ವಿಡಿಯೋ: 13000 ಅಡಿ ಎತ್ತರದಿಂದ ಹಾರಿ ಮೋದಿಗೆ ಶುಭಾಶಯ ಕೋರಿದ ಮಹಿಳೆ!
Recommended Video

ಮೋದಿ ಹುಟ್ಟುಹಬ್ಬಕ್ಕೆ 13000 ಸಾವಿರ ಅಡಿ ಎತ್ತರದಿಂದ ವಿಶ್ ಮಾಡಿದ ಮಹಿಳಾ ಸ್ಕೈ ಡೈವರ್ | Oneindia Kannada
ಚಿಕಾಗೋ, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಸ್ಕೈ ಡೈವರ್ ಒಬ್ಬರು ವಿಭಿನ್ನವಾಗಿ ಶುಭಾಶಯ ಕೋರಿದ ವಿಡಿಯೋ ಇದೀಗ ವೈರಲ್ ಆಗಿದೆ.
13000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದಿಂದ ಹಾರಿ, ಆಕಾಶದಿಂದಲೇ ಮೋದಿಯವರಿಗೆ ಶೀತಲ್ ಮಹಾಜನ್ ಎಂಬುವವರು ಶುಭಾಶಯ ಕೋರುತ್ತಿರುವ ವಿಡಿಯೋ ನೋಡಿದರೆ ಮೈಜುಮ್ಮೆನ್ನುತ್ತದೆ!

ಅಮೆರಿಕದ ಚಿಕಾಗೋದಿಂದ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಫೇಸ್ ಬುಕ್ ನಲ್ಲಿ ಆಕೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ವಿಜೇತೆಯೂ ಆಗಿರುವ ಶೀತಲ್ ಪ್ರಧಾನಿ ಮೋದಿಯವರ ಅಭಿಮಾನಿ. ಅವರನ್ನು ಭೇಟಿಯಾಗಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದರೂ ಬವೈಯಕ್ತಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಆದ್ದರಿಂದ ಸೆಪ್ಟೆಂಬರ್ 17 ರ ಅವರ ಜನ್ಮದಿನದಂದು ನಾನು ಅವರಿಗೆ ವಿಭಿನ್ನವಾಗಿ ಶುಭಾಶಯ ಕೋರುತ್ತೇನೆ ಎಂದು ಅವರು ಶುಭಾಶಯ ಕೋರಿದ್ದಾರೆ.












Click it and Unblock the Notifications