ಅಮೆರಿಕವನ್ನು ನಡುಗಿಸಿರುವ ಇರ್ಮಾ- ಅಲ್ಲಾಹ್ ನ ಸೈನಿಕ ಎಂದ ಉಗ್ರರು
ನ್ಯೂಯಾರ್ಕ್, ಸೆ. 12: ಅಮೆರಿಕ, ಕ್ಯೂಬಾದಲ್ಲಿ ಭಾರಿ ಆತಂಕ, ಅನಾಹುತವನ್ನು ಸೃಷ್ಟಿಸಿರುವ ಇರ್ಮಾ ಚಂಡಮಾರುತವನ್ನು ಕಳಿಸಿದ್ದು ಅಲ್ಲಾಹ್, ಆತ ಅಲ್ಲಾಹ್ ನ ಸೈನಿಕ ಎಂದು ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಹೇಳಿದೆ.
9/11 ದುರಂತ ನೆನಪಿನ ಜತೆಗೆ ಚಂಡಮಾರುತದ ಹೊಡೆತವನ್ನು ಸಹಿಸಿಕೊಂಡು ಚೇತರಿಸಿಕೊಳ್ಳುತ್ತಿರುವ ಯುಎಸ್ ಜನತೆಯ ಮುಂದೆ ಇರಾಕಿ ಉಗ್ರರ ವಿಡಿಯೋಗಳು ಕಾಣಿಸಿಕೊಂಡಿವೆ. ಐಎಸ್ಐಎಸ್ ಬೆಂಬಲಿತ ಮಾಧ್ಯಮ ಗುಂಪುಗಳು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಇರ್ಮಾ ಅಲ್ಲದೆ ಇನ್ನಷ್ಟು ಶಿಕ್ಷೆ ನಿಮಗೆ ಕಾದಿದೆ ಎಂದಿವೆ. ಕಾಡ್ಗಿಚ್ಚು, ಚಂಡಮಾರುತ, ಭೂಕಂಪಗಳು ಅಲ್ಲಾಹ್ ನ ಸೈನಿಕರಾಗಿದ್ದು, ನಿಮ್ಮನ್ನು ಕಾಡಲಿವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಅಮೆರಿಕದ ಪಶ್ಚಿಮ ಭಾಗವನ್ನು ಕಾಡಿದ ಕಾಡ್ಗಿಚ್ಚು, ಟೆಕ್ಸಾಸ್ ಹಾಗೂ ಫ್ಲೋರಿಡಾಗೆ ಎರಗಿದ ಚಂಡಮಾರುತ ಎಲ್ಲವೂ ಅಲ್ಲಾಹ್ ನ ಸೈನಿಕರ ಕೃತ್ಯ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
9/11 ದುರಂತದ ಸ್ಮರಣೆಯ ಸಂದರ್ಭದಲ್ಲಿ ಅಲ್ ಖೈದಾ ಬೆಂಬಲಿತರು ಈ ವಿಡಿಯೋಗಳನ್ನು ಹಂಚುತ್ತಿದ್ದಾರೆ. ವರ್ಲ್ಡ್ ಟ್ರೇಡ್ ಸೆಂಟರ್ ಉರುಳಿಸುವುದಕ್ಕೂ ಮುನ್ನ ಬರಾಕ್ ಒಬಾಮಾಗೆ ಬರೆದ ಪತ್ರವನ್ನು ಅಲ್ ಖೈದಾದ ಸಾಮಾಜಿಕ ಜಾಲ ತಾಣ ನಿರ್ವಾಹಕರು ಬಹಿರಂಗ ಮಾಡಿದ್ದಾರೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications