ಮನಮೋಹನ್ ಸಿಂಗ್ ವಿಶ್ವದ ಅತ್ಯಂತ ಪ್ರಭಾವಿ ಸಿಖ್
ಲಂಡನ್, ನ.10: ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವದ ಪ್ರಭಾವಿ ಸಿಖ್ ಎಂದು 'ಸಿಖ್ -100' ವಾರ್ಷಿಕ ಸಂಪುಟದಲ್ಲಿ ಪ್ರಕಟಿಸಿದೆ. ವಿಶ್ವದ ಸಿಖ್ ಸಮುದಾಯಕ್ಕೆ ಸೇರಿದ 100 ಮಂದಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ 81 ವರ್ಷದ ಪ್ರಧಾನಿ ಮನಮೋಹನ್ ಸಿಂಗ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಸಮಕಾಲೀನ ಸಿಖ್ ನಾಯಕರಲ್ಲಿ ಪ್ರಧಾನಿ ಸಿಂಗ್ ಅವರು ಅತ್ಯಂತ ಸಮರ್ಥ, ಅತ್ಯಂತ ಪ್ರಭಾವಿ ನಾಯಕ ಎಂದು ಸಿಖ್ 100 ಪತ್ರಿಕೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಯೋಜನಾ ಆಯೋಗದ ಉಪಾಧ್ಯಕ್ಷ 69 ವರ್ಷದ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ಸಿಖ್ ಸಮುದಾಯದ ಸರ್ವೋಚ್ಛ ಧಾರ್ಮಿಕ ಪೀಠ ಅಕಾಲ್ ತಕ್ತ್ ಸಾಹಿಬ್ ನ ಪ್ರಸಕ್ತ ಧಾರ್ಮಿಕ ಗುರು ಜಾತೆದಾರ್ ಸಿಂಗ್ ಸಾಹಿಬ್ ಜಿಯಾನಿ ಗುರು ಬಚನ್ ಸಿಂಗ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು 4ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ನಿ ಗುರು ಶರಣ್ ಕೌರ್ ಅವರು 13ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಅಮೆರಿಕದ ಮಾಸ್ಟರ್ ಕಾರ್ಡ್ ವಲ್ಡ್ ವೈಡ್ ನ ಸಿಇಒ ಹಾಗೂ ಅಧ್ಯಕ್ಷ ಅಜಯ್ ಪಾಲ್ ಸಿಂಗ್ ಬಂಗಾ 8ನೇ ಸ್ಥಾನ ಗಳಿಸಿದ್ದಾರೆ. ಯುಕೆಯ ರಾಯಲ್ ಕೋರ್ಟ್ ಆಫ್ ಜಸ್ಟೀಸ್ ನ ಹೈಕೋರ್ಟ್ ಜಡ್ಜ್ ರವಿಂದರ್ ಸಿಂಗ್ 9ನೇಸ್ಥಾನದಲ್ಲಿದ್ದಾರೆ.
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಹಾಗೂ ಪಂಜಾಬಿನ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರು 14ನೇ ಸ್ಥಾನದಲ್ಲಿದ್ದಾರೆ. ಸರ್ ಮೋಟಾ ಸಿಂಗ್, ಜಡ್ಜ್ (ಯುಕೆ)(17ನೇ ಸ್ಥಾನ), ಸಂತ್ ಸಿಂಗ್ ಚಾತ್ವಲ್, ಅಧ್ಯಕ್ಷ ಹಾಗೂ ಸಿಇಒ ಹ್ಯಾಂಪ್ ಶೈರ್ ಹೋಟೆಲ್ಸ್ ಹಾಗೂ ರೆಸಾರ್ಟ್ಸ್ (ಯುಎಸ್ ಎ) (19), ಫೋರ್ಟಿಸ್ ಹೆಲ್ತ್ ಕೇರ್, ಇಂಡಿಯಾ ಸಂಸ್ಥೆ ನಿರ್ದೇಶಕರು ಮಳ್ವಿಂದರ್ ಹಾಗೂ ಶಿವಿಂದರ್ ಸಿಂಗ್ (21), ಖುಷ್ವಂತ್ ಸಿಂಗ್, ಪತ್ರಕರ್ತ ಹಾಗೂ ಕಾದಂಬರಿಕಾರ (22)
ಓಂಕಾರ್ ಸಿಂಗ್ ಕಾನ್ವಲ್ ಚೇರ್ಮನ್, ಅಪೋಲೊ ಟೈರ್ಸ್, ಇಂಡಿಯಾ೯23), ಭೂಪಿಂದರ್ ಸಿಂಗ್,ವ್ಯವಸ್ಥಾಪಕ ನಿರ್ದೇಶಕ, ಪಂಜಾಬ್ ನ್ಯಾಷನಲ್ ಬ್ಯಾಂಕ್ (26), ಹರ್ಭಜನ್ ಸಿಂಗ್ , ಕ್ರಿಕೆಟರ್ (26), ಕ್ಯಾಪ್ಟನ್ ಅಮರಿಂದರ್ ಸಿಂಗ್, ಅಧ್ಯಕ್ಷ ಪಂಜಾಬ್ ಪಿಸಿಸಿ (29), ಲಾರ್ಡ್ ಇಂದ್ರಜೀತ್ ಸಿಂಗ್, ನಿರ್ದೇಶಕ ಸನ್ ಮಾರ್ಕ್ ಲಿ ಯುಕೆ(48), ಕರ್ತಾರ್ ಸಿಂಗ್ ಲಾಲ್ವಾಣಿ ನಿರ್ದೇಶಕ ವಿಟಾಬಯೋಟಿಕ್ಸ್ , ಯುಕೆ (52).
ಗುರಿಂದರ್ ಕೌರ್ ಚಡ್ಡಾ, ಫಿಲಂ ನಿರ್ದೇಶನ, ಯುಕೆ(55), ಸಂದೀಪ್ ಕೌರ್ ವರ್ಮ (58), ಕೆ ಕೌರ್ ಹೋಥಿ ಲಾಯ್ಡ್ ಬ್ಯಾಂಕ್, ಯುಕೆ(64), ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ (71), ಪಾಲ್ ಸಿಂಗ್ ಉಪ್ಪಾಳ್ ಯುಕೆ (76), ತರ್ಲೋಚನ್ ಸಿಂಗ್ ಮಾಜಿ ರಾಜ್ಯಸಭಾ ಸದಸ್ಯ (77) ಮುಂತಾದವರು ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. (ಪಿಟಿಐ)












Click it and Unblock the Notifications