ಹಸಿದ ಹೊಟ್ಟೆಗಳ ನಡುವೆ ಉಗ್ರರಿಗಾಗಿ ಹುಡುಕಾಟ!

ಇದ್ಯಾಕೋ ಅತಿಯಾಗಿ ಹೋಗುತ್ತಿದ್ದು, ಒಂದು ಕಡೆ ಇಸ್ರೇಲ್ ಸೇನೆ ಹಮಾಸ್ ಉಗ್ರರ ಬಿಲ ಹುಡುಕಿ ಹತ್ಯೆ ಮಾಡುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ಸೇನೆ & ಹಮಾಸ್ ಉಗ್ರರ ಭೀಕರ ಯುದ್ಧದ ನಡುವೆ ಸಿಲುಕಿ ಪ್ಯಾಲೆಸ್ತೀನ್‌ನ ಸಾಮಾನ್ಯ ಜನ ನಲುಗಿ ಹೋಗಿದ್ದಾರೆ. ಹೀಗಿದ್ದಾಗ ತನ್ನ ಭೀಕರ ದಾಳಿಯನ್ನು ಮುಂದುವರಿಸಿರುವ ಇಸ್ರೇಲ್ ಸೇನೆ, ಮತ್ತೆ ಹಲವಾರು ಉಗ್ರರನ್ನ ಚಂಡಾಡಿದೆಯಂತೆ.

ಅಷ್ಟಕ್ಕೂ ಗಾಜಾ ಪಟ್ಟಿ ಭಾಗದಲ್ಲಿನ ದೊಡ್ಡ ಆಸ್ಪತ್ರೆ ಎಂದು ಕರೆಯಲಾಗುವ, ಶಿಫಾ ಆಸ್ಪತ್ರೆ ಬಳಿ ರಣಕಾಳಗ ನಡೆಯುತ್ತಿದೆ. ಆಸ್ಪತ್ರೆ ಸುತ್ತಮುತ್ತ ಇಸ್ರೇಲ್‌ ಸೇನೆ ಭಾರಿ ದಾಳಿ ನಡೆಸಿದ್ದು ಈಗಲೂ ಅಟ್ಯಾಕ್ ಮುಂದುವರಿದಿದೆ. ಆಸ್ಪತ್ರೆ ಸಮೀಪ ನಡೆದ ಈ ಗುಂಡಿನ ಕಾಳಗದಲ್ಲಿ, ಹಮಾಸ್‌ ಸಂಘಟನೆಗೆ ಸೇರಿದ 50 ಬಂಡುಕೋರರ ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಹೇಳಿದೆ. ಹೀಗಿದ್ದಾಗ ಮತ್ತೊಂದು ಕಡೆ ಈ ದಾಳಿಯನ್ನ ಸ್ಥಳೀಯ ಆರೋಗ್ಯ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರಲ್ಲದೆ ಇಸ್ರೇಲ್ ಸಾಮಾನ್ಯ ಜನರ ಮೇಲೆ ದಾಳಿ ಮಾಡ್ತಿದೆ ಎಂದು ಆರೋಪಿಸಿದ್ದು, ಪರಿಸ್ಥಿತಿಯನ್ನ ಕಗ್ಗಂಟಾಗುವಂತೆ ಮಾಡಿದೆ.

Israel And Hamas War Is Become More Difficult To Solve

ಆಸ್ಪತ್ರೆಯಲ್ಲಿ ಅಲ್ಲೋಲ ಕಲ್ಲೋಲ

ಗಾಜಾಪಟ್ಟಿ ಭಾಗದಿಂದ ಸಾಕಷ್ಟು ನಿರಾಶ್ರಿತರು ಈಗ ಓಡಿ ಹೋಗಿ ಜೀವ ಉಳಿಸಕೊಂಡು, ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಗಾಜಾ ಪಟ್ಟಿ ಭಾಗದಲ್ಲೇ ಸಿಲುಕಿಕೊಂಡ ಸಾವಿರಾರು ಜನರಿಗೆ ಇದೇ ಶಿಫಾ ಆಸ್ಪತ್ರೆ ಆಧಾರವಾಗಿದೆ. ಆದ್ರೆ ಇದೇ ಆಸ್ಪತ್ರೆಯನ್ನು ಟಾರ್ಗೆಟ್ ಮಾಡಿ ಪದೇ ಪದೇ ಇಸ್ರೇಲ್ ಸೇನೆ ದಾಳಿ ಮಾಡುತ್ತಿದ್ದು, ಇದರಿಂದ ಸಾವಿರಾರು ಜೀವ ಹಾನಿ ಆಗಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ನವೆಂಬರ್‌ ತಿಂಗಳಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ್ದ ದಾಳಿ ನಂತರ ಶಿಫಾ ಆಸ್ಪತ್ರೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಮಕ್ಕಳ ಸಾವಿನ ಸಂಖ್ಯೆ ಹೆಚ್ಚು?

ಇದು ಮಾತ್ರವಲ್ಲ, ಈಗಾಗಲೇ ಪ್ಯಾಲೆಸ್ತೀನ್ ಭಾಗದಲ್ಲಿ ಸುಮಾರು 31 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಆಸ್ಪತ್ರೆ ಮೇಲಿನ ದಾಳಿ ಕೂಡ ಸಂಚಲನ ಸೃಷ್ಟಿ ಮಾಡಿದೆ. ಇದೆಲ್ಲಾ ಕೈಮೀರಿ ಹೋಗಿರುವಾಗ ಇಸ್ರೇಲ್‌ನ ಕಡೆಯಿಂದ ಮತ್ತಷ್ಟು ಕಠಿಣ ದಾಳಿಗೆ ಪ್ಲಾನ್ ಮಾಡಲಾಗಿದೆಯಂತೆ. ಹೀಗಾಗಿ ಮುಂದಿನ, ಹಲವು ತಿಂಗಳ ಕಾಲ ಗಾಜಾ ಸೇರಿದಂತೆ ಪ್ಯಾಲೆಸ್ತೀನ್ ಭಾಗದಲ್ಲಿ ಇದೇ ರೀತಿ ರಕ್ತಪಾತವು ನಡೆಯುತ್ತಾ? ಎಂಬ ಭಯ ಕೂಡ ಆವರಿಸಿದೆ.

Israel And Hamas War Is Become More Difficult To Solve

ತುತ್ತು ಅನ್ನಕ್ಕೂ ಕಷ್ಟದ ಸ್ಥಿತಿ

ಹೀಗೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದ ಪರಿಣಾಮ ಜೀವ ಉಳಿಸಿಕೊಳ್ಳಲು ಗಾಜಾದ, ಲಕ್ಷಾಂತರ ಜನರು ತಮ್ಮ ಮನೆ & ಜಾಗ ತೊರೆದು ಹೋಗಿದ್ದಾರೆ. ಅವರು ಇದೀಗ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ವಿಶ್ವಸಂಸ್ಥೆ ನೀಡುತ್ತಿರುವ ಸಹಾಯಕ್ಕೆ ಅವರೆಲ್ಲಾ ಕಾದು ಕೂರುವ ಪರಿಸ್ಥಿತಿ ಬಂದಿದೆ. ಅದರಲ್ಲೂ ನೀರಿಗಾಗಿ ಸಾಕಷ್ಟು ಹಾಹಾಕಾರ ಸೃಷ್ಟಿಯಾಗಿದೆ, ಜನರು ಹನಿ ಹನಿ ನೀರಿಗೂ ಪರದಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಊಟಕ್ಕಾಗಿ ವಿಶ್ವಸಂಸ್ಥೆ ಕೊಡುತ್ತಿರುವ ವಸ್ತುಗಳು ಇದೀಗ ಗಾಜಾ & ರಫಾ ಗಡಿಯ ನಿರಾಶ್ರಿತ ಜನರಿಗೆ ಆಧಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+