ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಹಿಂದೆ ಅಮೆರಿಕ–ಇಸ್ರೇಲ್ ಮಾಸ್ಟರ್ ಪ್ಲ್ಯಾನ್, ಯುದ್ಧತಂತ್ರದ ರಹಸ್ಯ: ಆಶಿಶ್ ಸಾರಡ್ಕ ಬರಹ
ಇರಾನ್ ಮುಖ್ಯಸ್ಥ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಹೇಗಾಯಿತು, ಇಸ್ರೇಲ್ - ಅಮೆರಿಕದ ಮಾಸ್ಟರ್ ಪ್ಲ್ಯಾನ್ ಹೇಗಿತ್ತು ಎನ್ನುವ ಬಗ್ಗೆ ಹವ್ಯಾಸಿ ಬರಹಗಾರ ಆಶಿಶ್ ಸಾರಡ್ಕ ಅವರ ಬರಹ ಇಲ್ಲಿದೆ.
ಬೆಳಗ್ಗೆ 8.10 ನಿಮಿಷಕ್ಕೆ ಎಲ್ಲರೂ ಖಂಡಿತಾ ಇದೇ ಕೋಣೆಯಲ್ಲಿ ಮೀಟಿಂಗ್ ಮಾಡೋಕೆ ಬರ್ತಾರೆ. ಬರುವವರೆಲ್ಲರೂ ಇರಾನ್ ದೇಶದ, ಸೇನೆಯ ದೊಡ್ಡ ದೊಡ್ಡ ನಾಯಕರು.. ಅಯತೊಲ್ಲಾ ಖಮೇನಿ ಒಂದು ವೇಳೆ ಸಾವನ್ನಪ್ಪಿದರೆ, ದೇಶದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇರುವ ಉತ್ತರಾಧಿಕಾರಿಗಳೂ ಅಲ್ಲಿಯೇ ಇರ್ತಾರೆ.. ಅವರ ಮೇಲೆ ಸರಿಯಾಗಿ 8.10ಕ್ಕೆ ಒಂದು 30 ಬಾಂಬ್ ಹಾಕಿದರೆ ಅವರೆಲ್ಲರ ಕಥೆ ಮುಗಿಯುತ್ತೆ.
ಇದಿಷ್ಟೂ ಸುದ್ದಿ ಇಸ್ರೇಲ್ ಮತ್ತೆ ಅಮೆರಿಕಾಕ್ಕೆ ಅಷ್ಟು ಚೆನ್ನಾಗಿ ಗೊತ್ತಾಗಿದ್ದು ಹೇಗೆ? ಇಲೆಕ್ಟ್ರಾನಿಕ್ warfare ನಡೆಯುವ ಈ ಸಮಯದಲ್ಲಿ ಎಲ್ಲರೂ ಒಂದೇ ಕೋಣೆಯಲ್ಲಿ ಬಂದು ಕುರುವ ಟ್ಯಾಕ್ಟಿಕಲ್ ತಪ್ಪು ಇರಾನ್ ಮಾಡಿದ್ದು ಯಾಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದೇ ಆಧುನಿಕ ಜಗತ್ತಿನ ಯುದ್ಧಗಳ, ಚಾಣಾಕ್ಯತೆಯ ಇಂಟೆರೆಸ್ಟಿಂಗ್ ಸುದ್ದಿ. ಖಮೇನಿಯನ್ನು ಉರುಳಿಸೋಕೆ ಇಸ್ರೇಲ್ ಮತ್ತು ಅಮೆರಿಕ ಮಾಡಿದ ಈ "ಮಾಸ್ಟರ್ ಪ್ಲ್ಯಾನ್" ಯುದ್ಧತಂತ್ರದ ಇತಿಹಾಸದಲ್ಲೇ ಒಂದು ದೊಡ್ಡ ಪಾಠ. ಇದನ್ನು ಅಧ್ಯಯನ ಮಾಡಿದರೆ ಇಸ್ರೇಲ್ ಮತ್ತು ಅಮೆರಿಕ ಎಷ್ಟು ವ್ಯವಸ್ಥಿತವಾಗಿ ಇರಾನ್ ಅನ್ನು ಹೇಗೆ 'ಡೆತ್ ಟ್ರ್ಯಾಪ್'ಗೆ ಕೆಡವಿದವು ಅನ್ನೋದು ಅರ್ಥವಾಗುತ್ತೆ.

1. ಎಲೆಕ್ಟ್ರಾನಿಕ್ ಫೋಬಿಯಾ ಮತ್ತು ಫಿಸಿಕಲ್ ಮೀಟಿಂಗ್
2024ರಲ್ಲಿ ಹೆಜ್ಬೊಲ್ಲಾ ಉಗ್ರರ ಕೈಯಲ್ಲಿದ್ದ ಪೇಜರ್‌ಗಳು ಏಕಕಾಲಕ್ಕೆ ಬ್ಲಾಸ್ಟ್ ಆಗಿದ್ದು ನೆನಪಿದ್ಯಾ, ಆ ಒಂದು ಘಟನೆ ಇಡೀ ಇರಾನ್ ಮತ್ತು ಅದರ ಮಿತ್ರಪಡೆಗಳಲ್ಲಿ ನಡುಕ ಹುಟ್ಟಿಸಿತ್ತು. "ಯಾವುದೇ ಎಲೆಕ್ಟ್ರಾನಿಕ್ ಸಾಧನ ಸುರಕ್ಷಿತವಲ್ಲ, ಮೊಬೈಲ್ ಇರಲಿ, ಪೇಜರ್ ಇರಲಿ, ಎಲ್ಲವನ್ನೂ ಇಸ್ರೇಲ್ ಟ್ಯಾಪ್ ಮಾಡಬಲ್ಲದು ಅಥವಾ ಸ್ಫೋಟಿಸಬಲ್ಲದು" ಅನ್ನೋ ಭಯ ಇರಾನ್ ನಾಯಕರನ್ನು ಕಾಡತೊಡಗಿತು. ಅದಕ್ಕಿಂತ ಮುಂಚೆ ನಡೆದ ಕೆಲವು ಘಟನೆಗಳ ನೆನಪು ನಿಮಗೆ ಇರಲಿ. 2018ರಲ್ಲಿ ಇಸ್ರೇಲ್ ಅನ್ನು ಮೊಸಾದ್ ಏಜೆಂಟ್‌ಗಳು ಟೆಹರಾನ್‌ನ ಒಂದು ರಹಸ್ಯ ಗೋದಾಮಿಗೆ ನುಗ್ಗಿ ಸುಮಾರು 1 ಲಕ್ಷಕ್ಕೂ ಹೆಚ್ಚು ಫಿಸಿಕಲ್ ಮತ್ತು ಡಿಜಿಟಲ್ ಫೈಲ್‌ಗಳನ್ನು ಎತ್ತಿಕೊಂಡು ಹೋಗಿದ್ದರು. ಇದರಲ್ಲಿ ಇರಾನ್‌ನ ಅಣುಬಾಂಬ್ ತಯಾರಿಕೆಯ ಬ್ಲೂಪ್ರಿಂಟ್ ಮತ್ತು ವಿಜ್ಞಾನಿಗಳ ಪಟ್ಟಿಯಿಂದ ಹಿಡಿದು ಎಲ್ಲಾ ಮಾಹಿತಿಯೂ ಇತ್ತು. ಇದು ಇರಾನ್‌ಗೆ ಬಿದ್ದ ಮೊದಲ ದೊಡ್ಡ ಹೊಡೆತ. "ನಮ್ಮ ಅತಿ ರಹಸ್ಯ ಫೈಲ್‌ಗಳೇ ಸುರಕ್ಷಿತವಾಗಿಲ್ಲ" ಅನ್ನೋ ಭಯ ಅಂದೇ ಶುರುವಾಯ್ತು.
2. ನಟಾಂಜ್ ಮತ್ತು ಇಸ್ಫಹಾನ್ ಮೇಲಿನ ಸೈಬರ್ ದಾಳಿ
ಇರಾನ್‌ನ ಅತಿ ಮುಖ್ಯ ಅಣು ಸ್ಥಾವರಗಳಾದ ನಟಾಂಜ್ (Natanz) ಮತ್ತು ಇಸ್ಫಹಾನ್ ಮೇಲೆ ಪದೇ ಪದೇ ಸೈಬರ್ ದಾಳಿಗಳಾದವು. 'ಸ್ಟಕ್ಸ್ನೆಟ್' (Stuxnet) ಅನ್ನುವ ವೈರಸ್ ಅಂತೂ ಅಲ್ಲಿನ ಯುರೇನಿಯಂ ಎನ್ರಿಚ್ ಮಾಡುವ ಸೆಂಟ್ರಿಫ್ಯೂಜ್ ಅನ್ನೇ ಹಾಳುಮಾಡಿತ್ತು. ಅದೂ ಹೇಗೆ ಗೊತ್ತಾ? ಸೆಂಟ್ರಿಫ್ಯೂಜ್ ಜೋರಾಗಿ ತಿರುಗಿ, U -238 ಮತ್ತು U -235 ಅನ್ನು ಬೇರ್ಪಡಿಸುವ ಕೆಲಸ ಮಾಡುತ್ತೆ.. ಇದು ಅತೀ ವೇಗವಾಗಿ ತಿರುಗಿ ಹಾಳಾದರೆ ಮಾಡಿದ್ದೆಲ್ಲಾ ಮಣ್ಣುಪಾಲು. ಇಸ್ರೇಲ್ ಮಾಡಿದ್ದು ಇದನ್ನೇ... Stuxnet ಯಾವ ಮಟ್ಟಕ್ಕೆ sophisticated ಆಗಿತ್ತು ಅಂದರೆ ಈ ಸೆಂಟ್ರಿಫ್ಯೂಜ್ ಅನ್ನು ಮಾನಿಟರ್ ಮಾಡ್ತಾ ಇದ್ದ ಎಂಜಿನಿಯರ್ಸ್‌ಗೆ ಎಲ್ಲವೂ ಸರಿಯಿದೆ ಅಂತಾ ಫೇಕ್ ಡೇಟಾ ಕೊಟ್ಟು, ಎಲ್ಲವೂ ಹಾಳಾದ ಮೇಲೆ ಗೊತ್ತಾಗುವ ಹಾಗೆ ಮಾಡಿತ್ತು. ವೈರಸ್‌ಗಳು ಅಲ್ಲಿನ ಮೆಷಿನ್‌ಗಳನ್ನೇ ನಾಶ ಮಾಡಿದವು. ಇದರಿಂದ ಇರಾನ್‌ಗೆ ಒಂದು ವಿಷಯ ಅರ್ಥವಾಯ್ತು. ಇದಕ್ಕಾಗಿಯೇ, ಡಿಜಿಟಲ್ ಸಂವಹನ ಬಿಟ್ಟು, "ಮುಖಾಮುಖಿ ಕುಳಿತು ಮಾತನಾಡೋಣ" ಅಂತ ಇರಾನಿಯನ್ನರು ನಿರ್ಧರಿಸಿದರು. ಆದರೆ ಇದೇ ಅವರು ಮಾಡಿದ ಮೊದಲ ತಪ್ಪು. ಟೆಕ್ನಾಲಜಿಯಿಂದ ದೂರ ಓಡಲು ಹೋಗಿ, ಎಲ್ಲರೂ ಒಂದೇ ಕಡೆ ಸಿಕ್ಕಿಬಿದ್ದರು.
3. ಹ್ಯೂಮನ್ ಇಂಟೆಲಿಜೆನ್ಸ್ (HUMINT) ಎಂಬ ಅಸ್ತ್ರ
ಇರಾನ್‌ನ ಅತಿ ಹಿರಿಯ ನಾಯಕರು, ಮಿಲಿಟರಿ ಕಮಾಂಡರ್‌ಗಳು ಒಂದೇ ಕಟ್ಟಡದಲ್ಲಿ ಸೇರುತ್ತಾರೆ ಅನ್ನೋ ಮಾಹಿತಿ ಸಿಕ್ಕಿದ್ದು ಹೇಗೆ? ಇಲ್ಲಿ ಕೆಲಸ ಮಾಡಿದ್ದು HUMINT (Human Intelligence). ಇರಾನ್‌ನ ಒಳಗೇ ಇದ್ದ ಇಸ್ರೇಲ್‌ನ ಗೂಢಚಾರಿಗಳು ಅಥವಾ ಇರಾನ್ ವ್ಯವಸ್ಥೆಯೊಳಗಿನ ಅತೃಪ್ತ ವ್ಯಕ್ತಿಗಳು ಈ ಮಾಹಿತಿಯನ್ನು ನಿಖರವಾಗಿ ರವಾನಿಸಿದ್ದರು. "ಯಾವ ಸಮಯದಲ್ಲಿ, ಯಾವ ಕೋಣೆಯಲ್ಲಿ ಸಭೆ ನಡೆಯುತ್ತೆ" ಅನ್ನೋ ಮಟ್ಟಕ್ಕೆ ಇಸ್ರೇಲ್ ಬಳಿ ಇನ್ಫರ್ಮೇಷನ್ ಇತ್ತು.
4. 'ನೈಟ್ ಅಟ್ಯಾಕ್' ನಿರೀಕ್ಷೆ ಮತ್ತು 'ಡೇಲೈಟ್' ಶಾಕ್
ಸಾಮಾನ್ಯವಾಗಿ ಇಂತಹ ದೊಡ್ಡ ದಾಳಿಗಳು ಕತ್ತಲಲ್ಲಿ ನಡೆಯುತ್ತವೆ ಅನ್ನೋದು ಮಿಲಿಟರಿ ಲೆಕ್ಕಾಚಾರ. ಇರಾನ್ ಕೂಡ ರಾತ್ರಿಯ ದಾಳಿಯನ್ನು ಎದುರಿಸಲು ಸಜ್ಜಾಗಿತ್ತು. ಆದರೆ ಅಮೆರಿಕ ಮತ್ತು ಇಸ್ರೇಲ್ ಶನಿವಾರ ಬೆಳಗ್ಗೆ (ಬ್ಯುಸಿನೆಸ್ ಅವರ್ಸ್‌ನಲ್ಲಿ) ದಾಳಿ ಮಾಡಿದವು. ಎಲ್ಲರೂ ಆಫೀಸಿಗೆ ಬಂದು ಕುಳಿತು ಸಭೆ ಶುರು ಮಾಡಿದಾಗಲೇ 30ಕ್ಕೂ ಹೆಚ್ಚು ಮಿಸೈಲ್‌ಗಳು ಅಪ್ಪಳಿಸಿದವು. ಯಾರೂ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ. ನೀವು ಇಸ್ರೇಲ್ ಪರವಾಗಿ ಇರಬಹುದು, ವಿರೋಧವಾಗಿ ಇರಬಹುದು. ಆದರೆ ನೀವಿಲ್ಲಿ ಆಲೋಚನೆ ಮಾಡಬೇಕಾದದ್ದು ತನ್ನ ಗುರಿ ಸಾಧಿಸೋಕೆ ಇಸ್ರೇಲ್ ಎಷ್ಟು ಪ್ಲಾನಿಂಗ್ ಮಾಡುತ್ತೆ ಅಂತಾ.
ಇನ್ನೊಂದು ಸುದ್ದಿಯಿದೆ... ಬಹಳ ವರ್ಷಗಳ ಕಾಲದಿಂದಲೇ ಈ ಪ್ಲಾನ್ ಇತ್ತು. ಇಸ್ರೇಲಿ ಟಾಪ್ ಬ್ರಾಸ್ ನಮ್ಮ ಟ್ರಾಕಿಂಗ್ ಅಲ್ಲಿ ಇರಬೇಕು ಅನ್ನುವ ಕಾರಣಕ್ಕೆ ಅವರೆಲ್ಲರ ಹಲ್ಲು ನೋವುಗಳನ್ನು ಟ್ರೀಟ್ ಮಾಡುವ ವೈದ್ಯರನ್ನೇ ಇಸ್ರೇಲ್ ಬುಕ್ ಮಾಡಿತ್ತು. ಇವರುಗಳ ಹಲ್ಲುಗಳ ಫಿಲ್ಲಿಂಗ್ಸ್ ಒಳಗೆ ಟ್ರಾಕರ್ ಇಟ್ಟಿತ್ತು ಅಂತಾ.. ಇದು ಯಾಕೋ ತೀರಾ sci-fi ಸಿನಿಮಾದ ಸ್ಕ್ರಿಪ್ಟ್ ರೀತಿ ನನಗೆ ಕಾಣುತ್ತೆ. ಅದು ನಿಜ ಅಂತಲೂ ನನಗೆ ಅನ್ನಿಸುತ್ತಾ ಇಲ್ಲ.. ಆದರೂ You Never Know












Click it and Unblock the Notifications