Gaza War: ಗಾಜಾ ಪಟ್ಟಿ ವಶಕ್ಕೆ ಪಡೆಯುವ ಬೆದರಿಕೆ ಹಾಕಿದ ಇಸ್ರೇಲ್!
ಇಸ್ರೇಲ್ & ಹಮಾಸ್ ನಡುವೆ ಮತ್ತೊಂದು ರೌಂಡ್ ಯುದ್ಧ ಶುರುವಾಗಿದ್ದು, ಇಬ್ಬರ ಮಧ್ಯೆ ಇದೀಗ ಹೊತ್ತಿಕೊಂಡಿರುವ ಬೆಂಕಿ ಇಡೀ ಗಾಜಾ ಪಟ್ಟಿಯನ್ನೇ ಬಲಿಪಡೆಯುವ ಆತಂಕ ಈ ಸಮಯದಲ್ಲಿ ಆವರಿಸಿದೆ. ಗಾಜಾ ಪಟ್ಟಿಯಲ್ಲಿ ಯುದ್ಧ ನಿಂತು ಶಾಂತಿ ನೆಲೆಸಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೆ ದಿಢೀರ್ ತಿಕ್ಕಾಟ ಜೋರಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಆರಂಭ ಮಾಡಿದ್ದಾರೆ. ಇಂತಹ ಸಮಯದಲ್ಲೇ ಇಸ್ರೇಲ್ ಎಚ್ಚರಿಕೆ ಸಂದೇಶ ರವಾನಿಸಿದೆ.
ಗಾಜಾ ಪಟ್ಟಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪದೇ ಪದೇ ಇಸ್ರೇಲ್ & ಹಮಾಸ್ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಆದರೆ 2023ರ ಅಕ್ಟೋಬರ್ ತಿಂಗಳಲ್ಲಿ ದಿಢೀರ್ ಇಬ್ಬರ ಮಧ್ಯೆ ಘೋರ ಯುದ್ಧ ಅರಂಭವಾಗಿತ್ತು. ಈ ಯುದ್ಧವನ್ನು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಇಸ್ರೇಲ್ ಮಿಲಿಟರಿ, ಇತ್ತೀಚೆಗಷ್ಟೇ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ ಹೀಗೆ ಯುದ್ಧ ನಿಂತು ಕೆಲವೇ ದಿನಗಳಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದಿದೆ. ಹೀಗೆ ದಿಢೀರ್ ಕಾಡ್ಗಿಚ್ಚೇ ಹೊತ್ತಿಕೊಂಡಿದೆ.

ಗಾಜಾ ವಶಕ್ಕೆ ಇಸ್ರೇಲ್ ನಿರ್ಧಾರ!
ಹೌದು, ಈಗಲೂ ಹಮಾಸ್ ಬಳಿ ಇಸ್ರೇಲ್ ಪ್ರಜೆಗಳು ಒತ್ತೆಯಾಳುಗಳ ರೂಪದಲ್ಲಿ ಇದ್ದಾರೆ. ಇವರನ್ನು ಬಿಡುಗಡೆ ಮಾಡದೇ ಹೋದರೆ ಪರಿಣಾಮ ನೆಟ್ಟಗೆ ಇರಲ್ಲ ಅಂತಾ ಪದೇ ಪದೇ ಇಸ್ರೇಲ್ ಹೇಳುತ್ತಲೇ ಇದೆ. ಇಂತಹ ಪರಿಸ್ಥಿತಿ ಇದ್ದಾಗಲೇ ಮತ್ತೆ ಯುದ್ಧ ಕೂಡ ಆರಂಭವಾಗಿ ಯುದ್ಧದ ರಕ್ತಪಾತ ಹೆಚ್ಚಾಗುತ್ತಿದೆ.
ಇದೇ ಸಮಯದಲ್ಲಿ ಗಾಜಾ ಪಟ್ಟಿ ವಶಕ್ಕೆ ಪಡೆಯುವ ಬೆದರಿಕೆ ಹಾಕಿರುವ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದ ಸೇನೆಯನ್ನ ನಿಯೋಜನೆ ಮಾಡುತ್ತಿದೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧವು ನಡೆಯುವಾಗಲೇ, ಇನ್ನೊಂದು ಕಡೆ ಈ ರೀತಿ ಇಸ್ರೇಲ್ ಸೇನೆ & ಗಾಜಾ ನಡುವೆ ದೊಡ್ಡ ಕಲಹ ಏರ್ಪಟ್ಟಿದೆ.
ಹಮಾಸ್ ಕಡೆಯಿಂದಲೂ ಮರುದಾಳಿ
ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ಯುದ್ಧ ಶುರುವಾಗಿವೆ. ಅದ್ರಲ್ಲೂ ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಘನಘೋರ ಯುದ್ಧ ಕ್ಷಣಕ್ಷಣಕ್ಕೂ ಮಾನವೀಯತೆ ಸಾಯಿಸುವ ಹಂತಕ್ಕೆ ಹೋಗುತ್ತಿದೆ. ಈ ಸಮಯದಲ್ಲಿ ಹಮಾಸ್ ಕೂಡ ರಿವೇಂಜ್ ತೆಗೆದುಕೊಳ್ಳಲು ಸಜ್ಜಾಗಿ, ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿರುವ ಹಠಾತ್ ದಾಳಿಗೆ ಪ್ರತೀಕಾರವಾಗಿ ವಾಣಿಜ್ಯ ನಗರಿ ಟೆಲ್ ಅವಿವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಹೀಗಾಗಿ ಎರಡೂ ಕಡೆಯಿಂದ ಇದೀಗ ದಾಳಿ & ಪ್ರತಿದಾಳಿ ಜೋರಾಗಿದೆ.












Click it and Unblock the Notifications