Israel War: ಗಾಜಾ ಮೇಲೆ ಇಸ್ರೇಲ್‌ನಿಂದ ಅಣುಬಾಂಬ್ ದಾಳಿ! ಸಚಿವ ಹೇಳಿದ್ದೇನು?
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದು, ಹಮಾಸ್ ಉಗ್ರರನ್ನು ನಾಶ ಮಾಡುವುದಾಗಿ ಇಸ್ರೇಲ್ ಪಣ ತೊಟ್ಟಿದೆ.
ಇದೆಲ್ಲದರ ನಡುವೆ ಗಾಜಾದ ಮೇಲೆ ಪರಮಾಣು ಬಾಂಬ್ ದಾಳಿ ಆಯ್ಕೆ ಬಗ್ಗೆ ಇಸ್ರೇಲ್ ಪಾರಂಪರಿಕ ಸಚಿವ ಅಮಿಹೈ ಎಲಿಯಾಹು ಹೇಳಿಕೆ ನೀಡಿದ್ದು ಜಗತ್ತನ್ನು ಬೆಚ್ಚಿ ಬೀಳಿಸಿತ್ತು, ಸಚಿವನ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಸ್ರೇಲ್ ಸರ್ಕಾರವು ಸಚಿವ ಅಮಿ ಹೈ ಎಲಿಯಾಹು ವಿರುದ್ಧ "ಮುಂದಿನ ಸೂಚನೆ ಬರುವವರೆಗೆ" ಅವರನ್ನು ಎಲ್ಲಾ ಸರ್ಕಾರಿ ಸಭೆಗಳಿಂದ ಅಮಾನತುಗೊಳಿಸಿದೆ.

ಸಚಿವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಚಿವ ಅಮಿ ಹೈ ಎಲಿಯಾಹು ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಹೇಳಿದ್ದೇನು?
"ಸಚಿವ ಅಮಿಹೈ ಎಲಿಯಾಹು ಅವರ ಹೇಳಿಕೆಗಳು ವಾಸ್ತವವನ್ನು ಆಧರಿಸಿಲ್ಲ. ಅಮಾಯಕರಿಗೆ ಹಾನಿಯಾಗದಂತೆ ಇಸ್ರೇಲ್ ಮತ್ತು ಐಡಿಎಫ್ ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ಗೆಲುವು ಸಿಗುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ," ಎಂದು ಇಸ್ರೇಲ್‌ನ ಪ್ರಧಾನಿ ಅಧಿಕೃತ ಹ್ಯಾಂಡಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಇಟಮಾರ್ ಬೆನ್ ಗ್ವಿರ್ ಅವರ ಬಲಪಂಥೀಯ ಪಕ್ಷದ ಎಲಿಯಾಹು ಅವರು, ಯುದ್ಧಕಾಲದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಂಡಿರುವ ಭದ್ರತಾ ಕ್ಯಾಬಿನೆಟ್‌ನ ಭಾಗವಾಗಿಲ್ಲ ಎಂದು ವರದಿಯಾಗಿದೆ. 'ರೇಡಿಯೊ ಕೋಲ್ ಬೆರಾಮಾ' ಸಂದರ್ಶನದಲ್ಲಿ ಗಾಜಾದ ಮೇಲೆ ಪರಮಾಣು ಬಾಂಬ್ ಹಾಕುವ ಸಾಧ್ಯತೆ ಬಗ್ಗೆ ಹೇಳಿಕೆ ನೀಡಿದ್ದರು.
ಗಾಜಾದಲ್ಲಿ ಬಂಧಿತರಾಗಿರುವ ಅಂದಾಜು 240 ಒತ್ತೆಯಾಳುಗಳ ಕುರಿತ ಪ್ರಶ್ನೆಯಲ್ಲಿ, ಸಚಿವರು "ಯುದ್ಧದಲ್ಲಿ, ನಾವು ಬೆಲೆಯನ್ನು ಪಾವತಿಸುತ್ತೇವೆ, ಒತ್ತೆಯಾಳುಗಳ ಜೀವನ ಏಕೆ ಸೈನಿಕರ ಪ್ರಾಣಕ್ಕಿಂತ ಹೆಚ್ಚು ಮುಖ್ಯ?" ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಲಿಯಾಹು, ಪರಮಾಣು ಬಾಂಬ್ ಕುರಿತ ಹೇಳಿಕೆಯು ರೂಪಕವಷ್ಟೇ ಎಂದು ಸ್ಪಷ್ಟನೆ ನೀಡಿದರು. ಆದರೆ ನಮಗೆ ಖಂಡಿತವಾಗಿಯೂ ಭಯೋತ್ಪಾದನೆಗೆ ಶಕ್ತಿಯುತ ಮತ್ತು ಸಮಂಜಸವಾದ ಪ್ರತಿಕ್ರಿಯೆ ಬೇಕು, ಭಯೋತ್ಪಾದನೆಯನ್ನು ಎದುರಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳು ಬಳಸಬಹುದಾದ ಏಕೈಕ ಸೂತ್ರ ಇದಾಗಿದೆ. ಅದೇ ಸಮಯದಲ್ಲಿ, ಅಪಹರಣಕ್ಕೊಳಗಾದವರನ್ನು ಸುರಕ್ಷಿತವಾಗಿ ಮತ್ತು ಸುರಕ್ಷಿತವಾಗಿ ಹಿಂದಿರುಗಿಸಲು ಇಸ್ರೇಲ್ ರಾಜ್ಯವು ಎಲ್ಲವನ್ನೂ ಮಾಡಲು ಬದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಅವರು ಎಕ್ಸ್‌ನಲ್ಲಿ ನಲ್ಲಿ ಬರೆದಿದ್ದಾರೆ.
ಅಕ್ಟೋಬರ್ 7 ರಂದು ತನ್ನ ಹೋರಾಟಗಾರರು ನಡೆಸಿದ ದಾಳಿಯಲ್ಲಿ ಕನಿಷ್ಠ 1,400 ಜನರು ಸಾವನ್ನಪ್ಪಿದ ನಂತರ ಇಸ್ರೇಲ್ ಗಾಜಾದ ಹಮಾಸ್ ಆಡಳಿತಗಾರರ ವಿರುದ್ಧ ಭಾರಿ ಪ್ರತೀಕಾರದ ದಾಳಿಯನ್ನು ಮಾಡುತ್ತಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿಗಳ ಪ್ರಕಾರ, ಗಾಜಾದಲ್ಲಿ ಇದುವರೆಗೆ ಕನಿಷ್ಠ 9,488 ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications