ಇರಾಕ್‌ ಮಹಿಳೆಯರ ಯೋನಿ ಛೇದನಕ್ಕೆ ಉಗ್ರರ ಫತ್ವಾ

ಜಿನಿವಾ, ಜು.25: ಸಿರಿಯಾ ಮತ್ತು ಇರಾಕ್‌ನಲ್ಲಿ ಭಾರೀ ಹೋರಾಟ ನಡೆಸುತ್ತಿರುವ ಐಎಸ್‌‌ಐಎಸ್‌(ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಅಂಡ್‌ ಸಿರಿಯಾ) ಉಗ್ರರು ಇರಾಕ್‌ ಮಹಿಳೆಯರ ಯೋನಿ ಛೇದನಕ್ಕೆ ಆದೇಶ ನೀಡಿದ್ದಾರೆ.

ವಿಶ್ವ ಸಂಸ್ಥೆಯ ವರದಿಯೊಂದು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಉತ್ತರ ಇರಾಕ್‌ನ 11 ರಿಂದ 46 ವಯಸ್ಸಿನ ಎಲ್ಲಾ ಮಹಿಳೆಯರ ಯೋನಿ ಛೇದನಕ್ಕೆ ಉಗ್ರರು ಫತ್ವಾ ಹೊರಡಿಸಿದ್ದಾರೆ ಎನ್ನುವ ಅಂಶ ವರದಿಯಲ್ಲಿದೆ.[ಇರಾಕ್‌ ಉಗ್ರರ ಜೊತೆ ಬೆಂಗಳೂರು ಯುವಕ!]

iraq

ವರದಿ ಬಹಿರಂಗಗೊಂಡ ಬಳಿಕ ಈ ವಿಚಾರದ ಬಗ್ಗೆ ಗೊಂದಲ ಉಂಟಾಗಿದ್ದು ಕೆಲವು ಬ್ಲಾಗರ್‌ಗಳು ಇರಾಕ್‌ ಉಗ್ರರು ಒಂದು ವರ್ಷದ ಹಿಂದೆಯೇ ಫತ್ವಾ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವರದಿಯ ಬಗ್ಗೆ ಚರ್ಚೆ‌ಯಾಗುತ್ತಿದ್ದು ವಿಶ್ವ ಸಂಸ್ಥೆಯ ಅಧಿಕಾರಿಗಳು ಈ ವಿಚಾರದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಮುಂದಾಗುತ್ತಿದ್ದಾರೆ.[ನರ್ಸ್‌ಗಳಿಗೆ ಬಿಆರ್ ಶೆಟ್ಟಿ ಉದ್ಯೋಗದ ಆಫರ್‌]

ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳಲ್ಲಿ ಈ ಪದ್ದತಿ ಆಚರಣೆಯಲ್ಲಿದ್ದು, ಬುಡಕಟ್ಟು ಸಮುದಾಯದ ಜನರು ಲೈಂಗಿಕ ಸುಖವನ್ನು ಕಡಿಮೆ ಮಾಡಲು ಮಹಿಳೆಯರ ಯೋನಿ ಛೇದನ ಸಂಪ್ರದಾಯ ಆಚರಿಸುತ್ತವೆ. ಇರಾಕ್‌ನಲ್ಲಿ ಇದುವರೆಗೆ ಈ ಸಂಪ್ರದಾಯ ಇರಲಿಲ್ಲ. ಒಂದು ವೇಳೆ ಈ ಸಂಪ್ರದಾಯ ಏನಾದರೂ ಜಾರಿಗೆ ಬಂದಲ್ಲಿ 40 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಇರಾಕ್‌ ಮಹಿಳೆಯರು ಅಪಾಯಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ.[ಮರುಜನ್ಮ ಪಡೆದ ದಾದಿಯರು ಮರಳಿ ಗೂಡಿಗೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+