Hamas Leader: ಹಮಾಸ್ ಮುಖ್ಯಸ್ಥನ ಸಾವಿಗೆ ಕಾರಣ ಬಿಚ್ಚಿಟ್ಟ ಇಸ್ರೇಲ್!
ಹಮಾಸ್ & ಇಸ್ರೇಲ್ ನಡುವೆ ಘೋರ ಕಾಳಗ ನಡೆಯುತ್ತಿದ್ದು, ಈ ಇಬ್ಬರ ನಡುವಿನ ತಿಕ್ಕಾಟ ಕೊನೆಗೆ ಗಾಜಾ ಪಟ್ಟಿ ನಗರದ ಸರ್ವನಾಶ ಮಾಡುತ್ತಿದೆ. ಹೀಗೆ ಗಾಜಾ & ಇಸ್ರೇಲ್ ನಡುವಿನ ಫೈಟಿಂಗ್ ಕಾರಣಕ್ಕೆ 2023ರ ಅಕ್ಟೋಬರ್ ತಿಂಗಳಲ್ಲಿ ಘೋರ ಯುದ್ಧ ಆರಂಭವಾಗಿತ್ತು. ಈ ಯುದ್ಧದ ಪರಿಣಾಮ ಹತ್ತಾರು ಸಾವಿರ ಜನರು ಈಗಾಗಲೇ ಬಲಿಯಾಗಿದ್ದಾರೆ ಎಂಬ ಆರೋಪ ಕೂಡ ಈಗಾಗಲೇ ಇದೆ. ಈ ಸಮಯದಲ್ಲೇ ಹಮಾಸ್ ಮುಖ್ಯಸ್ಥನ ಸಾವಿಗೆ ಕಾರಣ ಬಿಚ್ಚಿಟ್ಟ ಇಸ್ರೇಲ್ ರಕ್ಷಣಾ ಸಚಿವ ಹೇಳಿದ್ದೇನು ಗೊತ್ತೆ?
ಹೌದು, 2024ರ ಜುಲೈ ತಿಂಗಳಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯನ್ನ ಮಾಡಲಾಗಿತ್ತು. ಇರಾನ್ ನೆಲದಲ್ಲಿ ನಡೆದಿದ್ದ ಈ ಘಟನೆ ಭಾರಿ ದೊಡ್ಡ ಸಂಚಲನ ಸೃಷ್ಟಿಸಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಹೀಗಿದ್ದಗಲೇ ಇದೀಗ ಇಸ್ರೇಲ್ ಈ ಹತ್ಯೆ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದು, ಮತ್ತಷ್ಟು ಸಂಚಲನ ಸೃಷ್ಟಿಯಾಗಿದೆ. ಹಾಗಾದ್ರೆ, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ ತಿಳಿಯೋಣ ಬನ್ನಿ.

ಹಮಾಸ್ ನಾಯಕನ ಕೊಂದಿದ್ದು ಇಸ್ರೇಲ್!
ಹೌದು, ಇದೀಗ ಹಮಾಸ್ ನಾಯಕನ ಹತ್ಯೆಯ ಸತ್ಯ ಬಟಾಬಯಲಾಗಿದೆ. ಸ್ವತಃ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಈ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ. ಹೌತಿ ಸೇರಿ ಹಲವು ಬಂಡುಕೋರರು ಇಸ್ರೇಲ್ ವಿರುದ್ಧ ದಾಳಿ ಮಾಡುತ್ತಾ, ಇಸ್ರೇಲ್ ಸೇನೆಯನ್ನ ಈಗ ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇರಾನ್ ನೆಲದಲ್ಲಿ ಸಾಯಲು ಯಾರು ಕಾರಣ? ಎಂಬ ಕುತೂಹಲದ ಪ್ರಶ್ನೆಗೂ ಉತ್ತರಿಸಿದ್ದಾರೆ. ಈ ಹತ್ಯೆಯಲ್ಲಿ ಇಸ್ರೇಲ್ ಬೆಂಬಲ ಸ್ಪಷ್ಟವಾಗಿದೆ.
ಇಸ್ಮಾಯಿಲ್ ಹನಿಯೆಹ್ ಸಾವಿನಲ್ಲಿ....
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇರಾನ್ ನೆಲದಲ್ಲಿ ಬರ್ಬರವಾಗಿ ಹತ್ಯೆಯಾದ ಸುದ್ದಿ ಕೆಲವು ತಿಂಗಳ ಹಿಂದೆ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೆ ಇರಾನ್ ಸೇನೆ & ಇಸ್ರೇಲ್ ನಡುವೆ ಯುದ್ಧ ನಡೆಯುವ ಭಯ ಹುಟ್ಟಿಸಿತ್ತು. ಆದರೆ ಇಲ್ಲಿಯವರೆಗೂ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಸಾವಿನ ಬಗ್ಗೆ ಇಸ್ರೇಲ್ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಈ ಸಮಯದಲ್ಲಿ, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಸಾವಿನಲ್ಲಿ ಇಸ್ರೇಲ್ ಪಾತ್ರವನ್ನ ಒಪ್ಪಿಕೊಳ್ಳಲಾಗಿದೆ. ಈ ಮೂಲಕ ಹೌಥಿ ಬಂಡುಕೋರರ ವಿರುದ್ಧ ಇಸ್ರೇಲ್ ನೇರವಾಗಿಯೇ ಗುಡುಗಿದೆ!












Click it and Unblock the Notifications