ಲೈಂಗಿಕ ದೌರ್ಜನ್ಯ ಎಸಗಿದ ಭಾರತದ ಉದ್ಯಮಿಗೆ ಜೈಲು ಶಿಕ್ಷೆ
ನ್ಯೂಯಾರ್ಕ್, ಜೂನ್ 2: ಡೇಟಿಂಗ್ ವೆಬ್‌ಸೈಟ್ ಒಂದರಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಲೈಂಗಿಕ ಮತ್ತು ದೈಹಿಕ ಹಿಂಸೆ ನೀಡಿದ ಅಮೆರಿಕದಲ್ಲಿ ಭಾರತೀಯ ಉದ್ಯಮಿಯೊಬ್ಬರಿಗೆ ಅಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಸಂಜಯ್ ತ್ರಿಪಾಠಿ (48) ಅವರು 25 ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಲಿದ್ದಾರೆ. 2016ರ ಜೂನ್ 15ರಂದು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಈ ಘಟನೆ ನಡೆದಿತ್ತು.
ಶ್ರೀಮಂತ ಮತ್ತು ವಯಸ್ಕ ಪುರುಷರೊಂದಿಗೆ ಕಡಿಮೆ ವಯಸ್ಸಿನ ಮಹಿಳೆಯರ ನಂಟು ಬೆಸೆಯುವ 'ಶುಗರ್ ಡ್ಯಾಡಿ' ಎಂಬ ಹೆಸರಿನ ಡೇಟಿಂಗ್ ವೆಬ್‌ಸೈಟ್‌ನಲ್ಲಿ 38 ವರ್ಷದ ಮಹಿಳೆಯೊಂದಿಗೆ ತ್ರಿಪಾಠಿ ಅವರಿಗೆ ಪರಿಚಯವಾಗಿತ್ತು.

ಡೇಟಿಂಗ್ ಮಾಡುವ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದರು. ಬಳಿಕ ತಮ್ಮ ಕೊಠಡಿಗೆ ಬರುವಂತೆ ಮಹಿಳೆಗೆ ಹೇಳಿದ್ದ ತ್ರಿಪಾಠಿ, ಆಕೆಗೆ ಉಡುಗೊರೆ ಕೊಡುವುದಾಗಿ ನಂಬಿಸಿದ್ದರು.
ಆದರೆ ಹೋಟೆಲ್‌ನ ಕೊಠಡಿಗೆ ಹೋಗುತ್ತಿದ್ದಂತೆಯೇ ವ್ಯಗ್ರರಾದ ತ್ರಿಪಾಠಿ, ತನ್ನ ಮುಖದ ಮೇಲೆ ಸುಮಾರು 20 ಬಾರಿ ಗುದ್ದಿದ್ದಲ್ಲದೆ, ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದರು ಎಂದು ಮಹಿಲೆ ಆರೋಪಿಸಿದ್ದರು.
ಹೋಟೆಲ್ ಕೊಠಡಿಯ ಗೋಡೆ ಮತ್ತು ಹಾಸಿಗೆಯ ಹೊದಿಕೆ ಮೇಲೆ ಮಹಿಳೆಯ ಮುಖದಿಂದ ಬಿದ್ದ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದ ಅಧಿಕಾರಿಗಳು, ಮಹಿಳೆಯ ಮೇಲೆ ತ್ರಿಪಾಠಿ ದೌರ್ಜನ್ಯ ಎಸಗಿರುವುದನ್ನು ಕೋರ್ಟ್‌ಗೆ ಮನವರಿಕೆ ಮಾಡಿದರು.
ತ್ರಿಪಾಠಿ ಅವರ ಬೇಡಿಕೆಯನ್ನು ಮಹಿಳೆ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. 'ನೀನು ಸಾಯುತ್ತೀಯ. ನಾನು ನಿನ್ನನ್ನು ಕೊಂದು ಹಾಕುತ್ತೇನೆ' ಎಂಬುದಾಗಿ ಬೆದರಿಕೆ ಒಡ್ಡಿದ್ದರು.
ಹಲ್ಲೆಯ ಪರಿಣಾಮವಾಗಿನ ಆಕೆಯ ತುಟಿ ಒಡೆದಿದ್ದಲ್ಲೆ, ಹಲ್ಲು ತುಂಡಾಗಿತ್ತು. ಮೂಗಿಗೂ ಪೆಟ್ಟಾಗಿತ್ತು. ಆಕೆಯ ಮುಖದಿಂದ ವಿಪರೀತ ರಕ್ತಸ್ತಾವವಾಗಿತ್ತು ಎಂದು ಮಹಿಳೆಯ ಪರ ವಕೀಲರು ತಿಳಿಸಿದ್ದಾರೆ.
ತ್ರಿಪಾಠಿಯಿಂದ ತಪ್ಪಿಸಿಕೊಂಡು ಹೋಟೆಲ್‌ನಿಂದ ಹೊರಭಾಗದ ರಸ್ತೆಯಲ್ಲಿ ನಿಂತಿದ್ದ ಪೊಲೀಸರಿಗೆ ಅವರು ತನ್ನನ್ನು ಕೊಲ್ಲಲು ಪ್ರಯತ್ನಿಸಿದ ಮಾಹಿತಿ ನೀಡಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದಾರೆ.
ಹಲ್ಲೆಯಿಂದ ಹಾನಿಗೊಳಗಾದ ಮಹಿಳೆಯ ಮುಖದ ಫೋಟೊಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಹೋಟೆಲ್ ಕೊಠಡಿಯಲ್ಲಿ ನಡೆದ ಘಟನೆಯ ಅರ್ಧ ಕಥೆಯನ್ನು ಮಾತ್ರ ಹೇಳಲಾಗಿದೆ. ಫೋಟೊಗಳನ್ನು ಗ್ರಾಫಿಕ್‌ನಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ತ್ರಿಪಾಠಿ ಪರ ವಕೀಲರು ವಾದಿಸಿದ್ದರು.
ಮಹಿಳೆ ತಮ್ಮೊಮದಿಗೆ ಸಹಮತದಿಂದ ಲೈಂಗಿಕ ಕ್ರಿಯೆ ನಡೆಸಿದ್ದರು. ಅದಕ್ಕೆ ಹಣವನ್ನೂ ತೆಗೆದುಕೊಂಡಿದ್ದರು ಎಂದು ತ್ರಿಪಾಠಿ ವಾದಿಸಿದ್ದಾರೆ.
ತ್ರಿಪಾಠಿ ವಿರುದ್ಧ ಲೈಂಗಿಕ ಅಪರಾಧ ಕಾಯ್ದೆ, ಲೈಂಗಿಕ ನಿಂದನೆ, ಹಲ್ಲೆ, ದೌರ್ಜನ್ಯ ಮುಂತಾದ ಪ್ರಕರಣಗಳ ಅಡಿ ಶಿಕ್ಷೆಗೆ ಒಳಪಡಿಸಲಾಗಿದೆ. ಜುಲೈ 18 ರಂದು ಅವರ ಶಿಕ್ಷೆಯ ಅವಧಿ ಪ್ರಕಟವಾಗಲಿದೆ.












Click it and Unblock the Notifications