Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ವಿರುದ್ಧ ಮತ್ತೊಂದು ಕೇಸ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದಾಖಲಾದ ಕೇಸ್ ಲೆಕ್ಕ ಹಾಕಲು ಒಂದು ದಿನ ಬೇಕು ಅಂತಾ ಕಾಣುತ್ತೆ. ಯಾಕಂದ್ರೆ ಇಮ್ರಾನ್ ಲಾಕ್ ಆಗಿದ್ದು ಒಂದೆರಡು ಕೇಸ್‌ನಲ್ಲಿ ಅಲ್ಲ, ನೂರಾರು ಕೇಸ್ ಇಮ್ರಾನ್ ಖಾನ್ ಬೆನ್ನಿಗೆ ಬಿದ್ದಿವೆ. ಇಷ್ಟೆಲ್ಲ ಸಾಲದು ಎಂಬಂತೆ ಮತ್ತೊಂದು ಕೇಸ್‌ನಲ್ಲಿ ಇಮ್ರಾನ್ ಲಾಕ್ ಆಗಿದ್ದಾರೆ. ಅತಿ ಕಠಿಣ ಪ್ರಕರಣದಲ್ಲಿ ಇಮ್ರಾನ್ ಖಾನ್ ಗುಂಡಿಗೆ ಬಿದ್ದಿದ್ದಾರೆ.
ಉಡುಗೊರೆ ಮಾರಾಟದಿಂದ, 14 ಕೋಟಿ ರೂಪಾಯಿ ಹಣ ಗಳಿಸಿದ್ದ ಆರೋಪ ಎದುರಿಸಿದ್ದ ಇಮ್ರಾನ್ ಖಾನ್ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 3 ಜೈಲು ಶಿಕ್ಷೆ ಮಾಜಿ ಪ್ರಧಾನಿ ಇಮ್ರಾನ್‌ಗೆ ಫಿಕ್ಸ್ ಆಗಿದೆ. ಬ್ರೇಕಿಂಗ್ ನ್ಯೂಸ್ ಒಂದು ಇದೀಗ ಸಿಕ್ಕಿದ್ದು ಅಮೆರಿಕ ರಾಯಭಾರ ಕಚೇರಿ ರಹಸ್ಯ ರಾಜತಾಂತ್ರಿಕ ಕೇಬಲ್ ವಿಷಯ ಬಹಿರಂಗಸಿದ್ದಕ್ಕೆ ಅಧಿಕೃತ ರಹಸ್ಯ ಕಾಯ್ದೆ ಅಡಿ ಸೈಫರ್ ಕೇಸ್ ದಾಖಲಾಗಿದೆ ಎನ್ನಲಾಗಿದೆ. 70 ವರ್ಷ ವಯಸ್ಸಿನ ಇಮ್ರಾನ್ ಖಾನ್ ಈ ಮೂಲಕ ಇನ್ನೊಂದು ಕೇಸ್ ತಲೆ ಮೇಲೆ ಹಾಕಿಕೊಂಡಿದ್ದು, ಪಾಕ್ ಜೈಲಿನಲ್ಲಿ ನರಳುತ್ತಿರುವ ಪಾಕಿಸ್ತಾನ ಕ್ರಿಕೆಟ್ ಲೋಕದ ದಿಗ್ಗಜನ ಪರದಾಟ ಮುಂದುವರಿದಿದೆ.

ಏನಿದು ಇಮ್ರಾನ್ ವಿರುದ್ಧ ಹೊಸ ಕೇಸ್?
ಸೈಫರ್ ಅಂದರೆ ವರ್ಗೀಕೃತ ರಾಜತಾಂತ್ರಿಕ ದಾಖಲೆ ದುರುಪಯೋಗದಲ್ಲಿ ಇಮ್ರಾನ್ ಖಾನ್‌ರ ಉದ್ದೇಶಪೂರ್ವಕ ಭಾಗಿ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆ, ಎಫ್‌ಐಎಯ ಭಯೋತ್ಪಾದನಾ ನಿಗ್ರಹ ವಿಭಾಗ ಕೇಸ್ ದಾಖಲು ಮಾಡಿದೆ ಎನ್ನಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಂದರೆ ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಈಗ ಸರಿಯಾಗೇ ಲಾಕ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆ 1923ರ ಸೆಕ್ಷನ್ 5 ರ ಅಡಿ ಎಫ್‌ಐಆರ್ ದಾಖಲಾಗಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಈ ಬಗ್ಗೆ ತನಿಖೆ ನಡೆಸಲಿದೆ ಎನ್ನಲಾಗಿದೆ.
ಒಂದಲ್ಲ.. ಎರಡಲ್ಲ.. 140 ಕೇಸ್!
ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಇತ್ತೀಚೆಗೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನ ಕೇವಲ ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಇದು ಸಾಲದು ಎಂಬಂತೆ ಈ ತಕ್ಷಣ ಮತ್ತೊಂದು ಕೇಸ್ ಬಿದ್ದಿದ್ದು, ಇದು ಸೇರಿ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾದಂತೆ ಆಗಿದೆ.

ಜೈಲಿನಲ್ಲಿ ನರಕ ನೋಡುತ್ತಿರುವ ಇಮ್ರಾನ್
ಇಮ್ರಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ, ಹುಳಗಳ ಕಾಟ ಇರುವ ಜೈಲಿನ ಕೋಣೆಯಲ್ಲಿ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಸ್ವತಃ ಇಮ್ರಾನ್ ಖಾನ್ ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಕೊನೆಗೂ ಈ ವಿಚಾರ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಆಗಸ್ಟ್ 12ರಂದು ತೀರ್ಪು ನೀಡಿದ್ದ ಪಾಕಿಸ್ತಾನದ ಕೋರ್ಟ್, ಇಮ್ರಾನ್‌ಗೆ ಜೈಲಿನಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯವೂ ಸೇರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿ ಆಗಲು ಅವಕಾಶ ನೀಡಿ ಎಂದು ಹೇಳಿತ್ತು. ಈ ಮೂಲಕ ಜೈಲಿನಲ್ಲಿ ನರಳಿದ್ದ ಇಮ್ರಾನ್ ನಿಟ್ಟುಸಿರು ಬಿಟ್ಟಿದ್ದರು. ಇದು ಸಾಲದು ಎಂಬಂತೆ ಮತ್ತೊಂದು ಪ್ರಕರಣ ಕೂಡ ಬಿದ್ದಿದೆ.

ಸೇನೆ ವಿರುದ್ಧ ಮಾತನಾಡಿದ್ದಕ್ಕೆ ಟಾರ್ಗೆಟ್?
ಇಮ್ರಾನ್ ಸ್ಥಿತಿ ಹೇಗಾಗಿದೆ ಎಂದರೆ, ಪಾಕ್ ಸೇನೆ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಜೈಲಿನಲ್ಲಿ ನರಳುವ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ, ಜೈಲಿನಿಂದ ನನ್ನ ಹೇಗಾದರೂ ಹೊರಗಡೆ ಕರೆದುಕೊಂಡು ಹೋಗಿ ಎಂದು ಇಮ್ರಾನ್ ತಮ್ಮ ವಕೀಲರ ಬಳಿ ಬೇಡಿಕೊಂಡಿದ್ದರಂತೆ. ಹೀಗಾಗಿ ಇಮ್ರಾನ್ ಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಭಯ ಶುರುವಾಗಿತ್ತು. ಅಲ್ಲದೆ ಪಾಕಿಸ್ತಾನ ಮಾಜಿ ಪ್ರಧಾನಿ ಆರೋಗ್ಯ ಏನಾಗಲಿದೆ? ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿತ್ತು. ಇದು ಸಾಲದು ಎಂಬಂತೆ ಮತ್ತೊಂದು ಕೇಸ್ ಇಮ್ರಾನ್ ವಿರುದ್ಧ ದಾಖಲಾಗಿದ್ದು, ಇದು ಕೂಡ ಉರುಳಾಗುವ ಭೀತಿ ಎದುರಾಗಿದೆ.











Click it and Unblock the Notifications