Israel-Hamas: ಇಸ್ರೇಲ್ ಮೊಂಡುತನ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತೀವ್ರ ಮುಖಭಂಗ
ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಯುದ್ಧ ವಿರಾಮ ಘೋಷಣೆಯಾಗಿ ಇನ್ನೇನು ಯುದ್ಧ ನಿಂತಿತ್ತು ಎನ್ನುವಾಗಲೇ ಗಾಜಾದ ಮೇಲೆ ಇಸ್ರೇಲ್ ಮತ್ತೆ ದಾಳಿ ಮಾಡಿದೆ. ಈ ಮೂಲಕ ಅಮೆರಿಕಗೆ ಭಾರೀ ದೊಡ್ಡ ಮುಖಭಂಗ ಮಾಡಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗೆದ್ದ ಮೇಲೆ ಇನ್ನೇನು ಚುನಾವಣೆ ನಿಂತೇ ಹೋಗಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ. ಈಗಲೂ ಇಸ್ರೇಲ್ ಹಾಗೂ ಹಮಾಸ್‌ನ ನಡುವೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಬೈಡನ್ ಹಾಗೂ ಟ್ರಂಪ್ ಅವರು ಬೆನ್ನು ತಟ್ಟಿಕೊಂಡ ಬೆನ್ನಲ್ಲೇ ಇಸ್ರೇಲ್ ಮತ್ತೆ ಗಾಜಾದ ಮೇಲೆ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದೆ.
ಇಸ್ರೇಲ್ ಹಾಗೂ ಪ್ಯಾಲೆಸ್ಟೀನಿಯನ್ ಹಮಾಸ್ ಗುಂಪು ಗಾಜಾದಲ್ಲಿ ಯುದ್ಧ ವಿರಾಮಕ್ಕೆ ಮುಂದಾಗಿದ್ದವು. ಇದರ ಬೆನ್ನಲ್ಲೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿತಿ ವರ್ಕ್‌ಔಟ್ ಆಗಿದೆ ಎನ್ನುವಾಗಲೇ ಮತ್ತೆ ಯುದ್ಧ ನಡೆದಿದೆ. ಈ ಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಯುದ್ಧ ನಡೆಯುತ್ತಿದೆ. ಯುದ್ಧದಲ್ಲಿ 46,700ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.

ಯುದ್ಧವನ್ನು ಬಳಸಿಕೊಡಿದ್ದ ಟ್ರಂಪ್: ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಉದ್ದಕ್ಕೂ ಅಮೆರಿಕ ನೂನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಹಾಗೂ ಹಮಾಸ್‌ನ ನಡುವಿನ ಯುದ್ಧ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು ಅಧಿಕಾರಕ್ಕೆ ಬಂದ ಕೂಡಲೇ ಇಸ್ರೇಲ್ ಯುದ್ಧವನ್ನು ನಿಲ್ಲಿಸುವುದಾಗಿ ಅವರು ಹೇಳಿದ್ದರು. ಕಳೆದ ಬಾರಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಈ ಕಾರಣದಿಂದಲೂ ಹಿನ್ನಡೆ ಉಂಟಾಗಿತ್ತು. ಇದೇ ಕಾರಣಕ್ಕೆ ಈ ಬಾರಿ ಅನೇಕ ಅರಬ್ ಅಮೆರಿಕನ್ ಮತದಾರರು ರಿಪಬ್ಲಿಕ್ ಪಾರ್ಟಿಗೆ ಬೆಂಬಲ ಸೂಚಿಸಿದ್ದರು. ಅಮೆರಿಕದ ಜೋ ಬೈಡನ್ ಸರ್ಕಾರವು ಇಸ್ರೇಲ್ ಯುದ್ಧಕ್ಕೆ ಬೆಂಬಲ ನೀಡುತ್ತಿದೆ ಎನ್ನುವುದು ಈ ಮತದಾರರ ಆರೋಪವಾಗಿತ್ತು.
ಬೆನ್ನು ತಟ್ಟಿಕೊಳ್ಳುತ್ತಿದೆ ಅಮೆರಿಕ: ಇನ್ನು ಈ ಯುದ್ಧ ಸಂಧಾನದ ವಿಷಯವಾಗಿ ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಯುದ್ಧ ನಿಂತಿಲ್ಲ ಎನ್ನುವ ವರದಿಗಳು ಬರುತ್ತಿದ್ದು ಅಮೆರಿಕಗೆ ಭಾರೀ ದೊಡ್ಡ ಮುಖಭಂಗವಾದಂತೆ ಆಗಿದೆ.

ಅಮೆರಿಕದ ನಿಯೋಜಿತ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಇನ್ನು ಕೆಲವೇ ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಪೂರ್ಣ ಪ್ರಮಾಣದ ಅಧಿಕಾರ ಸ್ವೀಕರಿಸುವ ಮುನ್ನವೇ ಯುದ್ಧ ನಿಲ್ಲಿಸಲಾಗುತ್ತಿದೆ. ಇದರ ಕ್ರೆಡಿಟ್ ನನಗೆ ಸಿಗಬೇಕು ಅಂತ ಡೊನಾಲ್ಡ್ ಟ್ರಂಪ್ ಅವರು ಜಂಭಕೊಚ್ಚಿಕೊಳ್ಳುವ ಸಮಯದಲ್ಲೇ ಇಸ್ರೇಲ್ ಚಮಕ್ ಕೊಟ್ಟಿದೆ. ಯುದ್ಧ ಸಂಧಾನಕ್ಕೆ ಒಪ್ಪಿಕೊಂಡು ಮತ್ತೆ ಯಾಕೆ ಇಸ್ರೇಲ್ ದಾಳಿ ಮುಂದುವರಿಸಿದೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಒಟ್ಟಾರೆ ಇಸ್ರೇಲ್ ತನ್ನ ನಿರ್ಧಾರವನ್ನು ಬದಲಾಯಿಸುತ್ತಿರುವುದು ಅಥವಾ ಯುದ್ಧ ಮುಂದುವರಿಸುತ್ತಿರುವುದನ್ನು ನೋಡಿದರೆ ಸದ್ಯಕ್ಕೆ ಯುದ್ಧ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧ ನಿಲ್ಲಿಸಿಯೇ ಬಿಟ್ಟಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಅಮೆರಿಕಗೆ ತೀವ್ರ ಮುಖಭಂಗವಾಗಿರುವುದಂತೂ ನಿಜ.












Click it and Unblock the Notifications