ಇಸ್ರೇಲ್ ಪ್ರಧಾನಿಗೆ ಅರೆಸ್ಟ್ ವಾರಂಟ್ ಜಾರಿಯಾಗುತ್ತಾ?

ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿರುವ ಇಸ್ರೇಲ್ & ಹಮಾಸ್ ಗಾಜಾಪಟ್ಟಿ ನಗರವನ್ನು, ಅಕ್ಷರಶಃ ನರಕ ಮಾಡಿವೆ. ಈಗಾಗಲೇ ಸಾವಿರಾರು ಜನರ ಜೀವ ತೆಗೆದು, ಲಕ್ಷಾಂತರ ಜನರು ಬೀದಿಗೆ ಬೀಳುವಂತೆ ಮಾಡಿರುವ ಆರೋಪ ಇಸ್ರೇಲ್ ಸೇನೆ ಮತ್ತು ಅಲ್ಲಿನ ನಾಯಕರ ವಿರುದ್ಧ ಇದೆ. ಈ ಸಮಯದಲ್ಲೇ ಇಸ್ರೇಲ್ ಪ್ರಧಾನಿಗೆ ಬಂಧನದ ಭೀತಿ ಶುರುವಾಗಿದೆ!

ಹೌದು, ಪ್ಯಾಲೆಸ್ತೀನ್ ಯುದ್ಧದ ವಿಚಾರವಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಈಗ ಇಸ್ರೇಲ್‌ನ ನಾಯಕರ ವಿರುದ್ಧ ವಾರಂಟ್ ಜಾರಿಗೊಳಿಸುವ ಭಯ ಆವರಿಸಿದೆ. ಈ ಕುರಿತಾಗಿ, ಇಸ್ರೇಲ್‌ನ ಅಧಿಕಾರಿಗಳು ಆತಂಕ ಹೊರಹಾಕಿದ್ದಾರೆ. ಯುದ್ಧ ಶುರುವಾಗಿ 7 ತಿಂಗಳು ಈಗ ಕಳೆದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಿಲ್ಲಿಸಲು ಈಗಾಗಲೇ ಭಾರಿ ಒತ್ತಡವು ಏರ್ಪಟ್ಟಿದೆ. ಆದ್ರೂ ಇಸ್ರೇಲ್ ಮಾತ್ರ ತನ್ನ ಹಠವನ್ನು ಬಿಟ್ಟು ಯುದ್ಧ ನಿಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ 3ನೇ ಮಹಾಯುದ್ಧದ ಭಯ ಆವರಿಸಿದೆ.

International Criminal Court May Issue Notice To Israel

7 ತಿಂಗಳು ಕಳೆದರೂ ನಿಲ್ಲದ ಯುದ್ಧ!

ಅಕ್ಟೋಬರ್ 7 ರಂದು ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000 ರಾಕೆಟ್‌ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿದ್ರು. ಹೀಗೆ ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಹತ್ತಿರ ಹತ್ತಿರ 7 ತಿಂಗಳುಗಳೇ ಕಳೆದಿದೆ. ಹೀಗೆ 7 ತಿಂಗಳ ಅವಧಿಯಲ್ಲಿ, ತನ್ನ ಶತ್ರು ನಾಶ ಮಾಡಲು ಇಸ್ರೇಲ್ ಬಳಸಿರುವುದು ಸಾವಿರಾರು ಟನ್ ಬಾಂಬ್‌ ಎಂದು ಆರೋಪ ಮಾಡಲಾಗಿದೆ. ಮತ್ತೊಂದು ಕಡೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನ ಗಾಜಾಪಟ್ಟಿಯ ಪ್ರದೇಶದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದಿದೆ.

ಯುದ್ಧ ನಿಲ್ಲಿಸಲು ಸರ್ವ ಪ್ರಯತ್ನ

ಕೆಲವು ತಿಂಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಕೂಡ ವಾರಂಟ್ ಜಾರಿ ಮಾಡಿತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್. ಈಗ ಇಸ್ರೇಲ್ ಪ್ರಧಾನಿ ಕೂಡ ಅರೆಸ್ಟ್ ವಾರಂಟ್ ಪಡೆಯುವ ಭಯದಲ್ಲಿ ಇದ್ದಾರೆ. ಹೀಗೆ, ಇಸ್ರೇಲ್ & ಹಮಾಸ್ ಯುದ್ಧ ಅಂತಿಮ ಹಂತಕ್ಕೆ ಪ್ರವೇಶ ಪಡೆದಂತೆ ಕಾಣುತ್ತಿದೆ. ಮತ್ತೊಂದು ಕಡೆ ಯುದ್ಧ ನಿಲ್ಲಿಸಲು, ಗಾಜಾಪಟ್ಟಿ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿದೆ. ಹೀಗಾಗಿ ಅಮೆರಿಕ ಕೂಡ ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಯುದ್ಧ ನಿಲ್ಲಿಸಲು ಸರ್ವ ಪ್ರಯತ್ನ ಆರಂಭಿಸಿದೆ.

ಒಟ್ನಲ್ಲಿ ಇಸ್ರೇಲ್ & ಹಮಾಸ್ ಯುದ್ಧ ಭಯಾನಕವಾಗಿದ್ದು, ಲಕ್ಷಾಂತರ ಜನರು ಬೀದಿಗೆ ಬಿದ್ದು ನರಳುತ್ತಿದ್ದಾರೆ. ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದು, ಯುದ್ಧ ನಿಲ್ಲಿಸಬೇಕು ಎಂಬ ನಿಲುವಿಗೆ ಬದ್ಧವಾಗಿದೆ. ಆದರೆ ಯುದ್ಧ ನಿಲ್ಲುತ್ತಾ? ಅಥವಾ ಮತ್ತೆ ಮುಂದುವರಿಯುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+