Gaza War: ಗಾಜಾ ಪಟ್ಟಿ ಮೇಲೆ ಹಿಡಿತ ಸಾಧಿಸಲು ಹೊಸ ಸ್ಕೆಚ್ ಹಾಕಿದ ಇಸ್ರೇಲ್ & ಅಮೆರಿಕ?
ಇಸ್ರೇಲ್ & ಹಮಾಸ್ ನಡುವೆ ನಡೆದ ಭೀಕರ ರಣಕಾಳಗದಲ್ಲಿ ಗಾಜಾ ಪಟ್ಟಿ ಸಂಪೂರ್ಣವಾಗಿ ನಾಶವಾಗಿದೆ. ಕೆಲ ದಿನಗಳ ಹಿಂದಷ್ಟೇ ಅಲ್ಲಿ ಯುದ್ಧ ನಿಂತಿದ್ದು, ಜನರು ಈಗಷ್ಟೇ ನಿಟ್ಟುಸಿರು ಬಿಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಬಯಲಾಗಿದ್ದು, ಗಾಜಾ ಮೇಲೆ ಹಿಡಿತ ಸಾಧಿಸಲು ಇಸ್ರೇಲ್ ಮಾಡಿರುವ ಪ್ಲಾನ್ ಏನು ಗೊತ್ತಾ?
ಇಸ್ರೇಲ್ & ಅಮೆರಿಕ ನಡುವೆ ಗಟ್ಟಿಯಾದ ಸಂಬಂಧವಿದ್ದು, ಪ್ರತಿಯೊಂದು ವಿಚಾರದಲ್ಲೂ ಈ ಎರಡೂ ದೇಶಗಳು ಒಟ್ಟಾಗಿ ಹೋಗುತ್ತವೆ. ಅದೇ ರೀತಿ ಇದೀಗ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಸ್ಕೆಚ್ ಹಾಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ನಮ್ಮ ವಶಕ್ಕೆ ಬೇಕು ಅಂತಾ ಹೇಳಿದ ಕೆಲವೇ ದಿನಗಳಲ್ಲಿ, ಇಸ್ರೇಲ್ ಕೂಡ ಟ್ರಂಪ್ ಆಸೆ ಪೂರೈಸಲು ಹೊಸ ತಂತ್ರ ಹೂಡಿದೆ ಎಂಬ ಸುದ್ದಿ ಹಬ್ಬಿದೆ.

ಯುದ್ಧದ ಬಳಿಕ ಗಾಜಾ ವಶಕ್ಕೆ?
ಗಾಜಾ ಪಟ್ಟಿಯ ಪ್ರಜೆಗಳು, ಈಗಲೂ ಭೀಕರ ಯುದ್ಧದ ಭಯದಿಂದ ಹೊರಗಡೆ ಬಂದಿಲ್ಲ. 2023, ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರ ಪಡೆ ಕ್ಷಿಪಣಿ ದಾಳಿ ನಡೆಸಿ, ಇಸ್ರೇಲ್ ಸೇನೆ ಕೆಣಕುವ ಕೆಲಸ ಮಾಡಿತ್ತು. ಆ ನಂತರ ಗಾಜಾ ಮತ್ತು ಇಸ್ರೇಲ್ ಮಧ್ಯೆ ರಣಭೀಕರ ಯುದ್ಧ ಆರಂಭ ಆಗಿತ್ತು. ಹೀಗೆ ಯುದ್ಧ ಶುರುವಾದ ನಂತರ ಸಾಲು ಸಾಲು ಸಮಸ್ಯೆ ಎದುರಾಗಿಬಿಟ್ಟವು.
ಅಲ್ಲದೆ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಆತಂಕವೂ ಆವರಿಸಿತ್ತು. ಇದೇ ಕಾರಣಕ್ಕೆ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡಿ, ಕೆಲವು ದಿನಗಳ ಹಿಂದಷ್ಟೇ ಕದನ ವಿರಾಮ ಘೋಷಣೆ ಮಾಡಲಾಗಿದೆ. ಆದರೆ ಮತ್ತೆ ಈಗ ಅಲ್ಲಿ ಯುದ್ಧ ಭೀತಿ ಆವರಿಸಿದೆ. ಇಸ್ರೇಲ್ ಸೇನೆ ಇದೀಗ ಟ್ರಂಪ್ ಐಡಿಯಾ ಸಕ್ಸಸ್ ಮಾಡಲು ಬೇರೆಯದ್ದೇ ರಣತಂತ್ರ ಹೂಡಿದೆಯಂತೆ. ಈ ಬಗ್ಗೆ ಈಗಾಗಲೇ ಗಾಜಾ ನೆಲದಲ್ಲಿ ಇರುವ ಇಸ್ರೇಲ್ ಸೈನಿಕರಿಗೂ ತಿಳಿಸಲಾಗಿದೆ ಎಂಬ ಸುದ್ದಿ ಹಬ್ಬಿದೆ.
ಡೊನಾಲ್ಡ್ ಟ್ರಂಪ್ ಹೇಳಿದ್ದು ಏನು?
ಕೆಲವು ದಿನಗಳ ಹಿಂದಷ್ಟೇ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯುವ ಬಗ್ಗೆ ಮಾತನಾಡಿದ್ದರು ಟ್ರಂಪ್. ಕದನ ವಿರಾಮ ಘೋಷಣೆಯಾದ ನಂತರ ಇಸ್ರೇಲ್ ಗಾಜಾ ಪಟ್ಟಿಯನ್ನು ಅಮೆರಿಕ ಕೈಗೆ ಒಪ್ಪಿಸಲಿದೆ. ಆ ನಂತರ ಅಮೆರಿಕ ಸಂಪೂರ್ಣವಾಗಿ ಗಾಜಾ ಪಟ್ಟಿಯನ್ನು ಅಭಿವೃದ್ಧಿಪಡಿಸಿ ಬೆಳೆಸಲಿದೆ ಎಂದಿದ್ದರು ಟ್ರಂಪ್. ಅಲ್ಲದೆ ಈ ಕೆಲಸಕ್ಕಾಗಿ ಗಾಜಾ ನಿವಾಸಿಗಳನ್ನು ಹೊರಗಡೆ ಹಾಕುವ ಪ್ರಯತ್ನಗಳು ಕೂಡ ಸಾಗಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಈ ಚರ್ಚೆ ಇನ್ನಷ್ಟು ಕಾವು ಪಡೆಯುವ ಆತಂಕ ಆವರಿಸಿದೆ.












Click it and Unblock the Notifications