ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊಟ್ಟಮೊದಲ ಸಿಖ್ ಮಹಿಳೆ

ಬ್ರಿಟನ್ ಸಂಸತ್ತಿಗೆ ಭಾರತೀಯ ಮೂಲದ ಪ್ರೀತ್ ಕೌರ್ ಗಿಲ್ ಎಂಬ ಮಹಿಳೆಯರು ಆಯ್ಕೆಯಾಗಿದ್ದಾರೆ. ಬ್ರಿಟನ್ ಇತಿಹಾಸದಲ್ಲೇ ಅಲ್ಲಿನ ಸಂಸತ್ ಪ್ರವೇಶಿಸಿದ ಮೊದಲ ಸಿಖ್ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

|
Google Oneindia Kannada News

ಲಂಡನ್, ಜೂ 9: ಗುರುವಾರ ನಡೆದ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಪ್ರೀತ್ ಕೌರ್ ಗಿಲ್ ಎಂಬ ಭಾರತೀಯ ಮೂಲದ ಸಿಖ್ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಇದು ಆ ದೇಶದ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.

650 ಸ್ಥಾನಗಳುಳ್ಳ ಸಂಸತ್ತಿನ ಕೆಳಮನೆಗೆ ನಡೆದ ಈ ಚುನಾವಣೆಯಲ್ಲಿ ಲೇಬರ್ ಪಕ್ಷದ ಪರವಾಗಿ ಪ್ರೀತ್ ಅವರು ಬರ್ಮಿಂಗ್‍ಹ್ಯಾಂ ಎಡ್ಗ್‍ಬಾಸ್ಟನ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಒಟ್ಟು 24,124 ಮತ ಗಳಿಸಿ ಅವರು ವಿಜಯಿಯಾದರು.

[ಬ್ರಿಟನ್ ಚುನಾವಣೆ: ಸಮ್ಮಿಶ್ರ ಸರಕಾರದೊಂದಿಗೆ ಥೆರಸಾ ಮೇ ಮತ್ತೆ ಅಧಿಕಾರಕ್ಕೆ]

Indian Origin Sikh Woman elected to Britain Parliament

ಅವರು ತಮ್ಮ ಪ್ರತಿಸ್ಪರ್ಧಿ ಕನ್ಸರ್‍ವೇಟಿವ್ ಪಕ್ಷದ ಕರೋಲಿನ್ ಸ್ಕೈರ್ ಅವರನ್ನು 6,917 ಮತಗಳ ಅಂತರದಿಂದ ಮಣಿಸಿದರು. ತನ್ಮನ್‍ಜೀತ್ ಸಿಂಗ್ ದೇಶಿ ಅವರು ಲೇಬರ್ ಪಕ್ಷದಿಂದ ಜಯಸಾಧಿಸಿ ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಟರ್ಬನ್‍ಧಾರಿ ಸಂಸದ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ.

English summary
First time in the history of Britain, a Sikh woman of Indian origin named Preet Kaur Gill has been elected to UK parliament. She had contested from Labour Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X