ಇಸ್ರೇಲ್ ಇತಿಹಾಸದಲ್ಲೇ ಪ್ರಧಾನಿ ವಿರುದ್ಧ ಮೊದಲ ಭ್ರಷ್ಟಾಚಾರ ಕೇಸ್

ಜೆರುಸಲೇಮ್, ನವೆಂಬರ್ 22: ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದು ದಾಖಲಾಗಿದೆ.

ಉಸ್ತುವಾರಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ, ಮೋಸ, ನಂಬಿಕೆ ದ್ರೋಹ ಪ್ರಕರಗಳು ದಾಖಲಾಗಿದೆ. ದೇಶದ ರಾಜಕೀಯ ಅಸ್ಥಿರತೆ ನಡುವೆ ಈ ಬೆಳವಣಿಗೆಯು ತೀವ್ರ ಕುತೂಹಲ ಮೂಡಿಸಿದೆ.

ಕಳೆದ ಎರಡು ಮೂರು ವರ್ಷದಿಂದ ನೇತನ್ಯಾಹು ವಿರುದ್ಧ ಮೂರು ಭ್ರಷ್ಟಾಚಾರ ಪ್ಕರಣಗಳ ತೂಗುಗತ್ತಿ ನೇತಾಡುತ್ತಿತ್ತು.

benjamin

ಇಸ್ರೇಲ್ ಕಾನೂನು ಇಲಾಖೆ ಆಂತರಿಕ ವಿಚಾರಣೆ ಹಾಗೂ ಅಟಾರ್ನಿ ಜನರಲ್ ಪರಿಶೀಲನೆ ಬಳಿಕ ನೇತನ್ಯಾಹು ವಿರುದ್ಧ ತನಿಖೆಗೆ ಹಸಿರು ನಿಶಾನೆ ನೀಡಲಾಗಿದೆ.

ಮೂರು ಪ್ರಕರಣಗಳಲ್ಲಿ ನೇತನ್ಯಾಹು ಹಾಗೂ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಉದ್ದಿಮೆದಾರರಿಂದ ಸಾವಿರಾರು ಡಾಲರ್ ಮೌಲ್ಯದ ಐಷಾರಾಮಿ ವಸ್ತುಗಳನ್ನು ಹಾಗೂ ಲಂಚವನ್ನು ಪಡೆದಿದ್ದಾರೆ ಎಂಬ ಆರೋಪವನ್ನು ಅಟಾರ್ನಿ ಜನರಲ್ ಹೊರಿಸಿದ್ದಾರೆ.

ದೇಶದಲ್ಲಿ ಅತ್ಯಧಿಕ ಅವಧಿಗೆ ಪ್ರಧಾನಿಯಾದ ದಾಖಲೆ ಹೊಂದಿದ್ದ ಬೆಂಜಮಿನ್ ನೇತನ್ಯಾಹು ಈಗ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ದೇಶದಲ್ಲಿ ಸತತ ಎರಡನೇ ಚುನಾವಣೆ ಬಳಿಕವೂ ನೇತನ್ಯಾಹು ಸೇರಿ ಯಾವುದೇ ಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ರಾಜಕೀಯ ಅಸ್ಥಿರತೆ ಹಿನ್ನಲೆಯಲ್ಲಿ ಸತತ ಮೂರನೇ ಚುನಾವಣೆಯತ್ತ ಹೆಜ್ಜೆಯಿಡುತ್ತಿದೆ. ಈ ಸಂದರ್ಭದಲ್ಲಿ ನೇತನ್ಯಾಹು ವಿರುದ್ಧದ ಭ್ರಷ್ಟಾಚಾರ ಪ್ರಕರಣವು ಆಡಳಿತಾರೂಢ ಲಿಕುಡ್ ಪಕ್ಷ ಹಾಗೂ ಪ್ರಧಾನಿ ನೇತನ್ಯಾಹುಗೆ ಭಾರಿ ಹಿನ್ನಡೆಯಾಗಿದೆ.

ಪ್ರತಿಪಕ್ಷ ಬ್ಲ್ಯೂ ಅಂಡ್ ವೈಟ್ ನಾಯಕರು ನೇತನ್ಯಾಹು ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನೇ ಚುನಾವಣೆ ವಿಚಾರವನ್ನಾಗಿ ಮಾಡಿಕೊಂಡ ಸಂದರ್ಭದಲ್ಲೇ ಈ ಪ್ರಕರಣ ದಾಖಲಾಗಿರುವುದು ಅವರ ಹೋರಾಟಕ್ಕೆ ನೈತಿಕ ಗೆಲುವು ದೊರೆತಂತಾಗಿದೆ. ಮುಂದಿನ ಚುನಾವಣೆಗೆ ದಾರಿ ಇನ್ನಷ್ಟು ಸುಗಮವಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+