ಅಮೆರಿಕಗೆ ಎಚ್ಚರಿಕೆ ನೀಡಿದ ಇರಾನ್, ಮತ್ತೊಂದು ವಾರ್ ಶುರುವಾಗುತ್ತಾ?
ಇರಾನ್ & ಅಮೆರಿಕ ನಡುವೆ ಬೆಂಕಿ ಆರಿಲ್ಲ, ಇಬ್ಬರು ಕೂಡ ಆಜನ್ಮ ವೈರಿಗಳ ರೀತಿಯಲ್ಲೇ ಬದುಕುತ್ತಿದ್ದಾರೆ. ಒಂದು ಕಡೆ ಇರಾನ್ ತನ್ನ ಅಣ್ವಸ್ತ್ರ ಯೋಜನೆಗಳನ್ನು ಬಿಟ್ಟು ಶರಣಾಗಲು ಸಿದ್ಧವಿಲ್ಲ, ಇನ್ನೊಂದು ಕಡೆ ಅಮೆರಿಕ ಕೂಡ ತಗ್ಗಿಬಗ್ಗಿ ನಡೆಯುತ್ತಿಲ್ಲ. ಹೀಗೆ ಇಬ್ಬರ ಮಧ್ಯೆ ದೊಡ್ಡ ತಿಕ್ಕಾಟ ಶುರುವಾಗಿದೆ. ಅಣು ಒಪ್ಪಂದ ವಿಚಾರವಾಗಿ ಇಬ್ಬರೂ ಕಿತ್ತಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ಅಮೆರಿಕಗೆ ಎಚ್ಚರಿಕೆ ನೀಡಿದ ಇರಾನ್, ಮತ್ತೊಂದು ವಾರ್ ಶುರು?
ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್‌ಗೆ ಪ್ರಬಲ ವಿರೋಧಿ ಆಗಿ ಗುರುತಿಸಿಕೊಂಡಿರುವ ಇರಾನ್ ಪದೇ ಪದೇ ವಿರೋಧ ಎದುರಿಸುತ್ತಲೇ ಇದೆ. ಹೀಗಾಗಿ ಅಮೆರಿಕ & ಇಸ್ರೇಲ್ ಮಾಡುವ ದಾಳಿಗಳು ಹಾಗೂ ಆಘಾತವನ್ನು ಕೂಡ ಸಹಿಸಿಕೊಂಡು ಬದುಕುವ ಅನಿವಾರ್ಯತೆ ಇದೀಗ ಇರಾನ್‌ಗೆ ಇದೆ. ಇಷ್ಟೆಲ್ಲದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ಮಹತ್ವದ ಒಪ್ಪಂದಕ್ಕೆ ಪ್ಲಾನ್ ಮಾಡಿದ್ದರು. ಆದರೆ ಇರಾನ್ ಮಾತ್ರ ಇದೀಗ ಗರಂ ಆಗಿದೆ. ಹಾಗಾದ್ರೆ ಇರಾನ್ ಹೇಳಿದ್ದು ಏನು?

ಅಮೆರಿಕ & ಇರಾನ್ ಯುದ್ಧ ಶುರು?
ಜಗತ್ತಿನಲ್ಲಿ ಮತ್ತೊಂದು ಯುದ್ಧಕ್ಕೆ ಇದೀಗ ರಣ ಕಹಳೆ ಮೊಳಗಿದಂತೆ ಕಾಣುತ್ತಿದೆ. ಈ ಮಾತಿಗೆ ಕಾರಣವಾಗಿದ್ದು ಇರಾನ್, ಯಾಕಂದ್ರೆ ಪರಮಾಣು ಶಕ್ತಿ ಬಳಕೆ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಜಗಳ ಮತ್ತಷ್ಟು ಹೆಚ್ಚಾಗ್ತಿದೆ. ಇದೇ ಕಾರಣಕ್ಕೆ ಈಗ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಶುರುವಾಗುವ ಭಯ ಕೂಡ ಆವರಿಸಿದೆ. ಅದ್ರಲ್ಲೂ ಇರಾನ್ ಸುಪ್ರೀಂ ಲೀಡರ್ ಅಂತಾನೇ ಕರೆಸಿಕೊಳ್ಳುವ ಖಮೇನಿ ನೇರವಾಗಿ ಅಮೆರಿಕಗೆ ಎಚ್ಚರಿಕೆ ಸಂದೇಶವನ್ನು ಇದೀಗ ರವಾನಿಸಿದ್ದಾರೆ. ನಾವು ಪರಮಾಣು ಶಕ್ತಿ ಬಳಸಲು ಯಾರ ಅನುಮತಿ ಕೂಡ ಬೇಕಾಗಿಲ್ಲ, ಎಂದಿರುವ ಖಮೇನಿ ಮತ್ತೊಂದು ಯುದ್ಧಕ್ಕೆ ಆಹ್ವಾನ ನೀಡಿದಂತೆ ಇದೆ.












Click it and Unblock the Notifications