Imran Khan: ಇಮ್ರಾನ್ ಖಾನ್‌ಗೆ ಜೈಲಿನಿಂದ ಸಿಗುತ್ತಾ ಮುಕ್ತಿ?

ಪಾಕಿಸ್ತಾನ ಮಾಜಿ ಪ್ರಧಾನಿಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ. ಒಂದ್ಕಡೆ ಭ್ರಷ್ಟಾಚಾರ ಆರೋಪ ಹೊತ್ತು ಜೈಲು ಸೇರಿ, ಜೈಲಿನಲ್ಲಿ ಸಾಮಾನ್ಯ ಸೌಲಭ್ಯ ಸಿಗದೆ ಇಮ್ರಾನ್ ಖಾನ್ ನರಳುತ್ತಾ ದಿನದೂಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಮಧ್ಯೆ ಇಮ್ರಾನ್ ಖಾನ್ ವಿರುದ್ಧ ಲೆಕ್ಕಕ್ಕೆ ಸಿಗದಷ್ಟು ಕೇಸ್ ಬಿದ್ದಿವೆ. ಆದರೆ ಮಾಜಿ ಕ್ರಿಕೆಟರ್ ಅಭಿಮಾನಿಗಳು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿ ಇದೀಗ ಹೊರಬಿದ್ದಿದೆ.

ಹೌದು ತೋಷಾಖಾನ ಭ್ರಷ್ಟಾಚಾರ ಕೇಸ್‌ನಲ್ಲಿ 3 ವರ್ಷ ಕಾಲ ಜೈಲು ಶಿಕ್ಷೆ ನೀಡಿದ್ದನ್ನ ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಮುನ್ನೆಲೆಗೆ ಬಂದಿದೆ. ಇಮ್ರಾನ್ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಮತ್ತೆ ಆರಂಭಿಸಿದ್ದು, ಇಮ್ರಾನ್‌ಗೆ ಖುಷಿ ಕೊಟ್ಟಿದೆ. ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರ ಪೀಠ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ವಿಚಾರಣೆ ಸಂದರ್ಭದಲ್ಲೇ ಬಿಗ್ ಟ್ವಿಸ್ಟ್ ಸಿಕ್ಕಿದೆ!

restarts-hearing-of-imran-khan-plea

ಕೊನೆಗೂ ಶುರುವಾಯ್ತು ಅರ್ಜಿ ವಿಚಾರಣೆ

ಅಷ್ಟಕ್ಕೂ ಇಮ್ರಾನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾದಾಗ, ಪಾಕ್ ಚುನಾವಣಾ ಆಯೋಗವನ್ನ ಪ್ರತಿನಿಧಿಸುವ ವಕೀಲ ಅಮ್ಜದ್ ಪರ್ವೇಜ್ ಗೈರು ಹಾಜರಿ ಕುರಿತು ಬೇಸರ ವ್ಯಕ್ತವಾಗಿತ್ತು. ಜೊತೆಗೆ ವಕೀಲರು ಪದೇ ಪದೆ ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ವಿಚಾರಣೆಗೆ ಯಾರೂ ಹಾಜರಾಗದಿದ್ದರೂ ಸೋಮವಾರ ಈ ಪ್ರಕರಣ ಇತ್ಯರ್ಥಪಡಿಸುವ ಬಗ್ಗೆ ಪ್ರಕಟಿಸಿತ್ತು. ಹೀಗಾಗಿಯೇ ಅರ್ಜಿ ವಿಚಾರಣೆ ಕೂಡ ತಡವಾಗಿದ್ದು, ಇಮ್ರಾನ್ ಅಭಿಮಾನಿಗಳಿಗೆ ಚಿಂತೆ ತರಿಸಿತ್ತು. ಇದೀಗ ವಿಚಾರಣೆ ಮತ್ತೆ ಆರಂಭವಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕೇಸ್‌ನಲ್ಲಿ ಪಾಕಿಸ್ತಾನ್‌ -ಎ- ಇನ್ಸಾಫ್ ಅಂದರೆ ಪಿಟಿಐ ಅಧ್ಯಕ್ಷರೂ ಆದ ಇಮ್ರಾನ್‌ ಅವರಿಗೆ ಆಗಸ್ಟ್‌ 5ರಂದು ಶಿಕ್ಷೆ ವಿಧಿಸಿದ್ದು, ಸದ್ಯ ಇಮ್ರಾನ್ ಖಾನ್‌ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2018ರಿಂದ 2022ರ ಮಧ್ಯೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಸರ್ಕಾರದ ಉಡುಗೊರೆಯನ್ನ ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಗೆ ಸ್ಪರ್ಧಿಸದಂತೆ 5 ವರ್ಷ ಇಮ್ರಾನ್ ಖಾನ್ ಅವರನ್ನ ನಿರ್ಬಂಧಿಸಲಾಗಿದೆ. ಇದೇ ಹೊತ್ತಲ್ಲಿ ಇಮ್ರಾನ್ ಅರ್ಜಿ ವಿಚಾರಣೆ ಕೂಡ ಆರಂಭವಾಗಿದ್ದು ಕುತೂಹಲ ಮೂಡಿಸಿದೆ.

restarts-hearing-of-imran-khan-plea

ಒಂದಲ್ಲ.. ಎರಡಲ್ಲ.. 140 ಕೇಸ್!

ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಹೀಗೆ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಹೀಗೆ ಯಾವ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವಾಗ ಕಂಟಕ ಎದುರಾಗುತ್ತೋ ಗೊತ್ತೇ ಆಗ್ತಿಲ್ಲ.

ಪಾಕಿಸ್ತಾನ ಮಾಜಿ ಪ್ರಧಾನಿಗೆ ಆತಂಕ?

ಇಮ್ರಾನ್ ಖಾನ್ ವಿದೇಶಾಂಗ ಇಲಾಖೆ ರಹಸ್ಯ ದಾಖಲೆ ಸೋರಿಕೆ ಮಾಡಿದ ಆರೋಪ ಕೂಡ ಹೊತ್ತಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ರಹಸ್ಯ ದಾಖಲೆಗಳ ಸೋರಿಕೆ ಆರೋಪ ಕೂಡ ಇಮ್ರಾನ್ ಖಾನ್ ಅವರ ತಲೆಗೆ ಸುತ್ತಿಕೊಂಡಿತ್ತು. ಸೈಫರ್‌ ಕೇಸ್ ದಾಖಲಾಗಿದ್ದೆ ತಡ ಇಮ್ರಾನ್ ಅಭಿಮಾನಿಗಳಿಗೆ ಭಯ ಶುರುವಾಗಿತ್ತು. ಈಗ ಆ ಭಯ ನಿಜವಾಗಿದ್ದು, ಇಮ್ರಾನ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಅಂತಾ ನಿನ್ನೆಯಷ್ಟೇ ಮಾಹಿತಿ ಹೊರಬಿದ್ದಿತ್ತು. ಅಕಸ್ಮಾತ್ ಈ ಕೇಸ್‌ನಲ್ಲಿ ಇಮ್ರಾನ್‌ಗೆ ಶಿಕ್ಷೆ ಪ್ರಕಟವಾದರೆ ಜೀವನ ಪರ್ಯಂತ ಅವರು ಜೈಲಿನಲ್ಲೇ ನರಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+