ಯೇತಿ ಬಂತು ಯೇತಿ..! ಎಲ್ಲಾ ಸುಳ್ಳು ಎಂದ ನೇಪಾಳ ಸೇನೆ

ಕಠ್ಮಂಡು, ಮೇ 02: ಇತ್ತೀಚೆಗಷ್ಟೆ ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡವೊಂದು ಯೇತಿಯ ಹೆಜ್ಜೆ ಗುರುತನ್ನು ಪತ್ತೆ ಮಾಡಿದ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ನೇಪಾಳ ಸೇನೆ ಅಲ್ಲಗಳೆದಿದೆ.

"ಅದು ಯೇತಿಯಲ್ಲ, ಕರಡಿ" ಎಂದು ನೇಪಾಳ ಸೇನೆ ಹೇಳಿದ್ದು, ಯೇತಿ ಅಸ್ತಿತ್ವದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಈ ಮೂಲಕ ತೆರೆ ಬೀಳುವ ಸಾಧ್ಯತೆ ಇದೆ.

"ಭಾರತೀಯ ಸೇನೆ ಕೆಲವು ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿತ್ತು. ಈ ಬಗ್ಗೆ ನಾವು ಸ್ಥಳೀಯರನ್ನು ವಿಚಾರಿಸಿದಾಗ, ಅದು ಕರಡಿಯ ಹೆಜ್ಜೆ ಗುರುತು ಎಂದು ಸ್ಥಳೀಯರು ತಿಳಿಸಿದ್ದಾರೆ" ಎಂಡು ನೇಪಾಳ ಸೇನೆ ಹೇಳಿದೆ.

Its bear: Nepal Army said on rumours on Yeti

ನೇಪಾಳದ ಮಕಲು ಬೇಸ್ ಕ್ಯಾಂಪ್ ನಲ್ಲಿ ಏಪ್ರಿಲ್ 9 ರಂದು ಈ ಹೆಜ್ಜೆ ಗುರುತು ಪತ್ತೆಯಾಗಿತ್ತು ಎಂದು ಎಡಿಜಿ ಪಿಐ-ಇಂಡಿಯನ್ ಆರ್ಮಿ ಟ್ವೀಟ್ ಮಾಡಿತ್ತು. ಈ ಹೆಜ್ಜೆ ಗುರುತು 32x15 ಇಂಚು ಅಳತೆಯಷ್ಟು ದೈತ್ಯಗಾತ್ರದ್ದಾಗಿತ್ತು.

ಹಿಮ ಪ್ರದೇಶದಲ್ಲಿ ಕಂಡು ಬರುವ ಒಂದು ರೀತಿಯ ದೈತ್ಯ ಪ್ರಾಣಿ. ಇದು ಹಿಮ ಕರಡಿಯನ್ನೇ ಹೋಲುತ್ತದಾದರೂ, ದೈತ್ಯಾಕಾರವಾಗಿರುತ್ತದೆ. ಯೇತಿ ಎಂದರೆ ಕಲ್ಲು, ಶಿಲೆ, ಕರಡಿ ಎಂಬಿತ್ಯಾದಿ ಅರ್ಥವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+