ ಲೀ ಅವರಿಗೆ 1999ರಲ್ಲಿ ಜನಿಸಿದ ಏಕೈಕ ಮಗಳು ಎಟ್ಟಾ.
ತಾಯಿಯ ಆರೈಕೆಯಲ್ಲಿಯೇ ಎಟ್ಟಾ ಬೆಳೆದಿದ್ದರು. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿದ್ದವು.
2017ರಿಂದಲೂ ಎಟ್ಟಾ ಮತ್ತು ಆಟೊಮನ್ ಡೇಟಿಂಗ್ ನಡೆಸುತ್ತಿದ್ದರು. ತಮ್ಮ 'ಸಲಿಂಗಿ ಪೋಷಕರ' ಕಾರಣದಿಂದಾಗಿ ಒಂದು ತಿಂಗಳಿಂದ ಆಶ್ರಯ ಕಳೆದುಕೊಂಡಿದ್ದೇವೆ ಎಂದು ಈ ಜೋಡಿ ಕಳೆದ ಏಪ್ರಿಲ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಳಲು ತೋಡಿಕೊಂಡಿದ್ದರು.
ಇದಕ್ಕೆ ಟಿವಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದ ಜಾಕಿ ಚಾನ್ ಪತ್ನಿ ಯೀ ಲೀ, 'ತಂದೆಯ ಹೆಸರಿನಲ್ಲಿ ಹಣ ಗಳಿಕೆ ಮಾಡುವುದನ್ನು ಬಿಟ್ಟು ಕೆಲಸ ಹುಡುಕಿಕೊಳ್ಳಿ' ಎಂದು ಖಾರವಾಗಿ ಹೇಳಿದ್ದರು.
View this post on InstagramA post shared by Etta Zen (@ettazen) on
ಮಗಳ ಸಲಿಂಗ ಸಂಬಂಧದ ಬಗ್ಗೆ ತಮಗೇನೂ ಆಕ್ಷೇಪಣೆ ಇಲ್ಲ ಎಂದು ಜಾಕಿ ಚಾನ್ ಹೇಳಿದ್ದರು ಎಂಬುದಾಗಿ ಗೇ ಸ್ಟಾರ್ ನ್ಯೂಸ್ ವರದಿ ಮಾಡಿತ್ತು. ಆದರೆ, ಮಾಧ್ಯಮಗಳ ವರದಿ ಪ್ರಕಾರ, ಜಾಕಿ ಚಾನ್ ಆಕೆಯೊಂದಿಗೆ ನಂಟು ಕಡಿದುಕೊಂಡಿದ್ದರು.
ಜಾಕಿ ಚಾನ್ ಅವರ ಹಿರಿಯ ಮಗ ಜೇಸೀ ಚಾನ್ ಮಾದಕ ವಸ್ತು ಅಪರಾಧದಲ್ಲಿ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದ. ಅದು ತನ್ನ ಬದುಕಿನ ಆಘಾತಕಾರಿ ಮತ್ತು ಅವಮಾನಕಾರಿ ಸಂಗತಿ ಎಂದು ಚಾನ್ ನೋವು ತೋಡಿಕೊಂಡಿದ್ದರು.












Click it and Unblock the Notifications