ಇರಾನ್‌ ನೌಕಾದಳದಲ್ಲಿ ಭೀಕರ ಅವಘಡ: 19 ಯೋಧರು ಸಾವು

ಟೆಹರಾನ್, ಮೇ 11: ಇರಾನ್‌ನ ನೌಕಾಪಡೆಯಲ್ಲಿ ಭೀಕರ ಅವಘಡ ಸಂಭವಿಸಿದೆ. ನೌಕಾಪಡೆಯ ಸಮರಾಭ್ಯಾಸದಲ್ಲಿ ಉಡಾಯಿಸಿದ ಕ್ಷಿಪಣಿಯೊಂದು ಯುದ್ಧನೌಕೆಗೆ ಬಡಿದು ಇರಾನ್‌ನ 19 ಯೋಧರು ಮೃತಪಟ್ಟಿದ್ದಾರೆ.

ಭಾನುವಾರ ಓಮನ್ ಕೊಲ್ಲಿಯಲ್ಲಿ ಸಮರಾಭ್ಯಾಸ ನಡೆಸುವ ವೇಳೆ ಹಲವು ಯುದ್ದ ನೌಕೆಗಳ ಪಾಲ್ಗೊಂಡಿದ್ದವು. ಸಂಜೆಯ ವೇಳೆ ಇರಾನ್‌ನ ಒಂದು ದೊಡ್ಡ ಹಡಗಿನಿಂದ ಉಡಾಯಿಸಿದ ಕ್ಷೀಪಣಿ ಕೋನಾರ್ಕ್ ಎನ್ನುವ ಮಿನಿ ಸಮರ ನೌಕೆಯ ಮೇಲೆ ಬಂದು ಎರಗಿದೆ.

ಕ್ಷಿಪಣಿಯ ರಬಸಕ್ಕೆ ಕೋನಾರ್ಕ್ ಹಡಗು ಪುಡಿ ಪುಡಿಯಾಗಿದ್ದು, ಸಮುದ್ರದಲ್ಲಿ ಸಂಪೂರ್ಣ ಮುಳುಗಿದೆ ಎಂದು ಇರಾನ್ ಸೇನೆಯ ಮಾಧ್ಯಮ ಮಾಹಿತಿ ತಿಳಿಸಿವೆ. ಘಟನೆಲ್ಲಿ 15 ಯೋಧರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿವೆ.

Iran Missile Hits Own Navy Ship 19 Solders Died

ಕೋನಾರ್ಕ್ ಮಿನಿ ಸಮರ ನೌಕೆಯು ಡಚ್ ನಿರ್ಮಿತ ಯುದ್ಧನೌಕೆಯಾಗಿತ್ತು. 2018 ರಲ್ಲಿ ಇರಾನ್‌ ಸೇನೆಗೆ ಸೇರ್ಪಡೆಯಾಗಿತ್ತು. ಘಟನೆ ನಡೆದ ಓಮನ್ ಕೊಲ್ಲಿ ಇರಾನ್‌ನ ತೈಲ ಸಾಗಾಣೆಯ ಬಹುಮುಖ್ಯ ಮಾರ್ಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+