100 ಡ್ರೋನ್ ಹಾರಿಸಿದ್ದ ಇರಾನ್, ಇಸ್ರೇಲ್ ಸೇನೆಯಿಂದ ಗಂಭೀರ ಆರೋಪ... Israel And Iran

ಇಸ್ರೇಲ್ ಸೇನೆ ರೊಚ್ಚಿಗೆದ್ದು ಕೂತಿದ್ದು, ತಮ್ಮ ಶತ್ರುಗಳನ್ನು ಸರ್ವನಾಶ ಮಾಡಲು ಎಲ್ಲಾ ಅಸ್ತ್ರಗಳನ್ನು ಬಳಸುತ್ತಿದೆ. ಇರಾನ್ & ಇಸ್ರೇಲ್ ಶತ್ರುತ್ವ ಜೋರಾಗಿದ್ದು, ಇರಾನ್ ವಿರುದ್ಧ ದಿಢೀರ್ ದಾಳಿ ಮಾಡಿದೆ ಇಸ್ರೇಲ್. ಹೀಗಾಗಿಯೇ ಭರ್ಜರಿ & ಭಯಾನಕ ಯುದ್ಧ ಶುರುವಾಗಿದ್ದು, ಮಧ್ಯಪ್ರಾಚ್ಯ ಇದೀಗ ಕುದಿಯುತ್ತಿರುವ ಎಣ್ಣೆಯಂತೆ ಆಗಿದೆ. ಇದೇ ಸಮಯದಲ್ಲಿ ಅಲರ್ಟ್ ಆಗಿರಿ ಎಂದು ಈಗ ಅಮೆರಿಕ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಹಾಗಾದ್ರೆ ಇರಾನ್ ವಿರುದ್ಧ ದಿಢೀರ್ ದಾಳಿ ಮಾಡಿದ್ದು ಏಕೆ ಇಸ್ರೇಲ್?

ಅಂದಹಾಗೆ ಇರಾನ್ ಸೇನೆ ಕೊತ ಕೊತ ಕುದಿಯುತ್ತಿದ್ದು ಇಸ್ರೇಲ್ ಹೆಸರು ಕೇಳಿದ್ರೆ ಸಾಕು ಬೆಂಕಿಯ ಕಿಡಿ ಉಗುಳುತ್ತದೆ. ಇನ್ನು ಈ ಸ್ಥಿತಿಯಲ್ಲೇ ದಿಢೀರ್ ಅಂತಾ ನೂರಾರು ಡ್ರೋನ್‌ಗಳನ್ನ ಇಸ್ರೇಲ್ ವಿರುದ್ಧ ಹಾರಿ ಬಿಟ್ಟಿರುವ ಆರೋಪ ಕೂಡ ಈಗ ಕೇಳಿ ಬಂದಿದೆ. ಇದೇ ಕಾರಣಕ್ಕೆ ಅಂತಾನೇ ಇಸ್ರೇಲ್ ಕೂಡ ಮರುದಾಳಿ ನಡೆಸಿರುವ ಆರೋಪದ ನಡುವೆ ಮತ್ತೊಂದು ಮಹಾ ಕಂಟಕ ಕೂಡ ಎದುರಾಗಿದೆ. ಇರಾನ್ ಇದೀಗ ದೊಡ್ಡ ಮಟ್ಟದಲ್ಲಿ ಮರುದಾಳಿ ನಡೆಸಿದರೆ ಮುಂದೇನು ಸ್ಥಿತಿ? ಅನ್ನೋ ಚಿಂತೆ ಕೂಡ ಶುರುವಾಗಿದೆ.

Israel Alleged That Iran Fires 100 Drones Towards Their Land

100 ಡ್ರೋನ್‌ ಹಾರಿಸಿದ ಇರಾನ್?

ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ಸಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಮತ್ತೊಂದು ಕಡೆ ಪರಿಸ್ಥಿತಿ ಇದೇ ರೀತಿ ಇದ್ದರೆ ಅಮೆರಿಕ ಕೂಡ ಈ ಭೀಕರ ಗಲಾಟೆಗೆ ಎಂಟ್ರಿ ಆಗುತ್ತಾ? ಅನ್ನೋ ಭಯ ಕೂಡ ಆವರಿಸಿದೆ, ಯಾಕಂದ್ರೆ ಅಮೆರಿಕ ಎಂಟ್ರಿ ಕೊಟ್ಟರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+