ಉಕ್ರೇನ್‌ನಲ್ಲಿ ರಷ್ಯಾವು ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆಯೇ?

ರಷ್ಯಾವು ಉಕ್ರೇನ್‌ನಲ್ಲಿ ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮಾತನಾಡಿ, ಮಾಸ್ಕೋ ವಾಕ್ಯೂಮ್​ ಬಾಂಬ್​​ ಎಂದು ಕರೆಯಲ್ಪಡುವ ಥರ್ಮೋಬಾರಿಕ್​ ಶಸ್ತ್ರಾಸ್ತ್ರವನ್ನು ಉಕ್ರೇನ್​ ಮೇಲೆ ಪ್ರಯೋಗ ಮಾಡುತ್ತಿದೆ.

ರಷ್ಯಾ ಉಕ್ರೇನ್​ಗೆ ಮಾಡಲು ಹೊರಟಿರುವ ಹಾನಿ ಬಹುದೊಡ್ಡದು ಎಂದು ಆರೋಪಿಸಿದ್ದಾರೆ. ಮಾನವ ಹಕ್ಕು ಸಂಸ್ಥೆ ಆಮ್ನೆಸ್ಟಿ ಕೂಡ ಇದನ್ನು ಖಂಡಿಸಿದ್ದು, ರಷ್ಯಾದ ಫೋರ್ಸ್​​ಗಳು ಉಕ್ರೇನ್​ ವಿರುದ್ಧ ದಾಳಿ ಮಾಡಲು ನಿಷೇಧಿತ ಕ್ಲಸ್ಟರ್​ ಯುದ್ಧಸಾಮಗ್ರಿಗಳನ್ನು ಬಳಸುತ್ತಿರುವಂತೆ ತೋರುತ್ತಿದೆ.

ಉಕ್ರೇನ್​​ನ ಈಶಾನ್ಯದಲ್ಲಿರುವ ಒಂದು ಪ್ರೀಸ್ಕೂಲ್​ (ಅಂಗನವಾಡಿ)ನಲ್ಲಿ ನಾಗರಿಕರು ಆಶ್ರಯ ಪಡೆದಿದ್ದರು. ಹಾಗಿದ್ದಾಗ್ಯೂ ಅಲ್ಲಿ ಉಕ್ರೇನ್​ ದಾಳಿ ನಡೆಸಿದೆ ಎಂದು ಹೇಳಿದೆ.
ತಾನು ಉಕ್ರೇನ್​ ಮೇಲೆ ಯುದ್ಧ ಮಾಡುವುದಿಲ್ಲ ಎಂದು ಜಗತ್ತನ್ನು ನಂಬಿಸುತ್ತಲೇ ಬಂದ ರಷ್ಯಾ ಕೊನೆಗೂ ಅದನ್ನೇ ಮಾಡಿದೆ. ತಮ್ಮ ಗುರಿ ಉಕ್ರೇನ್​​ನ್ನುವಶಪಡಿಸಿ ಕೊಳ್ಳುವುದಲ್ಲ, ಅಲ್ಲಿನ ನಾಗರಿಕರನ್ನು ಕೊಲ್ಲುವುದಲ್ಲ ಎಂದು ಹೇಳುತ್ತಲೇ ಬಂದಿದ್ದ ರಷ್ಯಾ ಇದೀಗ ಉಕ್ರೇನ್​​ನಲ್ಲಿ ಸಿಕ್ಕಸಿಕ್ಕಲ್ಲಿ ಶೆಲ್​, ಬಾಂಬ್​, ಕ್ಷಿಪಣಿ ದಾಳಿ ನಡೆಸುತ್ತಿದೆ.

Ukraine has said an airstrike destroyed this military base building in the region of Sumy

ಇದರಿಂದ ಸಹಜವಾಗಿಯೇ ನಾಗರಿಕರೂ ಜೀವ ಬಿಡುತ್ತಿದ್ದಾರೆ. ನಿನ್ನೆ ಕರ್ನಾಟಕದ ವಿದ್ಯಾರ್ಥಿಯೊಬ್ಬ ರಷ್ಯಾ ಬಾಂಬ್​ ದಾಳಿಗೆ ಮೃತಪಟ್ಟಿದ್ದಾರೆ. ಈ ಮಧ್ಯೆ ಯುನೈಟೆಡ್​ ಸ್ಟೇಟ್ಸ್​​ ಮತ್ತು ಮಾನವ ಹಕ್ಕು ಗ್ರೂಪ್​ಗೆ ಉಕ್ರೇನ್​ನ ರಾಯಭಾರಿ ಗಂಭೀರ ಆರೋಪ ಮಾಡಿದ್ದಾರೆ.

ರಷ್ಯಾ ಕ್ಲಸ್ಟರ್​ ಬಾಂಬ್​ ಮತ್ತು ವಾಕ್ಯೂಮ್​​ ಬಾಂಬ್(ನಿರ್ವಾತ ಬಾಂಬ್​​​)​​ಗಳ ಮೂಲಕ ರಷ್ಯಾ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಾಕ್ಯೂಮ್​ ಮತ್ತು ಕ್ಲಸ್ಟರ್​ ಬಾಂಬ್​​ಗಳಿಂದ ದಾಳಿ ಮಾಡುತ್ತಿರುವ ಕ್ರಮವನ್ನು ಅಮ್ನೆಸ್ಟಿ ಇಂಟರ್​ನ್ಯಾಶನಲ್​ ಮತ್ತು ಹ್ಯೂಮನ್​ ರೈಟ್ಸ್​ ವಾಚ್​ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ.

ವ್ಯಾಕ್ಯೂಮ್ ಬಾಂಬ್ ಎಂದರೇನು?​: ಉಕ್ರೇನ್​ ಮೇಲೆ ರಷ್ಯಾ ನಿರ್ವಾತ ಬಾಂಬ್​​ಗಳ ಮೂಲಕ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹೀಗಂದರೆ ಏನು? ಯಾವ ರೀತಿ ಕಾರ್ಯ ನಿರ್ವಹಿಸುತ್ತವೆ ಎಂಬ ಕುತೂಹಲ ಹೆಚ್ಚಿದೆ. ಈ ವಾಕ್ಯೂಮ್​ ಅಥವಾ ನಿರ್ವಾತ ಬಾಂಬ್​​ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

ವ್ಯಾಕ್ಯೂಮ್​ ಬಾಂಬ್​​ಗಳನ್ನು ಥರ್ಮಾಬಾರಿಕ್​ ಬಾಂಬ್​​ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್​​ಗಳನ್ನು ಯಾವ ಜಾಗದಲ್ಲಿ ಎಸೆಯಲಾಗುತ್ತದೆಯೋ ಅಲ್ಲಿರುವ ವಸ್ತುಗಳು ಅಥವಾ ಜನರ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದ ಉಷ್ಣತೆ ಮತ್ತು ಒತ್ತಡವನ್ನು ಸೃಷ್ಟಿಸಿ ಸ್ಫೋಟಿಸುತ್ತದೆ.

ಇದು ಅತ್ಯಂತ ಭಯಾನಕ ಬಾಂಬ್​ ಎನ್ನಿಸಿಕೊಳ್ಳಲು ಕಾರಣ, ಸ್ಫೋಟಗೊಂಡಲ್ಲಿ ಇರುವ ಮಾನವರ ದೇಹವನ್ನು ಆವಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ವ್ಯಾಕ್ಯೂಮ್​ ಬಾಂಬ್​ ಸ್ಫೋಟಗೊಳ್ಳುವ ಜಾಗದ ಸುತ್ತಮುತ್ತ ಇರುವ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಅತ್ಯಂತ ಹೆಚ್ಚಿನ ತಾಪಮಾನದೊಂದಿಗೆ ಸ್ಫೋಟಗೊಳ್ಳುತ್ತದೆ.

A Russian multiple rocket launcher with a thermobaric weapon, seen here as part of a military exhibition

ಸಾಮಾನ್ಯ ಬಾಂಬ್​​ಗಳು ಸ್ಫೋಟವಾದಾಗ ಉಂಟಾಗುವ ಸ್ಫೋಟ ತರಂಗಗಳಿಗಿಂತಲೂ, ವ್ಯಾಕ್ಯೂಮ್​ ಬಾಂಬ್​ ಸ್ಫೋಟದ ತರಂಗಗಳು ಹೆಚ್ಚಿನ ಅವಧಿವರೆಗೆ ಇರುತ್ತವೆ.

ಇದರಲ್ಲಿ ಅನೇಕ ವಿಷಕಾರಿ ಲೋಹಗಳ ಪುಡಿಗಳನ್ನು ಬಳಕೆ ಮಾಡಲಾಗುತ್ತದೆ. ಸ್ಫೋಟದ ಸ್ಥಳದಲ್ಲಿರುವವರು ಸುಟ್ಟು ಹೋಗುತ್ತಾರೆ, ಸ್ಫೋಟದ ಸ್ಥಳದ ಸಮೀಪದಲ್ಲಿರುವವರು, ಸ್ಫೋಟದಿಂದ ಗಾಯಕ್ಕೆ ಒಳಗಾದವರೂ, ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೊಮ್ಮೆ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರ ದೇಹದೊಳಗಿನ ಅಂಗಗಳು ಕೆಲಸ ಮಾಡದಿರುವ ಸಾಧ್ಯತೆ ಇರುತ್ತದೆ.

ಇನ್ನೂ ಕೆಲವೊಮ್ಮೆ ಕಿವುಡುತನ, ಕುರುಡುತನಕ್ಕೂ ಕಾರಣವಾಗಬಹುದು. ಈಗ ರಷ್ಯಾ ಬಳಸುತ್ತಿದೆ ಎನ್ನಲಾದ ಥರ್ಮೋಬ್ಯಾರಿಕ್ ಶಸ್ತ್ರಗಳು ಸಾಮಾನ್ಯ ಬಾಂಬ್​ಗಳಂತೆ ಅಲ್ಲ. ಅವುಗಳಲ್ಲಿ ಆಮ್ಲಜನಕ ಇರುವುದಿಲ್ಲ. ಈ ಬಾಂಬ್​ಗಳಲ್ಲಿ ಶೇಕಡಾ 100ರಷ್ಟು ಇಂಧನ ಇರುತ್ತದೆ.

ಸೋವಿಯತ್ ಯೂನಿಯನ್ 1969ರ ಸಿನೋ-ಸೋವಿಯತ್ ಯುದ್ಧದಲ್ಲಿ ಚೀನಾದ ವಿರುದ್ಧ ಥರ್ಮೋಬ್ಯಾರಿಕ್ ಅಸ್ತ್ರಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ. 1979ರಲ್ಲಿ ಅಫ್ಘಾನಿಸ್ತಾನದಲ್ಲಿಯೂ ಪ್ರತ್ಯೇಕತಾವಾದಿಗಳಿಗೆ ಈ ಅಸ್ತ್ರಗಳನ್ನು ರಷ್ಯಾ ಒದಗಿಸಿದೆ ಎಂದು ಹೇಳಲಾಗಿದೆ. ವಿಯೆಟ್ನಾಂ ಮತ್ತು ಅಫ್ಘಾನಿಸ್ತಾನದಲ್ಲೂ ಅಮೆರಿಕ ಈ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ.

ಯುದ್ಧಗಳಲ್ಲಿಯೂ ಕೆಲವು ಕಾನೂನುಗಳನ್ನು ಅನೌಪಚಾರಿಕವಾಗಿ ಅಳವಡಿಕೆ ಮಾಡಿಕೊಳ್ಳಲಾಗಿದೆ. ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರಗಳನ್ನು ಇನ್ನೂ ನಿಷೇಧ ಮಾಡಲಾಗಿಲ್ಲ. ಆದರೆ ಈ ಅಸ್ತ್ರಗಳ ಅಭಿವೃದ್ಧಿ ಮತ್ತು ಬಳಕೆ ವಿರುದ್ಧ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಧ್ವನಿಯೆತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
/disk2/v/apache/htdocs/VIRTUAL/thatskannada/public_html/common/dw-tracking.html