ಭಾರತದ ಭರ್ಜರಿ ಕ್ಷಿಪಣಿ ದಾಳಿ: ಉಗ್ರರ ನೆಲೆ ಧ್ವಂಸ, ಪಾಕಿಸ್ತಾನ ಹೇಳಿದ್ದೇನು ?
ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ 9 ಜಾಗಗಳಲ್ಲಿ ತಡರಾತ್ರಿ ಭಾರೀ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ನಡೆಸಿದ್ದು. ಇದಕ್ಕೆ "ಆಪರೇಷನ್ ಸಿಂಧೂರ" ಎಂದು ಕರೆದಿದೆ. ಈ ದಾಳಿಯು ಪಾಕಿಸ್ತಾನಕ್ಕೂ ನಿರೀಕ್ಷಿತವಾಗಿಯೇ ಇತ್ತು. ಏಪ್ರಿಲ್ 22ರಂದು ಭಾರತೀಯರು ಹಾಗೂ ವಿದೇಶಿ ಪ್ರಜೆಗಳ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಗೆ ಇದೀಗ ಭಾರತ ಸರಿಯಾದ ಪ್ರತ್ಯುತ್ತರವನ್ನೇ ನೀಡಿದೆ. ಆದರೆ, ಪಾಕ್ ಪತರುಗಟ್ಟುತ್ತಲ್ಲೇ ಭಾರತಕ್ಕೆ ಸವಾಲೊಂದನ್ನು ಹಾಕಿದೆ. ಭಾರತದ ಮೇಲೆ ನಾವೂ ಸಹ ದಾಳಿ ಮಾಡಲಿದ್ದೇವೆ ಎಂದು ಪಾಕಿಸ್ತಾನವು ಹೇಳಿದೆ. ಪಾಕಿಸ್ತಾನವು ಭಾರತದ ಕ್ಷಿಪಣಿ ದಾಳಿಗೆ ಹೇಗೆ ರಿಯಾಕ್ಟ್ ಮಾಡಿದೆ ಹಾಗೂ ಪಾಕ್‌ನಲ್ಲಿ ಏನೆಲ್ಲಾ ಆಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನವು ನಡುಗುತ್ತಿದೆ. ಈ ರೀತಿ ಇರುವಾಗಲೂ ಪಾಕಿಸ್ತಾನ ಸರ್ಕಾರವು ನಾವು ಭಾರತದ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇವೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಅಲ್ಲದೇ ಭಾರತ ಸರ್ಕಾರವು ನಾವು ಪಾಕ್ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ. ಯಾವುದೇ ಪ್ರಚೋದನಾತ್ಮಕ ದಾಳಿಯನ್ನು ನಡೆಸಿಲ್ಲ ಎಂದು ಹೇಳಿದೆ. ಆದರೆ, ನಾವು ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕ್ ಹೇಳಿದೆ.

ಭಾರತವು ನಡೆಸಿರುವ ಈ ಕ್ಷಿಪಣಿ ದಾಳಿಗೆ ಪ್ರತ್ಯುತ್ತರ ನೀಡುವ ಹಕ್ಕು ನಮಗೆ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ. ಭಾರತದ ಈ ದಾಳಿಯನ್ನು ನಾವು ಯುದ್ಧದ ಕೃತ್ಯ ಎಂದೇ ಪರಿಗಣಿಸಲಿದ್ದೇವೆ ಎಂದು ಪಾಕ್ ಸರ್ಕಾರ ಹೇಳಿದೆ. ಈ ದಾಳಿಗೆ ಸೂಕ್ತ ಪ್ರತ್ಯುತ್ತರವನ್ನು ನೀಡುವ ಎಲ್ಲಾ ರೀತಿಯ ಹಕ್ಕೂ ಸಹ ಪಾಕಿಸ್ತಾನಕ್ಕೆ ಇದೆ. ಭಾರತವು ಪಾಕಿಸ್ತಾನದ ಐದು ಪ್ರದೇಶಗಳ ಮೇಲೆ ದಾಳಿ ನಡೆಸಿದೆ ಎಂದು ಷರೀಫ್ ಹೇಳಿದ್ದಾರೆ.
ಶತ್ರು ದೇಶದ ದುಷ್ಟ ಉದ್ದೇಶವನ್ನು ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ. ಈ ಸಂದರ್ಭದಲ್ಲಿ ಇಡೀ ಪಾಕಿಸ್ತಾನದ ಜನರು ಪಾಕ್ ಸೇನೆಯೊಂದಿಗೆ ನಿಲ್ಲಲಿದೆ ಎಂದಿದ್ದಾರೆ. ಪಾಕ್‌ನ ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ ಭಾರತದ ಮೇಲೆ ಪಾಕ್ ಪೂರ್ಣ ಪ್ರಮಾಣದೊಂದಿಗೆ ದಾಳಿ ಮಾಡಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಭಾರತಕ್ಕೆ ತಿರುಗೇಟು ನೀಡಲಿದ್ದೇವೆ. ಭಾರತದ ದಾಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದೂ ಇದೇ ಸಂದರ್ಭದಲ್ಲಿ ಹೇಳಲಾಗಿದೆ.

ಎಲ್ಲಾ ಪ್ರದೇಶಗಳು ಮುಕ್ತವಾಗಿವೆ: ಪಾಕಿಸ್ತಾನದಲ್ಲಿರುವ ಎಲ್ಲಾ ಪ್ರದೇಶಗಳಲ್ಲೂ ಅಂತಾರಾಷ್ಟ್ರೀಯ ಮಾಧ್ಯಮಗಳು ಬಂದು ಪರಿಶೀಲನೆ ಮಾಡುವುದಕ್ಕೆ ಮುಕ್ತವಾಗಿವೆ ಎಂದು ಪಾಕ್ ಹೇಳಿದೆ. ಪಾಕಿಸ್ತಾನಕ್ಕೆ ಬಂದು ನುಸುಳಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದಿದೆ. ಅಲ್ಲದೇ ಈ ಘೋರ ಪ್ರಚೋದನೆಗೆ ಪ್ರತ್ಯುತ್ತರವನ್ನು ನೀಡಲಿದೆ ಎಂದು ಹೇಳಿದೆ.












Click it and Unblock the Notifications