Israel & Iran War: ಇಸ್ರೇಲ್ ಸೇನೆಯ ಅಬ್ಬರಕ್ಕೆ ಮತ್ತೆ ಮತ್ತೆ ನಲುಗುತ್ತಿರುವ ಲೆಬನಾನ್ ರಾಜಧಾನಿ
ಇಸ್ರೇಲ್
ಸೇನೆ ಮತ್ತೆ ಗಾಜಾ, ಲೆಬನಾನ್ & ಸಿರಿಯಾ ಮೇಲೆ ಭೀಕರ ದಾಳಿ ಮುಂದುವರಿಸಿ ಆಘಾತ ನೀಡುತ್ತಿದ. ಲೆಬನಾನ್ ವಿರುದ್ಧ ನೇರವಾಗಿ ಯುದ್ಧ ಸಾರಿ, ಹಿಜ್ಬುಲ್ಲಾ ಸಂಘಟನೆ ಮುಖಂಡರು & ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ ಇಸ್ರೇಲ್. ಅದೇ ರೀತಿ ಈಗಲೂ ತನ್ನ ಆರ್ಭಟ ಮುಂದುವರಿಸಿರುವ ಇಸ್ರೇಲಿ ಮಿಲಿಟರಿ ತನ್ನ ಬಳಿ ಇರುವ ಎಲ್ಲಾ ರೀತಿಯ ಅತ್ಯಾಧುನಿಕ ಅಸ್ತ್ರಗಳನ್ನು ಬಳಸುತ್ತಿದೆ. ಹಗಲು & ರಾತ್ರಿ ಲೆಕ್ಕ ಮಾಡದೆ ದಾಳಿಯ ನಡೆಸುತ್ತಿದೆ ಇಸ್ರೇಲಿ ಮಿಟಲಿರಿ. id="toptextpromo"> id='are-slot-1' class='oiad oi-axt oiadv'> id='top-searched-articles'>ಇದು
ಲೆಬನಾನ್ ನೆಲವನ್ನ ನರಕವಾಗಿ ಬದಲಾಯಿಸುತ್ತಿದ್ದು ಜನರಿಗೆ ಕೂಡ ಚಿಂತೆ ಶುರುವಾಗಿ ಒದ್ದಾಡುತ್ತಿದ್ದಾರೆ. ಜೀವ ಉಳಿಸಿಕೊಳ್ಳುವುದು ಹೇಗೆ? ಎಂಬ ಚಿಂತೆಯೂ ಅಲ್ಲಿನ ನಿವಾಸಿಗಳಿಗೆ ಕಾಡುತ್ತಿದೆ. ಈಗಾಗಲೇ ಲೆಬನಾನ್ ರಾಜಧಾನಿ ಬೈರೂತ್ ಬಿಟ್ಟು ಲಕ್ಷಾಂತರ ಜನರು ಬೇರೆ, ಬೇರೆ ಪ್ರದೇಶಗಳಿಗೆ ಓಡಿ ಹೋಗಿದ್ದಾರೆ. ಹೀಗಿದ್ದರೂ ಅಲ್ಲಿನ ಅಶಕ್ತರು ಮಾತ್ರ ಒದ್ದಾಡುವ ಪರಿಸ್ಥಿತಿ ಬಂದಿದೆ. ಮತ್ತೊಂದು ಕಡೆ ಇಸ್ರೇಲ್ ತನ್ನ ದಾಳಿಯನ್ನ ಇನ್ನಷ್ಟು ತೀವ್ರಗೊಳಿಸಿ, ಲೆಬನಾನ್ ಪ್ರಜೆಗಳ ಜೀವಕ್ಕೆ ಕಂಟಕವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜಾಗತಿಕವಾಗಿ ಕೂಡ ಈ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸುತ್ತಿದೆ. id='are-slot-2' class='oiad oi-axt oiadv'>












Click it and Unblock the Notifications