ನರ್ಸ್‌ಗಳಿಗೆ ಬಿಆರ್ ಶೆಟ್ಟಿ ಉದ್ಯೋಗದ ಆಫರ್
ದುಬೈ, ಜು.6: ದುಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಇರಾಕ್‌ನಿಂದ ಭಾರತಕ್ಕೆ ಮರಳಿದ ನರ್ಸ್‌ಗಳಿಗೆ ಸೌದಿಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.
ಎನ್ಎಂಸಿ ಹೆಲ್ತ್‌ಕೇರ್ ಸಂಸ್ಥೆಯ ಸಿಇಒ ಆಗಿರುವ ಬಿ.ಆರ್.ಶೆಟ್ಟಿ ಇರಾಕ್‌ನಿಂದ ಭಾರತಕ್ಕೆ ಶನಿವಾರ ಮರಳಿದ ಎಲ್ಲಾ46 ನರ್ಸ್‌ಗಳಿಗೂ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಸಿದ್ದರಿದ್ದಾರೆ ಎಂದು ಎನ್ಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.[ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್]

ಹಿಂಸಾಪೀಡಿತ ಇರಾಕ್‌ನಲ್ಲಿ ಐಎಸ್‌ಐಎಸ್ ಜಿಹಾದಿಗಳ ವಶದಲ್ಲಿದ್ದ 45 ಮಂದಿ ಕೇರಳ ನರ್ಸ್‌ಗಳು, ತಮಿಳುನಾಡಿನ ಒಬ್ಬರು ನರ್ಸ್ ಭಾರತಕ್ಕೆ ಶನಿವಾರ ಮರಳಿದ್ದರು. ಈ ಹಿನ್ನಲೆಯಲ್ಲಿ ಬಿ.ಆರ್.ಶೆಟ್ಟಿ ಕೇರಳ ಮುಖ್ಯಮಂತ್ರಿಯವರ ಜೊತೆಗೆ ಉದ್ಯೋಗ ನೀಡುವ ಸಲುವಾಗಿ ಮಾತನಾಡಿದ್ದಾರೆ.[ಉಗ್ರರ ಕಪಿಮುಷ್ಟಿಯಿಂದ ಪಾರು, ನರ್ಸ್ ಗಳು ಭಾರತಕ್ಕೆ]












Click it and Unblock the Notifications