ಭಾರತದ ಬೆಳವಣಿಗೆ ಚೀನಾ ಅಭಿವೃದ್ಧಿಯನ್ನೂ ಮೀರಿಸಿದೆ: ಹೇಗೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ
ನವದೆಹಲಿ: ಏಷ್ಯಾ ಖಂಡದಲ್ಲಿ ಬಲಿಷ್ಠ ರಾಷ್ಟ್ರಗಳು ಎಂಬ ಹೆಸರು ಪಡೆದಿರುವ ಭಾರತ ಮತ್ತು ಚೀನಾ ಬದ್ಧ ವೈರಿಗಳು. ಅದರಲ್ಲೂ ಎರಡೂ ದೇಶಗಳು ಒಂದೊಂದು ದಿಕ್ಕಾಗಿವೆ. ಹೀಗೆ ಅಭಿವೃದ್ಧಿ ವಿಚಾರದಲ್ಲೂ ಭಾರತ & ಚೀನಾ ನಡುವೆ ಪೈಪೋಟಿ ಇದೆ. ಭಾರತದ ರಸ್ತೆಗಳ ಅಭಿವೃದ್ಧಿ ಈಗ ಚೀನಾ ದೇಶವನ್ನೂ ಮೀರಿಸಿದೆಯಂತೆ. ಈ ಮಾಹಿತಿ ಕೊಟ್ಟಿದ್ದು ಬೇರೆ ಯಾರೂ ಅಲ್ಲ ಕೇಂದ್ರ ಸಚಿವರು.
ಹೌದು, ಇದೀಗ ಅಮೆರಿಕ ಬಿಟ್ಟರೆ ಅತಿ ದೊಡ್ಡ ರಸ್ತೆ ಸಂಪರ್ಕ ಹೊಂದಿರುವ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. 2014ರ ಬಳಿಕ ಸುಮಾರು 1.45 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಿಸಿದೆಯಂತೆ ಭಾರತ. ಈ ಮೂಲಕ ಚೀನಾವನ್ನು ಹಿಂದಿಕ್ಕಿ ಈಗ 2ನೇ ಸ್ಥಾನಕ್ಕೆ ಏರಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಚೀನಾ ಜೊತೆ ಭಾರತ ಜಾಗತಿಕ ಮಟ್ಟದಲ್ಲಿ ನೀಡುತ್ತಿರುವ ಪೈಪೋಟಿಗೆ ಈಗ ಮತ್ತೊಂದು ಗೆಲುವು ಸಿಕ್ಕಂತಾಗಿದೆ. ಅದರಲ್ಲೂ ಸಾರಿಗೆ ಸಂಪರ್ಕದ ವಿಚಾರದಲ್ಲಿ ಭಾರತ ಸಾಕಷ್ಟು ಸಾಧನೆ ಮಾಡಿದ್ದು, ಅದರ ಸಂಪೂರ್ಣ ಮಾಹಿತಿಯನ್ನ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಅಬ್ಬರ!
ಇನ್ನು ಭಾರತ 9 ವರ್ಷದಲ್ಲಿ ಹಲವು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ಹೆದ್ದಾರಿಯ ಪಟ್ಟಿಗೆ ಸೇರಿಸಿದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದರು. 9 ವರ್ಷ ಭಾರತದಲ್ಲಿ ಅನೇಕ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿವೆ. ಭಾರತದಲ್ಲೇ ಅತಿ ಉದ್ದದ ಹೆದ್ದಾರಿಯಾದ ದೆಹಲಿ ಹಾಗೂ ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಹುತೇಕ ಮುಗಿದಿದೆ. 9 ವರ್ಷದ ಹಿಂದೆ ದೇಶದ ರಸ್ತೆ ಸಂಪರ್ಕ ಜಾಲ 91,287 ಕಿಲೋ ಮೀಟರ್‌ನಷ್ಟು ಇತ್ತು. ಆದರೆ ಕಳೆದ 9 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನೇಕ ಹೈವೇ ಹಾಗೂ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
100 ಕಿಮೀ ರಸ್ತೆಗೆ 100 ಗಂಟೆ!
ಹಾಗೇ 2019ರ ಎಪ್ರಿಲ್ ನಂತರ ಭಾರತದಲ್ಲಿ 30,000 ಕಿಲೋ ಮೀಟರ್‌ಗೂ ಹೆಚ್ಚು ಉದ್ದ ಹೆದ್ದಾರಿ ನಿರ್ಮಿಸಿದ್ದೇವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಇದ್ರಲ್ಲಿ ದೆಹಲಿ ಹಾಗೂ ಮೀರತ್ ಹೈವೇ ಸೇರಿ ಉತ್ತರ ಪ್ರದೇಶದ ಲಖ್ನೋ ಮತ್ತು ಗಾಝಿಪುರ ಹೆದ್ದಾರಿ ಕೂಡ ಸೇರಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಮ್ಮ ಅವಧಿಯಲ್ಲಿ ಒಟ್ಟಾರೆ 7 ವಿಶ್ವ ದಾಖಲೆ ಮಾಡಿದೆ ಎಂದು ಗಡ್ಕರಿ ಹೇಳಿದ್ದಾರೆ. ಹಾಗೇ ಇದೇ ವರ್ಷದ ಮೇ ತಿಂಗಳಲ್ಲಿ 100 ಕಿಮೀ ಎಕ್ಸ್‌ಪ್ರೆಸ್‌ವೇ ಅನ್ನ ಕೇವಲ 100 ಗಂಟೆಗಳಲ್ಲಿ ನಿರ್ಮಿಸಿ ದಾಖಲೆ ಬರೆದಿತ್ತು ಹೆದ್ದಾರಿ ಪ್ರಾಧಿಕಾರ. ಘಾಝಿಯಾಬಾದ್ ಮತ್ತು ಅಲಿಗಢ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ವೇಳೆ ಈ ದಾಖಲೆ ನಿರ್ಮಾಣವಾಗಿತ್ತು.
ಇಷ್ಟೇ ಅಲ್ಲ, ಹೆದ್ದಾರಿಗಳಿಂದ ಬರುವ ಆದಾಯ ಕೂಡ ಹೆಚ್ಚಳವಾಗಿರುವ ಬಗ್ಗೆ ಇದೇ ವೇಳೆ ಕೇಂದ್ರ ಸಚಿವರು ಮಾಹಿತಿ ನೀಡಿದ್ರು. 9 ವರ್ಷದ ಹಿಂದೆ ಕೇವಲ 4777 ಕೋಟಿ ರೂಪಾಯಿ ಇದ್ದ ಟೋಲ್ ಸಂಗ್ರಹ ಸದ್ಯಕ್ಕೆ 41,342 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಟೋಲ್‌ಗಳ ಆದಾಯವನ್ನು ಈ ಮೂಲಕ 1.30 ಲಕ್ಷ ಕೋಟಿ ರೂಪಾಯಿಗೆ ಏರಿಸುವುದು ಕೇಂದ್ರದ ಗುರಿ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಒಟ್ನಲ್ಲಿ ಈ ಮೂಲಕ ಭಾರತ ರಸ್ತೆ ಸಂಪರ್ಕದ ವಿಚಾರದಲ್ಲಿ ನೆರೆಯ ಚೀನಾ ದೇಶವನ್ನು ಹಿಂದಿಕ್ಕಿದೆ. ಅಲ್ಲದೇ ಅಮೆರಿಕ ಜೊತೆಗೆ ಭಾರತ ಈ ವಿಚಾರದಲ್ಲಿ ಪೈಪೋಟಿ ಕೊಡುತ್ತಿರುವುದು ಕೂಡ ವಿಶೇಷ. ಮುಂದಿನ ದಿನಗಳಲ್ಲಿ ದೇಶದ ಮತ್ತಷ್ಟು ಹೆದ್ದಾರಿಗಳನ್ನು ಉನ್ನತ ದರ್ಜೆಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.












Click it and Unblock the Notifications