Israel–Hamas war: ನಾಲ್ಕೈದು ದಿನದಲ್ಲಿ ಖಾಲಿಯಾಗಲಿವೆ ಗಾಜಾದ ಅಂಗಡಿಗಳು- ಆಹಾರಕ್ಕೂ ಹಾಹಾಕಾರ, ಇದು ಇಸ್ರೇಲ್‌ ಪ್ರತಿಕಾರ

ಗಾಜಾ, ಅಕ್ಟೋಬರ್‌ 17: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಉಪಟಳ ಮುಂದುವರಿದಿದೆ. ಉತ್ತರ ಗಾಜಾದಲ್ಲಿ ನೆಲದ ಮೂಲಕ ದಾಳಿಯನ್ನು ನಡೆಸಲು ಇಸ್ರೇಲ್‌ ಮುಂದಾಗಿದೆ. ದುರಂತವೆಂದರೆ, ಮುಂದಿನ ನಾಲ್ಕೈದು ದಿನಗಳಲ್ಲಿ ಗಾಜಾದಲ್ಲಿನ ಅಂಗಡಿಗಳಲ್ಲಿ ಆಹಾರ ಪದಾರ್ಥಗಳು ಖಾಲಿಯಾಗಲಿವೆ ಎಂದು ವರದಿಯಾಗಿದೆ.

ವರ್ಡ್‌ ಫುಡ್‌ ಪ್ರೊಗ್ರಾಮ್‌ ಪ್ರಕಾರ, ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ದಿನಸಿ ಹಾಗೂ ಆಹಾರ ಪದಾರ್ಥಗಳು ಖಾಲಿಯಾಗಲಿವೆ. ಗಾಜಾ ಪಟ್ಟಿಯು ತೀವ್ರ ಆಹಾರದ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ತಿಳಿದುಬಂದಿದೆ.

ಗೋಧಿ ಮತ್ತು ಹಿಟ್ಟಿನ ಸಂಗ್ರಹಗಳು ವೇಗವಾಗಿ ಖಾಲಿಯಾಗುತ್ತಿವೆ. ಮೊಟ್ಟೆಗಳು, ಬ್ರೆಡ್ ಮತ್ತು ತರಕಾರಿಗಳ ಪೂರೈಕೆಯು ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

israel-hamas-war

ತುರ್ತು ಚಿಕಿತ್ಸೆ, ಆಘಾತ ಮತ್ತು ಶಸ್ತ್ರಚಿಕಿತ್ಸಾ ಸಾಧನಗಳು ಹಾಗೂ ರಕ್ತನಿಧಿಗಳು ಸೇರಿದಂತೆ ವೈದ್ಯಕೀಯ ಸರಬರಾಜುಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಎಂದು ತಿಳಿದುಬಂದಿದೆ.

ವಿದ್ಯುತ್ ವ್ಯತ್ಯಯ ಮತ್ತು ಜನರೇಟರ್‌ಗಳಿಗೆ ಇಂಧನ ಪೂರೈಕೆ ಕಡಿಮೆಯಾಗುತ್ತಿರುವುದು ರೋಗಿಗಳನ್ನು ಅಪಾಯಕ್ಕೆ ತಳ್ಳುತ್ತಿದೆ.

ವಿಶ್ವಸಂಸ್ಥೆ ನಡೆಸುವ ಆಹಾರ ವಿತರಣಾ ಕೇಂದ್ರಗಳನ್ನು ಮುಚ್ಚುವುದರಿಂದ ಸುಮಾರು 5,00,000 ಜನರು ಆಹಾರ ಪಡಿತರ ಕೇಂದ್ರಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈಗ ಗಾಜಾ ಪಟ್ಟಿಯಲ್ಲಿ ವಿದ್ಯುತ್‌ ಹಾಗೂ ನೀರಿನ ಅಭಾವ ಇರುವುದು ವರದಿಯಾಗಿದೆ. ಇದಕ್ಕೆ ವಿಶ್ವಸಂಸ್ಥೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

ಉತ್ತರ ಗಾಜಾವನ್ನು ತೊರೆಯುವಂತೆ ಹತ್ತು ಲಕ್ಷ ಜನರಿಗೆ ಇಸ್ರೇಲ್‌ ಆದೇಶಿಸಿದೆ. ಉತ್ತರ ಗಾಜಾ ಗಡಿಗಳಲ್ಲಿ ಇಸ್ರೇಲ್‌ ಸೇನೆಯು ಯುದ್ಧ ಟ್ಯಾಂಕರ್‌ಗಳು ಹಾಗೂ ಕ್ಷಿಪಣಿಗಳನ್ನು ತಂದು ನಿಲ್ಲಿಸಿದೆ.

ದಕ್ಷಿಣ ಗಾಜಾದ ಮೇಲೆಯೂ ಇಸ್ರೇಲ್‌ ದಾಳಿ ನಡೆಸಿದೆ ಎಂದು ಹಮಾಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ಗೆ ಆಘಾತ ನೀಡುತ್ತೇವೆಂದ ಇರಾನ್‌

ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧಗಳನ್ನು ನಿಲ್ಲಿಸದೇ ಹೋದರೆ, ಇಸ್ರೇಲ್‌ಗೆ ಮತ್ತೊಂದು ಆಘಾತ ನೀಡುತ್ತೇವೆ ಎಂದು ಇರಾನ್‌ ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಇರಾನ್‌ ಕಮಾಂಡರ್, ಗಾಜಾದಲ್ಲಿ ಇಸ್ರೇಲ್‌ ದುಷ್ಕೃತ್ಯಗಳನ್ನು ಮೆರೆಯುತ್ತಿದೆ. ಇದನ್ನು ನಿಲ್ಲಿಸದಿದ್ದರೆ, ಇಸ್ರೇಲ್‌ ಮತ್ತೊಂದು ಆಘಾತವನ್ನು ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಫಾ ಮತ್ತು ಖಾನ್ ಯೂನಿಸ್‌ನಲ್ಲಿ ಮೂರು ಮನೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ರಾತ್ರಿಯಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಗಳಿಂದ ಸಾವಿನ ಸಂಖ್ಯೆ 71 ಕ್ಕೆ ಏರಿದೆ ಎಂದು ವರದಿಯಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಬುಧವಾರ ಇಸ್ರೇಲ್‌ಗೆ ಭೇಡಿ ನೀಡಲಿದ್ದಾರೆ. ಈ ವೇಳೆ, ಇಸ್ರೇಲ್‌ಗೆ ನೈತಿಕ ಬಲವನ್ನು ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+