ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯ ಅನುಮಾನಾಸ್ಪದ ಸಾವು

ಹೆನ್ರಿ ಫೋರ್ಡ್ ಆಸ್ಪತ್ರೆಯ ಯೂರಾಲಜಿ ವಿಭಾಗದಲ್ಲಿ ವೈದ್ಯರಾಗಿದ್ದ 32 ವರ್ಷದ ರಮೇಶ್ ಕುಮಾರ್ ಮೃತ ದೇಹ ಗುರುವಾರ ತಡ ರಾತ್ರಿ ಕಾರಿನಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಮೆರಿಕಾ, ಮೇ 8: ಭಾರತೀಯ ಮೂಲದ ವೈದ್ಯರೊಬ್ಬರು ಅಮೆರಿಕಾದ ಮಿಶಿಗನ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಜನಾಂಗೀಯ ದ್ವೇಷಕ್ಕೆ ಅಮೆರಿಕಾದಲ್ಲಿ ಹಲವಾರು ಜನ ಬಲಿಯಾದ ಘಟನೆಗಳು ಮಾಸುವ ಮುನ್ನೇ ಈ ಸುದ್ದಿ ಹೊರ ಬಿದ್ದಿದೆ.

ಹೆನ್ರಿ ಫೋರ್ಡ್ ಆಸ್ಪತ್ರೆಯ ಯೂರಾಲಜಿ ವಿಭಾಗದಲ್ಲಿ ವೈದ್ಯರಾಗಿದ್ದ 32 ವರ್ಷದ ರಮೇಶ್ ಕುಮಾರ್ ಮೃತ ದೇಹ ಗುರುವಾರ ತಡ ರಾತ್ರಿ ಕಾರಿನಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು ಸಾವಿಗೆ ಕಾರಣ ತಿಳಿದು ಬರಬೇಕಿದೆ.

Indian origin doctor found dead under mysterious circumstances at US

ರಮೇಶ್ ಸಾವಿನ ಬಗ್ಗೆ ಕುಟುಂಬಸ್ಥರು ಯಾರ ಮೇಲೆಯೂ ಅನುಮಾನ ಪಟ್ಟಿಲ್ಲ. ಮತ್ತು ಇದು ಜನಾಂಗೀಯ ದ್ವೇಷವಲ್ಲ ಎಂದು ಹೇಳಿದ್ದಾರೆ. "ನಮಗಿನ್ನೂ ಸಾವಿಗೆ ಕಾರಣ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡಿ ಇದನ್ನು ಹೇಳಬೇಕು," ಎಂದು ರಮೇಶ್ ಕುಮಾರ್ ತಂದೆ ನರೇಂದ್ರ ಕುಮಾರ್ ಹೇಳಿದ್ದಾರೆ.

ರಮೇಶ್ ಕುಮಾರ್ ಕೊಚ್ಚಿಯ ಅಮೃತಾ ಇನ್ಸ್ಟಿಟ್ಯೂಟ್ ನಲ್ಲಿ ವೈದ್ಯಕೀಯ ಅಭ್ಯಾಸ ಮಾಡಿ ಅಮೆರಿಕಾಗೆ ತೆರಳಿದ್ದರು.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ರಮೇಶ್ ಕುಮಾರ್ ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆಸ್ಪತ್ರೆ ವೈದ್ಯರು ಅವರ ತಂದೆಗೆ ಕರೆ ಮಾಡಿದ್ದಾರೆ.

ಅದಾದ ನಂತರ ರಮೇಶ್ ಕುಮಾರ್ ತಂದೆ ಮಗನಿಗೆ ಹಲವು ಬಾರಿ ಕರೆ ಮಾಡಿದ್ದಾರೆ; ಮೆಸೇಜುಗಳನ್ನು ಕಳುಹಿಸಿದ್ದಾರೆ. ಕೊನೆಗೆ ಮಗನ ಪಾರ್ಟ್ ಮೆಂಟ್ ಬಳಿಯೇ ಹೋಗಿದ್ದಾರೆ. ಅಲ್ಲೆಲ್ಲಾ ಹುಡುಕಾಡಿದರೂ ರಮೇಶ್ ಪತ್ತೆಯಾಗದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ಹುಡುಕಾಡಿದಾಗ ರಮೇಶ್ ಮೃತ ದೇಹ ಖಾಲಿ ಪ್ರದೇಶದಲ್ಲಿ ನಿಂತಿದ್ದ ಕಾರಿನ ಪ್ಯಾಸೆಂಜರ್ ಸಿಟಿನಲ್ಲಿ ಪತ್ತೆಯಾಗಿದೆ.

ಘಟನೆಗ ಸಂಬಂಧಿಸಿದಂತೆ ಪೊಲಿಸರು ಯಾವುದೇ ಹೇಳಿಕೆ ನೀಡಿಲ್ಲ. ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬರಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+