ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆಯಾ ಇರಾನ್?

ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ತಿಕ್ಕಾಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇಬ್ಬರ ಮಧ್ಯೆ ಕಿರಿಕ್ ಬಲು ಜೋರಾಗಿದ್ದು, ಇರಾನ್ ನೆಲಕ್ಕೆ ನುಗ್ಗಿ ಇಸ್ರೇಲ್ ಅಧಿಕಾರಿಗಳು ಹಮಾಸ್ ಮುಖ್ಯಸ್ಥನ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಇರಾನ್ ಮತ್ತೊಮ್ಮೆ ರಿವೇಂಜ್ ಬಗ್ಗೆ ಗುಡುಗಿದೆ!

ಹೌದು, ಕೆಲವು ದಿನಗಳ ಹಿಂದಷ್ಟೇ ಇರಾನ್ ಅಧ್ಯಕ್ಷರು ಹೆಲಿಕಾಪ್ಟರ್ ದುರಂತದಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಆ ನಂತರ ಇರಾನ್ ದೇಶದಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಮತದಾನ ನಡೆದಿತ್ತು. ಹೀಗೆ ಆಯ್ಕೆ ಆಗಿದ್ದ ಹೊಸ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಮಾಸ್ ಮುಖ್ಯಸ್ಥ ಕೂಡ ಅತಿಥಿ ಆಗಿ ಇರಾನ್ ದೇಶಕ್ಕೆ ಬಂದಿದ್ದರು. ಹೀಗೆ ಬಂದಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ ಮಾಡಲಾಗಿತ್ತು. ಇಸ್ರೇಲ್‌ನ ಕಡೆಯಿಂದ ಈ ಕೊಲೆ ಆಗಿದೆ ಎಂದು ಇರಾನ್ ರೊಚ್ಚಿಗೆದ್ದಿದೆ. ಅಲ್ಲದೆ ಈ ಕೃತ್ಯಕ್ಕೆ ಅಮೆರಿಕ ಬೆಂಬಲ ನೀಡಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಅಂದ್ರೆ ಇರಾನ್‌ನ ಸೇನೆ ಗಂಭೀರ ಆರೋಪ ಮಾಡಿದೆ.

Iran Is Once Again Gave Hint About Revenge Against The Israel

ಯುದ್ಧದ ಭಯದಲ್ಲಿ ನಿತ್ಯ ನರಳಾಟ

ಹೀಗೆ ಇರಾನ್ ದೇಶದಲ್ಲಿ ಸಾಲು ಸಾಲು ರಾಜಕೀಯ ನಾಯಕರ ಹತ್ಯೆ ನಡೆಯುತ್ತಿವೆ. ಇದೇ ವಿಚಾರ ಇದೀಗ ಇರಾನ್ ದೇಶವನ್ನ ಕೆರಳಿ ಕೆಂಡವಾಗುವಂತೆ ಮಾಡಿದೆ. ಹೀಗಾಗಿ ಹಮಾಸ್ ಮುಖ್ಯಸ್ಥನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಇದೀಗ ಪಣತೊಟ್ಟಿದೆ ಇರಾನ್. ಒಟ್ಟಾರೆ 7 ಕೆಜಿ ತೂಕ ಇದ್ದ ರಾಕೆಟ್‌ ಅನ್ನು ಬಳಸಿ ಹನಿಯೆ ಮನೆ ಮೇಲೂ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಗಾಜಾ ಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಯುದ್ಧವನ್ನ ಸಾರಿದೆ. ಇದೇ ಸಮಯದಲ್ಲಿ ಇರಾನ್ ಜೊತೆಗೆ ಕೂಡ ಇಸ್ರೇಲ್ ವಾರ್ ಶುರುವಾಗುವ ಬಗ್ಗೆ ಭಯ ಆವರಿಸಿದೆ.

ಇರಾನ್‌ಗೆ ಸಂದೇಶ ನೀಡಿದ ಅಮೆರಿಕ?

ಅಮೆರಿಕ & ಇಸ್ರೇಲ್ ನಡುವೆ ಹಲವು ವರ್ಷಗಳ ರಾಜಕೀಯ ಸಂಬಂಧ ಇದೆ. ಹೀಗಾಗಿ ಇದೀಗ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ & ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಅವರು ಇಸ್ರೇಲ್ ಪ್ರಧಾನಿ ಜೊತೆಗೆ ಮಾತನಾಡಿದ್ದಾರೆ. ಅಲ್ಲದೆ ಇರಾನ್ ಸೇರಿ ಯಾವುದೇ ಸಂಘಟನೆಯಿಂದ ಇಸ್ರೇಲ್‌ಗೆ ಅಪಾಯ ಎದುರಾದರೆ ಅಮೆರಿಕ ಬೆಂಬಲ ನೀಡಲಿದೆ, ಈ ಮೂಲಕ ಇಸ್ರೇಲ್ ಬೆನ್ನಿಗೆ ನಿಲ್ಲಲಿದೆ ಎಂಬ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+