ಗಾಜಾದಲ್ಲಿ ಹಮಾಸ್ ಕಮಾಂಡರ್ ಹತ್ಯೆ, ಮಹತ್ವದ ಮಾಹಿತಿ ನೀಡಿದ ಇಸ್ರೇಲ್!
ಗಾಜಾ
ಪಟ್ಟಿಯಲ್ಲಿ ಭೀಕರವಾಗಿ ಆರಂಭವಾಗಿರುವ ವಾರ್ ಮತ್ತಷ್ಟು ದೊಡ್ಡ ಹಂತಕ್ಕೆ ತಲುಪಿ, ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡ ಅವಶೇಷ ಮತ್ತು ಶವಗಳ ನಡುವೆ ಜನರು ಜೀವನ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವ ಇಸ್ರೇಲಿ ಸೇನೆ, ಇದೀಗ ಮತ್ತೆ ಒಬ್ಬ ಹಮಾಸ್ ಕಮಾಂಡರ್ ಕಥೆ ಮುಗಿಸಿದೆ. ಗಾಜಾ ಪಟ್ಟಿಯಲ್ಲಿ ವಾಯುದಾಳಿ & ಭೂ ದಾಳಿ ಮೂಲಕ ಶತ್ರುಗಳನ್ನ ಇಸ್ರೇಲ್ ಮುಗಿಸುತ್ತಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಇಸ್ರೇಲ್
& ಪ್ಯಾಲೆಸ್ತೀನ್ ಕದನ ವಿರಾಮ ಉಲ್ಲಂಘನೆ ಮುಂದುವರಿದ ಹಿನ್ನೆಲೆ ಜಾಗತಿಕ ಮಟ್ಟದ ತಲೆನೋವಾಗಿ ಪರಿಣಮಿಸಿದೆ ಈ ತಿಕ್ಕಾಟ. ಇದೇ ಸಮಯದಲ್ಲಿ ಗಾಜಾದಲ್ಲಿ ಸ್ಥಳೀಯ ಹಮಾಸ್ ಕಮಾಂಡರ್ ಒಬ್ಬನ ಹತ್ಯೆ ಮಾಡಿದ್ದೀವಿ ಎಂದಿದೆ ಇಸ್ರೇಲ್ ಮಿಲಿಟರಿ. ಇದೀಗ ಹತ್ಯೆ ಆಗಿರುವ ಹಮಾಸ್ ಕಮಾಂಡರ್ ಹೆಸರು ಅಲಾ ಅಲ್-ಹದಿದಿ ಎಂದು ಗುರುತಿಸಲಾಗಿದೆ. ಈತ ಹಮಾಸ್‌ನ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಸರಬರಾಜು ಮುಖ್ಯಸ್ಥನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಎನ್ನಲಾಗಿದೆ. ಇಸ್ರೇಲ್ ಮಿಲಿಟರಿ ಹಲವು ದಿನಗಳಿಂದಲೂ ಈತನಿಗಾಗಿ ಹುಡುಕಾಟ ನಡೆಸುತ್ತಾ ಇತ್ತು, ಇದೀಗ ದಿಢೀರ್ ಹತ್ಯೆ ಮಾಡಲಾಗಿದ್ದು ಮಾಹಿತಿ ನೀಡಿದೆ ಇಸ್ರೇಲ್ ಸೇನೆ. id='are-slot-2' class='oiad oi-axt oiadv'>












Click it and Unblock the Notifications