ಬ್ರೆಜಿಲ್‌ನಲ್ಲಿ ಕೊರೊನಾ ಸಾವಿನ ಸಂಖ್ಯೆ ಏರಿಕೆ: ಶವ ಪೆಟ್ಟಿಗೆಗೂ ತತ್ವಾರ
ಮನೌಸ್,ಮೇ 2: ಬ್ರೆಜಿಲ್‌ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು ಶವ ಪೆಟ್ಟಿಗೆ ಕೊರತೆ ಎದುರಾಗಿದೆ.
Recommended Video
ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದಾಗ ಶವ ಪೆಟ್ಟಿಗೆಗಳೇ ಇಲ್ಲದೆ ಪರದಾಡುವಂತಾಗಿದೆ. ಸಾಮಾನ್ಯ ಸ್ಮಶಾನದಲ್ಲಿ ಶವವನ್ನು ಹೂಳುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದುವರೆಗೆ 6 ಸಾವಿರ ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಮನೌಸ್‌ನಲ್ಲಿ ಶವಪೆಟ್ಟಿಗೆಗಳ ಸ್ಟಾಕ್ ಇಲ್ಲದ ಕಾರಣ 2,700 ಕಿ.ಮೀ ದೂರ ಇರುವ ಸಾವೋ ಪೌಲೋನಿಂದ ಶವಪೆಟ್ಟಿಗೆಗಳನ್ನು ತರಿಸಲಾಗುತ್ತಿದೆ.

ಆದರೆ ಮನೌಸ್ ಹಾಗೂ ಸಾವೋ ಪೌಲೋ ಸಂಪರ್ಕಿಸಲು ರಸ್ತೆ ಇಲ್ಲದ ಕಾರಣ ಏರ್‌ಲಿಫ್ಟ್ ಮಾಡಲಾಗುತ್ತಿದೆ. ನಗರದಲ್ಲಿ 2 ಮಿಲಿಯನ್ ಅಂದರೆ 20 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅಮೇಜಾನ್ ರಾಜ್ಯದಲ್ಲಿ 5200 ಕೊರೊನಾ ಸೋಂಕಿತ ಪ್ರಕರಗಳಿವೆ, 425 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಇಲಾಖೆ ತಿಳಿಸಿದೆ.
ಮನೌಸ್‌ನಲ್ಲಿ ನಿತ್ಯ 25 ರಿಂದ 30 ಮಂದಿ ಸಾವನ್ನಪ್ಪುತ್ತಿದ್ದಾರೆ. ಜನರು ಐಸೋಲೇಷನ್‌ನಲ್ಲಿ ಇರುವುದನ್ನು ನಿರಾಕರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಹೊರಗಡೆ ಬಿದ್ದಿರುವ ಶವವನ್ನು












Click it and Unblock the Notifications