Iran War: ಇರಾನ್ ಸುಪ್ರೀಂ ಲೀಡರ್ ಕಥೆ ಮುಗಿಸಲು ಹಿಂಗೂ ಪ್ಲಾನ್ ಮಾಡಿತ್ತಾ ಇಸ್ರೇಲ್?

ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಿಂತಿದ್ದರೂ ಮಾತಿನ ತಿಕ್ಕಾಟ ಮಾತ್ರ ಕೊನೆಯಾಗಿಲ್ಲ. ಹೀಗೆ ಇಬ್ಬರ ನಡುವೆ ಮತ್ತೆ ಮತ್ತೆ ಜಗಳ ಜೋರಾಗುತ್ತಾ, ತಿಕ್ಕಾಟ ಕೂಡ ಹೆಚ್ಚಾಗುತ್ತಿದೆ. ಇಂತಹ ಗಂಭೀರವಾದ ಸಮಯದಲ್ಲೇ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವರು ನೀಡಿದ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಹಾಗಿದ್ರೆ, ಇರಾನ್ ಸುಪ್ರೀಂ ಲೀಡರ್ ಕಥೆ ಮುಗಿಸಲು ಹಿಂಗೂ ಪ್ಲಾನ್ ಮಾಡಿತ್ತಾ ಇಸ್ರೇಲ್?

ಇಸ್ರೇಲ್ & ಇರಾನ್ ಸೇನೆಯ ವಿಚಾರದಲ್ಲಿ ಸಮಬಲ ಹೊಂದಿದ್ದು, ಎರಡೂ ದೇಶಗಳ ನಡುವೆ ಭರ್ಜರಿ ಕಾದಾಟ ನಡೆದಿತ್ತು. ಹೀಗೆ ಎರಡೂ ದೇಶಗಳು ಕಿತ್ತಾಡಿಕೊಂಡು, ಬಡಿದಾಡಿಕೊಂಡು ಇನ್ನೇನು ಸಂಪೂರ್ಣ ನಾಶವಾಗಿ ಹೋಗಲಿವೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಕೊನೆಗೆ ಅಮೆರಿಕ ಈ ಕಿತ್ತಾಟದ ಅಖಾಡಕ್ಕೆ ಎಂಟ್ರಿ ಕೊಟ್ಟು ಇನ್ನಷ್ಟು ಭಯ ಹುಟ್ಟಿಸಿತ್ತು. ಇನ್ನೇನು 3ನೇ ಮಹಾಯುದ್ಧ ಕೂಡ ಶುರುವಾಗಿ, ಎಲ್ಲಾ ನಾಶವಾಗಿ ಹೋಗಲಿದೆ ಅಂತಾ ಜಗತ್ತು ಅಂದುಕೊಳ್ಳುವಾಗಲೇ ಯುದ್ಧ ನಿಂತು ಹೋಗಿದೆ. ಆದರೆ ಇಸ್ರೇಲ್ ಈಗ ಮತ್ತೊಂದು ಸ್ಫೋಟಕ ವಿಚಾರ ಬಿಚ್ಚಿಟ್ಟಿದೆ.

Israel Defence Minister Israel Katz Said This About Iran Supreme Leader Ali Khamenei

ಇರಾನ್ ಸುಪ್ರೀಂ ಲೀಡರ್ ಹತ್ಯೆಗೆ ಸ್ಕೆಚ್?

ಮಧ್ಯಪ್ರಾಚ್ಯ ದೇಶಗಳ ಮೇಲೆ ಯುದ್ಧ ಮಾಡುವುದು ಇಸ್ರೇಲ್‌ಗೆ ರೂಢಿ ಇದೆ, ಅದರಲ್ಲೂ ಇರಾನ್ ದೇಶ ಅಂದ್ರೆ ಕೆಂಡದ ರೀತಿ ಉರಿದು ಬೀಳುತ್ತದೆ ಇದೇ ಇಸ್ರೇಲ್ ದೇಶ. ಹೀಗಾಗಿಯೇ ಇರಾನ್ ವಿರುದ್ಧ ಭಾರಿ, ಭರ್ಜರಿ ಯುದ್ಧ ಮಾಡಲು ಸ್ಕೆಚ್ ಹಾಕಿತ್ತು. ಆದರೆ ಇರಾನ್ ಕೂಡ ಸರಿಯಾಗಿ ತಿರುಗೇಟು ನೀಡಿದಕ್ಕಾಗಿ ಯುದ್ಧ ಸೈಲೆಂಟ್ ಆಗಿದೆ ಎಂಬ ಆರೋಪ ಇದೆ. ಹೀಗಿದ್ದಾಗ ಯುದ್ಧದ ಸಮಯದಲ್ಲಿ ಇರಾನ್ ದೇಶದ ಒಬ್ಬೊಬ್ಬರೇ ಮಿಲಿಟರಿ ಅಧಿಕಾರಿಗಳ ಜೀವ ತೆಗೆದಿದ್ದ ಇಸ್ರೇಲ್ ಸೇನೆ ಕೊನೆಗೆ, ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಗೂ ಪ್ಲಾನ್ ಮಾಡಿತ್ತು ಅನ್ನೋ ವಿಚಾರ ಇದೀಗ ಬಯಲಾಗಿದೆ.

ಎಸ್ಕೇಪ್ ಆಗದೇ ಹೋಗಿದ್ದರೆ ಹತ್ಯೆ...

ಹೌದು, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇದೀಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇರಾನ್ ಸೇನೆ ವಿರುದ್ಧ ಸ್ಫೋಟಕ ದಾಳಿ ಮಾಡುತ್ತಿದ್ದ ಇಸ್ರೇಲ್ ಸೇನೆ ಭಾರಿ ದೊಡ್ಡ ವಿನಾಶ ಸೃಷ್ಟಿ ಮಾಡುವ ಕುರಿತು ಚಿಂತನೆ ನಡೆಸಿತ್ತು. ಈ ಮೂಲಕ ಇರಾನ್ ಮತ್ತೆ ಯಾವತ್ತೂ ಪರಮಾಣು ಪ್ರಯೋಗ ಮಾಡಲೇಬಾರದು ಅಂತಾನೂ ಇಸ್ರೇಲ್ ಯೋಚಿಸಿತ್ತು.

ಅದೇ ಸಮಯದಲ್ಲಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಗೂ ಪ್ಲಾನ್ ರೆಡಿಯಾಗಿತ್ತಂತೆ. ಆದರೆ ಆ ವೇಳೆಗೆ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಗುಟ್ಟಾದ ಸ್ಥಳಕ್ಕೆ ಹೋದ ಹಿನ್ನೆಲೆ ಹತ್ಯೆ ಕಷ್ಟವಾಗಿತ್ತು, ಅಕಸ್ಮಾತ್ ಅಲಿ ಖಮೇನಿ ಇರುವ ಜಾಗ ನಮಗೆ ತಿಳಿದಿದ್ದರೆ ನಾವು ಅಲಿ ಖಮೇನಿಯ ಹತ್ಯೆ ಮಾಡುತ್ತಿದ್ದೆವು ಎಂದಿದ್ದಾರೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್. ಈ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದ್ದು, ಅತ್ತ ಇರಾನ್ ಮತ್ತಷ್ಟು ಕೆರಳುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+