Get Updates
Get notified of breaking news, exclusive insights, and must-see stories!

ಇನ್‌ಸ್ಟಾಗ್ರಾಮ್‌, ಟಿಕ್‌ಟಾಕ್‌, ಯೂಟ್ಯೂಬ್‌ನ 236 ಮಿಲಿಯನ್ ಬಳಕೆದಾರರ ಡೇಟಾ ಲೀಕ್

ನವದೆಹಲಿ, ಆಗಸ್ಟ್‌ 21: ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್, ಕಿರು ವೀಡಿಯೋ ತಯಾರಿಕಾ ಆ್ಯಪ್ ಟಿಕ್‌ ಟಾಕ್, ಯೂಟ್ಯೂಬ್ ಬಳಕೆದಾರರ ಭಾರೀ ಡೇಟಾ ಸೋರಿಕೆಯು ವರದಿಯಾಗಿದೆ.

ಸುಮಾರು 235 ಮಿಲಿಯನ್‌ ಬಳಕೆದಾರರ ಪ್ರೊಫೈಲ್ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ ಎಂಬುದನ್ನ ಭದ್ರತಾ ಸಂಶೋಧನಾ ತಂಡವೊಂದು ಬಹಿರಂಗಪಡಿಸಿದೆ.

ಡಾರ್ಕ್‌ವೆಬ್ ಆಡಿಟ್‌ನಿಂದ, ಹ್ಯಾಕರ್‌ 386 ಮಿಲಿಯನ್ ಕದ್ದ ದಾಖಲೆಗಳನ್ನು ಉಚಿತವಾಗಿ ನೀಡಿದೆ ಎಂದು ಈ ಸಂಶೋಧನಾ ತಂಡ ತಿಳಿಸಿದೆ. ಪ್ರೊಫೈಲ್ ಡೇಟಾವನ್ನು ಇನ್‌ಸ್ಟಾಗ್ರಾಮ್‌ನಿಂದ ಸ್ಪಷ್ಟವಾಗಿ ತೆಗೆಯಲಾಗಿದೆ ಎನ್ನಲಾಗಿದೆ. ಮೂರನೇ ಅತಿದೊಡ್ಡ ಸುಮಾರು 42 ಮಿಲಿಯನ್ ಟಿಕ್‌ಟಾಕ್ ಬಳಕೆದಾರರರ ಡೇಟಾಸೆಟ್‌ ಆಗಿದ್ದು, ನಾಲ್ಕು ಮಿಲಿಯನ್ ಯೂಟ್ಯೂಬ್ ಬಳಕೆದಾರರ ಡೇಟಾ ಲೀಕ್ ಆಗಿದೆ ಎನ್ನಲಾಗಿದೆ.

Instagram TikTok And Youtube Data Leak Exposes Data Of 236 Million Users

ಕಂಪಾರಿಟೆಕ್ ಹೇಳುವಂತೆ, ಅದು ಸಂಗ್ರಹಿಸಿರುವ ಮಾದರಿಗಳ ಆಧಾರದ ಮೇಲೆ, ಐದು ದಾಖಲೆಗಳಲ್ಲಿ ಒಂದು ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸವನ್ನು ಹೊಂದಿರುತ್ತದೆ.

"ಇನ್‌ಸ್ಟಾಗ್ರಾಮ್‌ನಿಂದ ಜನರ ಮಾಹಿತಿಯನ್ನು ಸ್ಕ್ರಾಪ್ ಮಾಡುವುದು ನಮ್ಮ ನೀತಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು 2018 ರ ಜೂನ್‌ನಲ್ಲಿ ಡೀಪ್ ಸೋಶಿಯಲ್ ನಮ್ಮ ಪ್ಲಾಟ್‌ಫಾರ್ಮ್‌ಗೆ ಪ್ರವೇಶವನ್ನು ರದ್ದುಪಡಿಸಿದ್ದೇವೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಸಂಗ್ರಹಣೆಯನ್ನು ನಿಷೇಧಿಸುವ ಕಾನೂನು ನೋಟಿಸ್ ಕಳುಹಿಸಿದ್ದೇವೆ'' ಎಂದು ಫೇಸ್‌ಬುಕ್ ವಕ್ತಾರರು ಉಲ್ಲೇಖಿಸಿದ್ದಾರೆ.

ಪ್ರೊಫೈಲ್ ಹೆಸರು, ನಿಜವಾದ ಹೆಸರು, ಫೋಟೋ, ಖಾತೆ ವಿವರಣೆ, ಫಾಲೋವರ್ಸ್ ಸಂಖ್ಯೆ, ಲಿಂಗ, ವಯಸ್ಸು, ಸ್ಥಳ ಹೀಗೆ ಬಳಕೆದಾರರ ಮಾಹಿತಿ ಲೀಕ್ ಆಗಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+