ಇವನೇ ನೋಡಿ ಪುಟಿನ್ ಉತ್ತರಾಧಿಕಾರಿ; ಆತ ಯಾರು? ಅವನ್ನೆಷ್ಟು ಅಪಾಯಕಾರಿ?
ಸದ್ಯ ವಿಶ್ವದಲ್ಲಿ ಹಲವು ವಿಷಯಗಳ ಬಗ್ಗೆ ಜನರು ಮಾತನಾಡುತ್ತಾರೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ, ಮೂರನೇ ವಿಶ್ವ ಯುದ್ಧದ ಬಗ್ಗೆ ಹೀಗೆ ಹಲವು ಪ್ರಶ್ನೆಗಳನ್ನು ಜನ ಆಗಾಗ ಎತ್ತುತ್ತಲೇ ಇರುತ್ತಾರೆ. ಈ ಎಲ್ಲ ಪ್ರಶ್ನೆಗಳ ನಡುವೆ ಎದ್ದು ಕಾಣುವ ಇನ್ನೊಂದು ಪ್ರಶ್ನೆ ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಚರ್ಚೆಗಳು ಆಗಾಗ್ಗೆ ನಡೆಯುತ್ತಲೆ ಇರುತ್ತವೆ.
ಈ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಈಗ ದೊಡ್ಡ ನೇಮಕವನ್ನು ಮಾಡಿದ್ದಾರೆ. ಈ ಮೂಲಕ ಅವರು ತಮ್ಮ ಉತ್ತರಾಧಿಕರಿಯನ್ನು ಇವನೇ ಎಂದು ಹೇಳಲಿಲ್ಲ. ಆದರೆ ಬೊಟ್ಟು ಮಾತ್ರ ಅವರತ್ತ ತೋರುವಂತೆ ಮಾಡುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಸಲಹಾ ರಾಜ್ಯ ಮಂಡಳಿಯ ಕಾರ್ಯದರ್ಶಿಯಾಗಿ ನೇಮಸಲಾಗಿರುವ ವ್ಯಕ್ತಿಯ ಬಗ್ಗೆ ಈ ಭಾರೀ ಚರ್ಚೆಗಳು ಆರಂಭವಾಗಿವೆ.

ಪುಟಿನ್ ತನ್ನ ಮಾಜಿ ಭದ್ರತಾ ಸಿಬ್ಬಂದಿ ಅಲೆಕ್ಸಿ ಡ್ಯುಮಿನ್ ಅವರನ್ನು ಸಲಹಾ ರಾಜ್ಯ ಮಂಡಳಿಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಈಗ ಡುಮಿನ್ ಅಧ್ಯಕ್ಷ ಪುಟಿನ್ ಅವರ ಸಲಹೆಗಾರರಲ್ಲಿ ಒಬ್ಬರಾಗಲಿದ್ದಾರೆ. ಪುಟಿನ್ ಅಲೆಕ್ಸಿ ಡ್ಯುಮಿನ್ ಅವರನ್ನು ಅವರ ಉತ್ತರಾಧಿಕಾರಿಯನ್ನಾಗಿ ಮಾಡಬಹುದು ಎಂಬ ವರದಿಗಳು ಹರಡಲು ಆರಂಭಿಸಿವೆ. ಬುಧವಾರ ಕ್ರೆಮ್ಲಿನ್‌ನ ವೆಬ್‌ಸೈಟ್‌ನಲ್ಲಿ ಈ ಕುರಿತು ಆದೇಶವನ್ನು ಪ್ರಕಟಿಸಲಾಗಿದೆ. ಆದಾಗ್ಯೂ, ಅದರಲ್ಲಿ ಅಲೆಕ್ಸಿ ಡುಮಿನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಪುಟಿನ್ ಆಯ್ಕೆ ಮಾಡಿದ ರಷ್ಯಾದ ಭವಿಷ್ಯದ ಅಧ್ಯಕ್ಷ ಡುಮಿನ್ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ. ಅದೇನೆಂದರೆ ಪುಟಿನ್ ತಮ್ಮ ಉತ್ತರಾಧಿಕಾರಿಯಾಗಿ ಡುಮಿನ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ.
ಅಲೆಕ್ಸಿ ಡ್ಯುಮಿನ್ ಸಲಹಾ ರಾಜ್ಯ ಮಂಡಳಿಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇವರು 72 ವರ್ಷದ ಇಗೊರ್ ಲೆವಿಟಿನ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪುಟಿನ್ ಯಾವುದೇ ಹುದ್ದೆಗೆ ನೇಮಕ ಮಾಡಿದಾಗ ಪ್ರಪಂಚಾದ್ಯಂತ ಭಾರೀ ಚರ್ಚೆಗಳು ಆರಂಭವಾಗಿವೆ. ಈಗಲೂ ಸಹ ಪುಟಿನ ಆಯ್ಕೆ ಬಗ್ಗೆ ಹಲವು ಚರ್ಚೆಗಳು ಆರಂಭವಾಗಿವೆ.
ಡ್ಯುಮಿನ್ ಯಾರು?
ಡ್ಯುಮಿನ್ 1972 ರಲ್ಲಿ ಕುರ್ಸ್ಕ್ (ಪಶ್ಚಿಮ ರಷ್ಯಾ) ನಲ್ಲಿ ಜನಿಸಿದರು. ಇವರು 1995 ರಲ್ಲಿ, ಅವರು ಫೆಡರಲ್ ಗಾರ್ಡ್ಸ್ ಸೇವೆ (FSO) ಗೆ ಸೇರಿದರು. ಡ್ಯುಮಿನ್ ರಷ್ಯಾದ ಅಧ್ಯಕ್ಷ ಪುಟಿನ್ ಅವರ ಬಾಡಿ ಗಾರ್ಡ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಇವರಿಗೆ ಅಧ್ಯಕ್ಷೀಯ ಅಂಗರಕ್ಷಕ ದಳದ ಉಪ ಮುಖ್ಯಸ್ಥರನ್ನಾಗಿ ಕೆಲಸ ಮಾಡಿರುವ ಅನುಭವ ಇದೆ. ಮತ್ತು ಮಿಲಿಟರಿ ಗುಪ್ತಚರ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications