ಇಸ್ರೇಲ್ ಚುನಾವಣೆ Exit Poll: ಮಾಜಿ ಪ್ರಧಾನಿ ನೆತನ್ಯಾಹು ಮತ್ತೆ ಅಧಿಕಾರಕ್ಕೆ?
ಟೆಲ್ ಅವೀವ್, ನ.2: ಇಸ್ರೇಲ್ ಸಾರ್ವತ್ರಿಕ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದೆ. ಇತ್ತೀಚಿನ ವರದಿಗಳ ಪ್ರಕಾರ ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಮತ್ತೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ.
ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ನೆನಪಿರಬಹುದು. ಇಂಥ ಅಪರೂಪದ ಘಟನೆ ಎದುರಿಸಿ ನಂತರ ಬೆಂಜಮಿನ್ ನೆತನ್ಯಾಹು ಅಧಿಕಾರ ಕಳೆದುಕೊಂಡಿದ್ದರು.
ವಿಚಾರಣೆ ಎದುರಿಸಿದ್ದರೂ ಬೆಂಜಮಿನ್ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರು. ಬೆನ್ನಿ ಗಾಂಟ್ಜ್ ಜೊತೆ 18 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡು ಸರ್ಕಾರ ಉಳಿಸಿಕೊಂಡಿದ್ದರು, ರಾಜೀನಾಮೆ ನೀಡದೆ ವಿಚಾರಣೆ ಎದುರಿಸಿದ್ದರು. ಇನ್ನೊಂದೆಡೆ, ಸಂಸತ್ತಿನಲ್ಲಿ 120 ಸದಸ್ಯರು ಲೇಬರ್ ಪಾರ್ಟಿಯ ಮಾಜಿ ಅಧ್ಯಕ್ಷ, ವಿಪಕ್ಷ ನಾಯಕ ಹೆರ್ಜೋಗ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಸಮೀಕ್ಷೆ ವರದಿ ಏನು ಹೇಳುತ್ತಿದೆ?:
ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ಮಿತ್ರಪಕ್ಷಗಳು 120-ಸೀಟುಗಳ ನೆಸೆಟ್(Knesset)ನಲ್ಲಿ ಬಹುಮತವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ. ಆದರೆ, ಭಾರಿ ಬಹುಮತ ಗಳಿಕೆ ನಿರೀಕ್ಷೆಯಿಲ್ಲ, 61-62 ಸ್ಥಾನಗಳಿಸಬಹುದು ಎಂದು ಇಸ್ರೇಲ್ ಟಿವಿ ಚುನಾವಣೋತ್ತರ ವರದಿ ಹೇಳಿದೆ.
ಅಲ್ಟ್ರಾನ್ಯಾಷನಲಿಸ್ಟ್ ರಿಲಿಜಿಯಸ್ ಝಿಯೋನಿಸಂ ಪಕ್ಷಕ್ಕೆ ಬೆಂಬಲ ಹೆಚ್ಚಾಗಿ ಸಿಕ್ಕಿದ್ದು, ಪಕ್ಷದ ಅಭ್ಯರ್ಥಿ ಇಟಮಾರ್ ಬೆನ್-ಗ್ವಿರ್ ಮುನ್ನಡೆ ಪಡೆಯಲಿದ್ದಾರೆ ಹಾಗೂ ಅವರ ಪಕ್ಷ 15 ಸ್ಥಾನಗಳಿಸುವ ಸಾಧ್ಯತೆಯಿದ್ದು, ಮೂರನೇ ಸ್ಥಾನಕ್ಕೇರಲಿದೆ.
ಉಸ್ತುವಾರಿ ಪ್ರಧಾನ ಮಂತ್ರಿ ಯೈರ್ ಲ್ಯಾಪಿಡ್ ಅವರ ಬಣ(Yesh Atid)ವು ಎರಡನೇ ಸ್ಥಾನ ಗಳಿಸಲಿದ್ದು, 22 ರಿಂದ 24 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಅದರೆ, ಅಂತಿಮ ಹಂತದ ಎಣಿಕೆ ಬಳಿಕ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಈ ವಾರದಲ್ಲೇ ಇಸ್ರೇಲ್ ಚುನಾವಣೆ ಫಲಿತಾಂಶ ಹೊರ ಬರಲಿದೆ.
ನಾಲ್ಕು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಇಸ್ರೇಲ್‌ನ ಐದನೇ ಚುನಾವಣೆಯು ಅನೇಕ ಇಸ್ರೇಲಿ ಮತದಾರರನ್ನು ಕೆರಳಿಸಿತು.
ಪ್ರಸ್ತುತ ಭ್ರಷ್ಟಾಚಾರದ ವಿಚಾರಣೆ ಎದುರಿಸುತ್ತಿರುವ ಮಾಜಿ ಪ್ರಧಾನಿ ನೆತನ್ಯಾಹು ಅವರು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ಈ ಚುನಾವಣೆ ಮೂಲಕ ರಾಜಕೀಯ ಪುನರಾಗಮನವನ್ನು ಪಡೆಯಲು ಬಯಸುತ್ತಿದ್ದಾರೆ. ಕಳೆದ ವರ್ಷ ಲ್ಯಾಪಿಡ್ ರೂಪಿಸಲು ಸಹಾಯ ಮಾಡಿದ ಒಕ್ಕೂಟದಿಂದ 12 ವರ್ಷಗಳ ಅಧಿಕಾರದ ನಂತರ ನೆತನ್ಯಾಹು ಅವರನ್ನು ಹೊರಹಾಕಲಾಗಿತ್ತು.
ಈ ಒಕ್ಕೂಟವು ಬಲ ಮತ್ತು ಎಡ ಪಕ್ಷಗಳು ಮತ್ತು ಸ್ವತಂತ್ರ ಅರಬ್ ಪಕ್ಷವನ್ನು ಒಳಗೊಂಡಂತೆ ರಾಜಕೀಯ ವರ್ಣಪಟಲದಾದ್ಯಂತ ಎಂಟು ಪಕ್ಷಗಳನ್ನು ಒಟ್ಟುಗೂಡಿಸಿತು. ಆದಾಗ್ಯೂ, ಮೈತ್ರಿ ಅಲ್ಪಕಾಲಿಕವಾಗಿತ್ತು. ನೆತನ್ಯಾಹುರನ್ನು ಕೆಳಗಿಳಿಸಲು ಎಂಟು ಪಕ್ಷಗಳು ಸಫಲವಾಗಿದ್ದವು.
120 ಸದಸ್ಯ ಬಲದ ಇಸ್ರೇಲ್‌ನ ಸಂಸತ್ತಿನ ನೆಸ್ಸೆಟ್‌ಗೆ ತುರುಸಿನ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್‌ನಲ್ಲಿ, ಹೆಚ್ಚು ಜನಪ್ರಿಯ ಪಕ್ಷಗಳಿಗೆ ಬಹುಮತವನ್ನು ಪಡೆಯಲು ಸಾಧ್ಯವಾಗದಿದ್ದರೆ, ಚಿಕ್ಕ ಬಣಗಳ ಬೆಂಬಲದ ಅಗತ್ಯವಿರುತ್ತದೆ.
ಹಿಂಸಾಚಾರದ ನಡುವೆ ಚುನಾವಣೆ ಎದುರಾಗಿದ್ದು, ಭದ್ರತೆ ಮತ್ತು ಹಣದುಬ್ಬರವನ್ನು ಮನಸ್ಸಿನಲ್ಲಿಟ್ಟುಕೊಂಡು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ರಾಜಕೀಯ ಒಡಕು 'ಚುನಾವಣೆಯಿಂದ ಬಗೆಹರಿಯುವಂತೆ ಕಾಣುತ್ತಿಲ್ಲ', ಇಸ್ರೇಲ್ ಅತಂತ್ರ ಸ್ಥಿತಿ ಎದುರಿಸಿದರೂ ಅಚ್ಚರಿಯೇನಿಲ್ಲ ಎಂದು ಡೆಮಾಕ್ರಸಿ ಇನ್‌ಸ್ಟಿಟ್ಯೂಟ್‌ನ ರಾಜಕೀಯ ವಿಶ್ಲೇಷಕರಾದ ಗಿಡಿಯಾನ್ ರಾಹತ್ ಅಭಿಪ್ರಾಯಪಟ್ಟಿದ್ದಾರೆ.
ಈಗ ದೇಶದಲ್ಲಿ ಚುನಾವಣೆಗಳು "ರಾಜಕೀಯ ಪಕ್ಷಗಳಿಗೆ, ಜನರಿಗೆ ಅಲ್ಲ" ರಾಜಕೀಯ ವಿಭಜನೆ ಮತ್ತು ಅಕಾಲಿಕ ಚುನಾವಣೆಗಳು "ಚುನಾವಣೆಗಳ ಮೂಲಕ ಪರಿಹರಿಸಲಾಗದಂತಹ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎಂದು ಹೇಳುತ್ತದೆ" ಎಂದು ರಾಹತ್ ಹೇಳಿದರು.












Click it and Unblock the Notifications