ಸೋಚಿ ಚಳಿಗಾಲದ ಒಲಿಂಪಿಕ್ಸ್ ವರ್ಣ ಚಿತ್ರಗಳು
ಸೋಚಿ(ರಷ್ಯಾ), ಫೆ.8: ಸೋಚಿ ಚಳಿಗಾಲದ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ಸಂಪನ್ನವಾಗಿದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ಕ್ರೀಡಾಪಟುಗಳು ತಮ್ಮ ಪ್ರತಿಭೆ ಅನಾವರಣೆಗೆ ಸಜ್ಜಾಗಿದ್ದಾರೆ. ಒಲಿಂಪಿಕ್ ಜ್ಯೋತಿ ಬೆಳಗಲು ವಿಳಂಬವಾಗಿದ್ದು ಒಂದು ಕಡೆಯಾದರೆ ರಾಷ್ಟ್ರಧ್ವಜವಿಲ್ಲದೆ ಭಾರತೀಯ ಕ್ರೀಡಾಪಟುಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಎದ್ದು ಕಾಣುತ್ತಿತ್ತು.
ಭಾರತದ ಮೂವರು ಅಥ್ಲೀಟ್ ಗಳು ರಾಷ್ಟ್ರಧ್ವಜವಿಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಂಡು ಕ್ರೀಡಾಪ್ರೇಮಿಗಳು ಮುಜುಗರ ಪಡುವಂತೆ ಮಾಡಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಆಡಳಿತಾತ್ಮಕ ಕಾರಣದಿಂದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಗೆ ತೆರಳಿರುವ ಭಾರತದ ಮೂವರು ಅಥ್ಲೀಟ್ ಗಳಾದ ಶಿವ ಕೇಶವನ್ (ಲ್ಯೂಜ್), ಹಿಮಾಂಶು ಥಾಕೂರ್ (ಅಲ್ಪೈನ್ ಸ್ಕೀಯಿಂಗ್) ಹಾಗೂ ನದೀಂ ಇಕ್ಬಾಲ್(ಕ್ರಾಸ್ ಕಂಟ್ರಿ ಸ್ಕೀಯಿಂಗ್) ಐಒಸಿ ಧ್ವಜ ಹಿಡಿದು ಪಥಸಂಚಲನ ನಡೆಸಿದರು.
ಭಾರತೀಯ ಅಥ್ಲೀಟ್‌ಗಳು ಸ್ವತಂತ್ರ ಅಥ್ಳೀಟ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಕಾರಣ ಒಲಿಂಪಿಕ್ಸ್ ಧ್ವಜವನ್ನು ಪ್ರತಿನಿಧಿಸುತ್ತಿದ್ದಾರೆ. ಫಿಶ್ತ್ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತ ಐಒಸಿ ಧ್ವಜದೊಂದಿಗೆ ಪಥ ಸಂಚಲನ ನಡೆಸಿದಾಗ ವಿಶ್ವದೆಲ್ಲೆಡೆಯಿರುವ ಬಿಲಿಯನ್ ಭಾರತೀಯರು ಮುಜುಗರದ ಪರಿಸ್ಥಿತಿ ಎದುರಿಸಿದರು. ಸೋಚಿ ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವರ್ಣ ರಂಜಿತ ಚಿತ್ರಗಳನ್ನು ಮುಂದೆ ನೋಡಿ ಆನಂದಿಸಿ...

ಸೋಚಿ ಒಲಿಂಪಿಕ್ಸ್ : ಭಾರತೀಯ ಕ್ರೀಡಾಪಟುಗಳು
ಒಲಿಂಪಿಕ್ಸ್ ನ ನಿಯಮವನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ 2012ರ ಡಿಸೆಂಬರ್ ನಲ್ಲಿ ಐಒಎ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು ನಿಷೇಧಿಸಿತ್ತು. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅಥ್ಲೀಟ್ ಗಳು, ಬಾಕ್ಸರ್‌ಗಳು ಐಒಎ ಧ್ವಜವನ್ನು ಹಿಡಿಯಬೇಕಾಗಿದೆ.
ಹೆಚ್ಚಿನ ವಿವರ ಇಲ್ಲಿ ಓದಿ : ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಮಾನತು

ಚಳಿಗಾಲದ ಒಲಿಂಪಿಕ್ಸ್ ಗೆ ಬಂದ ಗಣ್ಯಾತಿಗಣ್ಯರು
ಸೋಚಿ ಒಲಿಂಪಿಕ್ಸ್ 2014 ಉದ್ಘಾಟನಾ ಸಮಾರಂಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಮುಂತಾದ ಗಣ್ಯರು

ಸೋಚಿ ಚಳಿಗಾಲ ಒಲಿಂಪಿಕ್ಸ್ ರಿಂಗ್ ಗಳು
ಸೋಚಿ ಚಳಿಗಾಲದ ಒಲಿಂಪಿಕ್ಸ್ : ಹಿಮದ ಬೆಂಕಿ ಉಗುಳುವ ಒಲಿಂಪಿಕ್ಸ್ ರಿಂಗ್ ಗಳು ಸರಿಯಾಗಿ ಉರಿಯದೆ ಆಭಾಸವಾಗಿತ್ತು. ನಂತರ ಸರಿಪಡಿಸಲಾಯಿತು.

ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ
ರಷ್ಯಾದ ಸೋಚಿ ಚಳಿಗಾಲದ ಒಲಿಂಪಿಕ್ಸ್ 2014ನ ಉದ್ಘಾಟನಾ ಸಮಾರಂಭ ವರ್ಣ ಚಿತ್ರಗಳು

ರಷ್ಯಾದ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭ
ರಷ್ಯಾದ ಸೋಚಿ ಚಳಿಗಾಲದ ಒಲಿಂಪಿಕ್ಸ್ 2014ನ ಉದ್ಘಾಟನಾ ಸಮಾರಂಭ

ಚಳಿಗಾಲ ಒಲಿಂಪಿಕ್ಸ್ 2014ನ ಉದ್ಘಾಟನಾ ಸಮಾರಂಭ
ರಷ್ಯಾದ ಸೋಚಿ ಚಳಿಗಾಲದ ಒಲಿಂಪಿಕ್ಸ್ 2014ನ ಉದ್ಘಾಟನಾ ಸಮಾರಂಭದ ಪ್ರಸಾರ

ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ರಷ್ಯಾದ ಸೋಚಿ ಚಳಿಗಾಲದ ಒಲಿಂಪಿಕ್ಸ್ 2014ನ ಉದ್ಘಾಟನಾ ಸಮಾರಂಭದಲ್ಲಿ 3000 ಕ್ಕೂ ಅಧಿಕ ಕಲಾವಿದರು ರಷ್ಯಾದ ಇತಿಹಾಸ, ಕ್ರಾಂತಿ ಹಾಗೂ ಸಂಸ್ಕೃತಿಯನ್ನು ಬಿಂಬಿಸಿದರು.












Click it and Unblock the Notifications