Iran President: ಇರಾನ್ ನೂತನ ಅಧ್ಯಕ್ಷರ ಹೆಸರು ಘೋಷಣೆ!

ಅಮೆರಿಕ ವಿರುದ್ಧ ಕೊತ ಕೊತ ಕುದಿಯುತ್ತಿರುವ ಇರಾನ್ ದೇಶದಲ್ಲಿ ಇದೀಗ ಹೊಸ ಪರ್ವ ಆರಂಭವಾಗಿದೆ. ಅಧ್ಯಕ್ಷರ ಸಾವಿನ ನಂತರ ಇರಾನ್ ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲಪಿತ್ತು. ಇಂತಹ ಸಂದರ್ಭದಲ್ಲೇ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ, ಇರಾನ್ ದೇಶಕ್ಕೆ ಹೊಸ ಅಧ್ಯಕ್ಷರ ಆಗಮನವಾಗಿದೆ!

ಹೌದು, ಅಜೆರ್‌ಬೈಜಾನ್ ದೇಶದಲ್ಲಿ‌ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ಇರಾನ್ ದೇಶದ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅತಿಥಿಯಾಗಿ ಹೋಗಿದ್ದರು. ಆದ್ರೆ ಇದೇ ಸಮಯದಲ್ಲಿ ಭೀಕರ ದುರಂತ ನಡೆದಿತ್ತು. ಈ ಮೂಲಕ ಇರಾನ್ ಸೇನೆ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ? ಎಂಬ ಪ್ರಶ್ನೆ ಕಾಡಿತ್ತು. ಯಾಕಂದ್ರೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನಲ್ಲಿ ಇಸ್ರೇಲ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಿದ್ದಾಗಲೇ ಇರಾನ್‌ಗೆ ಹೊಸ ಅಧ್ಯಕ್ಷರ ಎಂಟ್ರಿ ಆಗಿದೆ!

Iran Supreme Leader Announced The Iran New President Name

ಇರಾನ್ ಯುದ್ಧಕ್ಕೆ ಸಜ್ಜಾಗುತ್ತಿದೆಯಾ?

ಇತ್ತೀಚೆಗೆ ಇರಾನ್ ದೇಶದಲ್ಲಿ ಚುನಾವಣೆ ನಡೆಸಲಾಗಿತ್ತು ಇರಾನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಾ. ಮಸೂದ್‌ ಪೆಜೆಶ್ಕಿಯಾನ್‌ ಅವರನ್ನ, ನೂತನ ಅಧ್ಯಕ್ಷ ಅಂತಾ ಇರಾನ್‌ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅಧಿಕೃತವಾಗಿ ಘೋಷಿಸಿದರು. ಈ ಮೂಲಕ ಬೂದಿ ಮುಚ್ಚಿದ ಕೆಂಡವಾಗಿದ್ದ ಇರಾನ್ ಪರಿಸ್ಥಿತಿ ಇದೀಗ ಒಂದು ಸ್ವಲ್ಪ ಸುಧಾರಣೆಯನ್ನ ಕಂಡಂತೆ ತೋರುತ್ತಿದೆ. ಅಲ್ಲದೆ ಮತ್ತೊಂದು ಕಡೆ ಇಸ್ರೇಲ್ ವಿರುದ್ಧ ಇರಾನ್ ಸೇಡಿನ ವಿಚಾರ ಕೂಡ ಮತ್ತೆ ಮುನ್ನೆಲೆಗೆ ಬಂದಿದ್ದು, ಯುದ್ಧ ಶುರು ಮಾಡುತ್ತಾ ಇರಾನ್? ಎಂಬ ಪ್ರಶ್ನೆಯು ಕಾಡತೊಡಗಿದೆ.

ಹೊಸ ಅಧ್ಯಕ್ಷರಿಗೆ ಸಲಹೆಗಳು...

ಡಾ. ಮಸೂದ್‌ ಪೆಜೆಶ್ಕಿಯಾನ್‌ ಪ್ರಮಾಣ ವಚನ ಸ್ವೀಕಾರಕ್ಕೂ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 30 ರಂದು ಅಂದ್ರೆ ನಾಳೆ ಡಾ. ಮಸೂದ್‌ ಪೆಜೆಶ್ಕಿಯಾನ್‌ ಇರಾನ್ ದೇಶದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಡಾ. ಮಸೂದ್‌ ಪೆಜೆಶ್ಕಿಯಾನ್ ಆಯ್ಕೆ ಬಗ್ಗೆ ಮಾತನಾಡಿದ ಇರಾನ್‌ ಸರ್ವೋಚ್ಛ ನಾಯಕ ಆಯತುಲ್ಲಾ ಖಮೇನಿ, ಅಧ್ಯಕ್ಷ ಡಾ. ಮಸೂದ್‌ ಪೆಜೆಶ್ಕಿಯಾನ್‌ ಅವರಿಗೆ ಹಲವು ಸಲಹೆ ನೀಡಿದರು. ಪ್ರಮುಖವಾಗಿ ಆಫ್ರಿಕಾ ಖಂಡದ ಹಾಗೂ ಏಷ್ಯಾ ದೇಶಗಳಿಗೆ ಆದ್ಯತೆ ನೀಡಿ ಇರಾನ್‌ಗೆ ಬೆಂಬಲ ಮತ್ತು ಸಹಕಾರ ನೀಡಿದವರನ್ನು ಎಂದೂ ಮರೆಯಬೇಡಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+