ಉಗ್ರರ ನಂಟಿನ ಶಂಕೆ, ಮಹಿಳಾ ಬ್ಯಾಂಕರ್ ವಶಕ್ಕೆ

ಲಂಡನ್, ಜ.30: ಭಾರತೀಯ ಮೂಲದ ಮಹಿಳಾ ಬ್ಯಾಂಕರೊಬ್ಬರನ್ನು ಯುನೈಟೆಡ್ ಕಿಂಗ್ ಡಮ್ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಉಗ್ರರ ಜತೆ ಮಹಿಳಾ ಬ್ಯಾಂಕರ್ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

36 ವರ್ಷದ ಕುಂತಲ್ ಪಟೇಲ್ ಎಂಬ ಮಹಿಳೆ ಕ್ಯಾನರಿ ವಾರ್ಫ್ ನಲ್ಲಿರುವ ಬಾರ್ಕ್ಲೇ ಬ್ಯಾಂಕ್ ನ ಉದ್ಯೋಗಿಯಾಗಿದ್ದಾರೆ. ಆಕೆಯನ್ನು ಕಳೆದ ಎರಡು ದಿನಗಳಿಂದ ಬಂಧನದಲ್ಲಿರಿಸಿಕೊಂಡು ಯುಕೆ ಪೊಲೀಸರು ವಿಚಾರಣೆ ನಡೆಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಕುಂತಲ್ ಪಟೇಲ್ ಮೇಲೆ ಹತ್ಯೆ ಪ್ರಯತ್ನ ಕೇಸ್ ಹಾಕಲಾಗಿದ್ದು, ಕೌಂಟರ್ -ಟೆರೆರಿಸಂ ಕಮಾಂಡ್ ಪಡೆಯವರು ಆಕೆಯನ್ನು ವೆಸ್ಟ್ ಮಿನಿಷ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟಿನಲ್ಲಿ ಗುರುವಾರ ಹಾಜರುಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Indian woman banker held in anti-terror raid in London

ಕುತೂಹಲದ ಸಂಗತಿ ಎಂದರೆ ಕುಂತಲ್ ಅವರ ತಾಯಿ ಮೀನಾ ಪಟೇಲ್ ಅವರು ಪೂರ್ವ ಲಂಡನ್ನಿನ ಥೇಮ್ಸ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ನಲ್ಲಿ ಮ್ಯಾಜಿಸ್ಟ್ರೇಟ್ ಆಗಿ ಒಳ್ಳೆ ಹೆಸರು ಗಳಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ರಾನ್ ಮ್ಯಾನ್ಲೆ ಅವರು ಹೇಳಿಕೆ ನೀಡಿ 'ನಾನು ಪಟೇಲ್ ಕುಟುಂಬವನ್ನು ಕಳೆದ 20 ವರ್ಷಗಳಿಂದ ಚೆನ್ನಾಗಿ ಬಲ್ಲೆ. ಪೊಲೀಸರಿಗೆ ತಪ್ಪು ಮಾಹಿತಿ ಸಿಕ್ಕಿರಬಹುದು. ವಿಚಾರಣೆ ಬಳಿಕ ಸತ್ಯ ಹೊರಬೀಳಲಿದೆ ಎಂದಿದ್ದಾರೆ.

ಮೀನಾ ಅವರು ಮ್ಯಾಜಿಸ್ಟ್ರೇಟ್ ಆಗಿದ್ದು, ಕುಂತಲ್ ಅವರು ನಗರದ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಮೀನಾ ಅವರ ಕಿರಿಯ ಮಗಳು ಪೂನಂ ಅವರು ಫಾರ್ಮಸಿಸ್ಟ್ ಆಗಿದ್ದಾರೆ. ಹಿಂದೂ ಸಂಸ್ಕೃತಿಯನ್ನು ಪಾಲಿಸುವ ಈ ಕುಟುಂಬದ ಬಗ್ಗೆ ಸ್ಥಳೀಯರಿಗೆ ಅಪಾರ ಗೌರವವಿದೆ. ಮೀನಾ ಅವರ ಮಕ್ಕಳಿಗೂ ಒಳ್ಳೆ ಹೆಸರಿದೆ ಎಂದು ಕೌನ್ಸಿಲರ್ ರಾನ್ ಅವರು ದಿ ಡೈಲಿ ಟೆಲಿಗ್ರಾಫ್ ಗೆ ಹೇಳಿದ್ದಾರೆ.

ಇತ್ತೀಚೆಗೆ ಉಗ್ರ ನಿಗ್ರಹ ದಳದವರು ವಿದೇಶಾಂಗ ಕಚೇರಿಯ ಅಧಿಕಾರಿ ನಿಕೋಲಾಸ್ ಶುಕ್ಲಿಫ್ ಅವರನ್ನು ಬಂದಿಸಿದ್ದರು. ಆತನ ಮನೆ ಸಮೀಪದಲ್ಲೇ ಪಟೇಲ್ ಮನೆ ಇರುವುದರಿಂದ ಪೊಲೀಸರು ಅಲ್ಲಿಗೂ ದಾಳಿ ಇಟ್ಟಿರಬಹುದು ಎಂಬ ಅನುಮಾನವಿದೆ. ಹತ್ತಿರದ ಮನೆಯಾಗಿದ್ದರಿಂದ ಒಂದೇ ಕಂಪನಿಯ ಇಂಟರ್ನೆಟ್ ಸಂಪರ್ಕ ಹೊಂದಿದ್ದರು ಈ ಕಾರಣಕ್ಕಾಗಿ ವಿಚಾರಣೆ ನಡೆದಿದೆ ಎನ್ನಲಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+