Get Updates
Get notified of breaking news, exclusive insights, and must-see stories!

ಭಾರತದಲ್ಲಿ ಸಂತೋಷಿಗಳಿಗಿಂತ ದುಃಖಿಗಳೇ ಜಾಸ್ತಿಯಂತೆ!

ಸಮಾಜದಲ್ಲಿ ಶಾಂತಿ, ಸುಸ್ಥಿರತೆ, ಸೌಹಾರ್ದತೆ, ಪ್ರೀತಿ, ವಿಶ್ವಾಸ, ದ್ವೇಷದ ದಳ್ಳುರಿಯಲ್ಲಿ ರಕ್ತಪಾತವಾಗದಿರುವುದು ಮುಂತಾದ ವಿಚಾರಗಳ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗಿದೆ.

ನ್ಯೂಯಾರ್ಕ್, ಮಾರ್ಚ್ 20: ವಿಶ್ವ ಸಂಸ್ಥೆಯು ಪ್ರಸಕ್ತ ವರ್ಷದ ಸಂತೋಷಮಯ ದೇಶಗಳ ಪಟ್ಟಿಯೊಂದನ್ನು ತಯಾರಿಸಿದ್ದು ಇದರಲ್ಲಿ ಭಾರತವು ಅಚ್ಚರಿಯೆಂಬಂತೆ 122ನೇ ಸ್ಥಾನ ಪಡೆದಿದೆ.

ಸಮಾಜದಲ್ಲಿ ಶಾಂತಿ, ಸುಸ್ಥಿರತೆ, ಸೌಹಾರ್ದತೆ, ಪ್ರೀತಿ, ವಿಶ್ವಾಸ, ದ್ವೇಷದ ದಳ್ಳುರಿಯಲ್ಲಿ ರಕ್ತಪಾತವಾಗದಿರುವುದು ಮುಂತಾದ ವಿಚಾರಗಳ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗಿದೆ.

India Ranks Behind Bangladesh, Pakistan And Iraq In Happiness Index

ಈ ಪಟ್ಟಿಯಲ್ಲಿ ಭಾರತ ಕೆಳ ಕ್ರಮಾಂಕದಲ್ಲಿದೆ ಎಂಬುದಕ್ಕಿಂತ ಹೆಚ್ಚಾಗಿ ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಚೀನಾ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ರಾಷ್ಟ್ರಗಳು ಈ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲ್ಪಂಕ್ತಿಯಲ್ಲಿವೆ ಎಂಬುದು ಮತ್ತೂ ಅಚ್ಚರಿಯ ವಿಚಾರವಾಗಿದೆ.

ಚೀನಾ 79ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 80, ನೇಪಾಳ 99, ಬಾಂಗ್ಲಾದೇಶ 110, ಇರಾಕ್ 117, ಶ್ರೀಲಂಕಾ 120ನೇ ಸ್ಥಾನದಲ್ಲಿದ್ದು, ಭಾರತವನ್ನು ಹಿಂದಿಕ್ಕಿವೆ.

ಹಾಗಾದರೆ, ವಿಶ್ವದ ಅತಿ ಸಂತುಷ್ಟ ರಾಷ್ಟ್ರ ಯಾವುದು? ಈ ಪ್ರಶ್ನೆಗೆ ಉತ್ತರ ನಾರ್ವೆ. ಹೌದು. ನಾರ್ವೆ ದೇಶವು ಜಗತ್ತಿನ ಅತಿ ಸಂತುಷ್ಟ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+