60 ವರ್ಷದಿಂದ ಈ ಮನುಷ್ಯ ಸ್ನಾನವನ್ನೇ ಮಾಡಿಲ್ಲ

Iranian 80 year-old man Amou Haji Amou Haji has not taken bath for 60 years
ಇರಾನ್, ಜ.16- 'ಈ ಮನುಷ್ಯ ನಿಜಕ್ಕೂ ಕೆಟ್ಟಾ ಕೊಳಕು ಮನುಷ್ಯ ಕಣ್ರೀ' ಅಂತೀವಿ ಯಾರಾದರೂ ಒಂದೆರಡು ದಿನ ಸ್ನಾನ ಮಾಡುವುದನ್ನು ಬಿಟ್ಟಿದ್ದರೆ. ಆದ್ರೆ ಇಲ್ಲೊಬ್ಬ ಮನುಷ್ಯ ಇದ್ದಾನೆ ಕಣ್ರೀ 60 ಹೌದು ಸರಿಯಾಗಿ ಅರವತ್ತು ವರ್ಷದಿಂದ ಸ್ನಾನವನ್ನೇ ಮಾಡಿಲ್ಲ!

ಅಷ್ಟೇ ಅಲ್ರೀ ಅಪಾ, ಕೊಳೆತ ಮುಳ್ಳುಹಂದಿಯ ಮಾಂಸವನ್ನೇ ತಿಂದು ''ಬದುಕಿದ್ದಾನೆ!''. ಸದ್ಯ ಈ ಮನುಷ್ಯ ಇಲ್ಲೆಲ್ಲೂ ಇಲ್ಲ. ಇವ ದೂರದ ಇರಾನಿನವ. ಹಾಗಾಗಿ ಸುದ್ದಿ ಓದುತ್ತಿದ್ದಂತೆ ತಕ್ಷಣ ಮೂಗುಮುಚ್ಚಿಕೊಳ್ಳುವ ಪ್ರಮೇಯವೇನೂ ಇಲ್ಲ.

ಸದ್ಯಕ್ಕೆ ಈ ಮನುಷ್ಯನಿಗೆ ಹೆಂಡ್ರು-ಮಕ್ಕಳು ಅಂತೇನೂ ಇಲ್ಲ. ಏಕಾಂಗಿಯಾಗಿ ''ಜೀವಿಸುತ್ತಿದ್ದಾನೆ!''. ಅಂದಹಾಗೆ ಈ 60 ವರ್ಷಗಳಲ್ಲಿ ಈ ಮನುಷ್ಯ ಸ್ನಾನಕ್ಕೆಂದು ನೀರನ್ನೇ ಮುಟ್ಟಿಲ್ಲ.

ಇಂತಿಪ್ಪ ವಿಚಿತ್ರ ಮನುಷ್ಯನ ನಾಮಧೇಯ ಅಮೂ ಹಾಜಿ ಅಂತ. ಪ್ರಸ್ತುತ 80 ವರ್ಷದ ಅಮೂ ಹಾಜಿ ಇರಾನಿನ ದಕ್ಷಿಣ ಪ್ರಾಂತ್ಯದಲ್ಲಿರುವ ದೇಜಗಾ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಈಯಪ್ಪನಿಗೆ ಕ್ಲೀನ್ ಆಗಿ ಇರುವುದೆಂದರೆ ಆಗಿಬರುವುದಿಲ್ಲವಂತೆ.

ಇವನ ಸಂಗ ಬಯಸುವುದಾದರೆ ನೀವೂ ಮೊದಲು ಕೊಳಕು ಕೊಳಾಗಬೇಕಂತೆ! ಇವನಿಗೆ ತಾಜಾ ಆಹಾರವೂ ಅಪಥ್ಯವೇ. ಕೊಳೆತ ಮುಳ್ಳುಹಂದಿಯ ಮಾಂಸವೆಂದರೆ ಈತನಿಗೆ ಪಂಚಪ್ರಾಣ. ಇವನಿಗೆ ಸ್ಮೋಕಿಂಗ್ ಶೋಕಿಯೂ ಇದೆ. ಆದರೆ ಪ್ರಾಣಿಗಳ ದುರ್ನಾತ ಬೀರುವ ಮಲವನ್ನು ಪೈಪ್ ನಲ್ಲಿ ತುಂಬಿ, ಧಂ ಎಳೆಯುತ್ತಾನೆ ಈ ವಿಚತ್ರ ಆಸಾಮಿ.

ಅದೆಲ್ಲಾ ಸರಿ ಈ ಮನುಷ್ಯ ಯಾಕೆ ಹೀಗಾದ ಅಂದರೆ ಗೊಳೋ ಅಂತ ತನ್ನ ಗೋಳು ತೋಡಿಕೊಳ್ಳುತ್ತಾನೆ. ಚಿಕ್ಕವನಿದ್ದಾಗ ತನಗಾದ ಸಾಂಸಾರಿಕ ನೋವಿನಿಂದ ಹೀಗೆ ಬದಲಾಗಿದ್ದಾಗಿ ಹೇಳಿಕೊಳ್ಳುತ್ತಾನೆ. ಕಿಲುಬಿಡಿದ ತೈಲದ ಕ್ಯಾನಿನಲ್ಲಿ ತುಂಬಿಟ್ಟ ನೀರನ್ನು ಈತ ಕುಡಿಯುತ್ತಾನೆ. ಸರಿ, ತಲೆಗೂದಲು ಕಟ್ ಮಾಡಿಸಿಕೊಳ್ಳಬೇಕು ಅಂದರೆ ಬೆಂಕಿ ಗುಡ್ಡೆ ಹಾಕಿ ಅದರಲ್ಲಿ ತಲೆಗೂದನ್ನು ಸುಟ್ಟುಕೊಂಡು ಹೇರ್ ಕಟ್ ಮಾಡಿಕೊಳ್ಳುತ್ತಾನೆ. ಯಕ್ಕು, ಇಷ್ಟೇ ಸಾಕು ಇವನ ಪ್ರವರ!

ಅಂದಹಾಗೆ ಭಾರತದ 66 ವರ್ಷದ ಕೈಲಾಶ್ ಸಿಂಗ್ ಎಂಬ ವ್ಯಕ್ತಿ 38 ವರ್ಷ ಸುದೀರ್ಘ ಕಾಲ ಹೀಗೆಯೇ ಸ್ನಾನ ಮಾಡದೇ ಜೀವಿಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+