ಇಮ್ರಾನ್ ಖಾನ್ ಆಡಳಿತದ ಹೊಸ ಪಾಕಿಸ್ತಾನ: ರೆಹಮ್ ಖಾನ್ ಆಕ್ರೋಶ
ಇಸ್ಲಾಮಾಬಾದ್, ಜನವರಿ 03: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪತ್ನಿ ರೆಹಮ್ ಖಾನ್ ಅವರ ಕಾರಿನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಬಗ್ಗೆ ರೆಹಮ್ ಖಾನ್ ಟ್ವೀಟ್ ಮಾಡಿದ್ದು, ಮಾಜಿ ಪತಿ ಹಾಗೂ ಹಾಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಸೋದರಳಿಯನ ಮದುವೆಗೆ ಹೋಗಿ ವಾಪಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಕಾರಿಗೆ ಗುಂಡು ಹಾರಿಸಿದರು.
ಪಾಕಿಸ್ತಾನದಲ್ಲಿ ಭದ್ರತೆ ಉಲ್ಲಂಘನೆ ಮೂಲಕ ಅಲ್ಲಿನ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರ ಕಾರಿನ ಮೇಲೆ ಅಪರಿಚತ ವ್ಯಕ್ತಿಗಳು ಗುಂಡುಹಾರಿಸಿರುವ ಆರೋಪ ಕೇಳಿಬಂದಿದೆ.

2014ರಲ್ಲಿ ಇಮ್ರಾನ್ ಖಾನ್‌ರನ್ನು ವಿವಾಹವಾಗಿದ್ದ 48 ವರ್ಷದ ರೆಹಮ್ ಖಾನ್ 2015ರ ಅಕ್ಟೋಬರ್ 30ರ ವರೆಗೆ ಅವರೊಂದಿಗೆ ಸಾಂಸಾರಿಕ ಜೀವನ ನಡೆಸಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿಯಾಗಿದೆ. ಈ ಬಗ್ಗೆ ರೆಹಮ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಹಾಗೇ, ತಮ್ಮ ಮಾಜಿ ಪತಿ ಇಮ್ರಾನ್ ಖಾನ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ರೆಹಮ್ ಖಾನ್, ನಾನು ನನ್ನ ಸಂಬಂಧಿಯೊಬ್ಬರ ವಿವಾಹ ಸಮಾರಂಭದಿಂದ ಭಾನುವಾರ ರಾತ್ರಿ ವಾಪಸ್ ಬರುತ್ತಿದ್ದೆ. ಆಗ ನನ್ನ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಮೋಟರ್ ಸೈಕಲ್ ಮೇಲೆ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದಾರೆ.
ನನ್ನ ವೈಯಕ್ತಿಕ ಕಾರ್ಯದರ್ಶಿ ಮತ್ತು ಚಾಲಕ ಕೂಡ ಕಾರಿನಲ್ಲಿ ಇದ್ದರು. ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ. ಈ ಇಮ್ರಾನ್ ಖಾನ್ ಆಡಳಿತದ ಹೊಸ ಪಾಕಿಸ್ತಾನ ಈಗ ಇದು ಹೇಡಿಗಳು, ಕೊಲೆಗೆಡುಕರು, ದುರಾಸೆ ಬುರುಕರ ರಾಜ್ಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಇಮ್ರಾನ್ ಖಾನ್‌ರನ್ನು ಟೀಕಿಸಿದ್ದಾರೆ.
ಗುಂಡಿನ ದಾಳಿ ತಮ್ಮನ್ನು ತೀವ್ರ ಕಳವಳ ಪಡುವಂತೆ ಮಾಡಿದೆ, ಭಯದಿಂದ ವಾಹನ ಹಿಂದಕ್ಕೆ ತಿರುಗಿಸಬೇಕಾಯಿತು. ಅದೃಷ್ಟವಶಾತ್ ತನ್ನ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಆದರೆ ಗುಂಡು ಹಾರಿಸಿದ ಘಟನೆಯ ಹಿಂದೆ ಮಾಜಿ ಪತಿ ಇದ್ದಾರೆಯೇ? ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏತನ್ಮಧ್ಯೆ, ಘಟನೆಯ ಬಗ್ಗೆ ದೂರು ನೀಡಿದ್ದರೂ ಶಾಮ್ಸ್ ಕಾಲೋನಿ (ಇಸ್ಲಾಮಾಬಾದ್) ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಆಕೆಗೆ ನೆಟಿಜನ್‌ಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ರೆಹಮ್ ಖಾನ್ ಪಾಕಿಸ್ತಾನಿ ಮೂಲದ ಪ್ರಮುಖ ಬ್ರಿಟಿಷ್ ಪತ್ರಕರ್ತೆ. ಅವರು 2014 ರಲ್ಲಿ ಇಮ್ರಾನ್ ಅವರನ್ನು ವಿವಾಹವಾಗಿದ್ದದರು. ನಂತರ ಅಷ್ಟೇ ತ್ವರಿತವಾಗಿ ವಿಚ್ಛೇದನ ಪಡೆದುಕೊಂಡಿದ್ದರು ತದ ನಂತರ ಅವರು ರಾಜಕೀಯ ವಿಮರ್ಶಕರಾಗಿ ಬದಲಾಗಿದ್ದು, ಮಾಜಿ ಪತಿಯ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದರು.
2019 ರಲ್ಲಿ ನಡೆದ ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ, ಇಮ್ರಾನ್ ಖಾನ್ ದೇಶ (ಪಾಕಿಸ್ತಾನ) ಸೇನೆಯ ಕೈಗೊಂಬೆಯಾಗಿದೆ. ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದು ರೆಹಮ್ ಖಾನ್ ತೀವ್ರವಾಗಿ ಟೀಕಿಸಿದ್ದರು.
ಅದೇ ವೇಳೆಗೆ ನಾನು ವಾಹನ ಬದಲಾಯಿಸಿದ್ದೆ. ನನ್ನ ಪಿಎಸ್ ಹಾಗೂ ಡ್ರೈವರ್ ಕಾರಿನಲ್ಲಿದ್ದರು. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ? ಹೇಡಿಗಳು, ಕೊಲೆಗಡುಕರು ಹಾಗೂ ದುರಾಸೆಯ ಸ್ಥಿತಿಗೆ ಸ್ವಾಗತ ಎಂದು ರೆಹಮ್ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಸಾವು ಅಥವಾ ಗಾಯದ ಭಯವಿಲ್ಲ. ಆದರೆ, ನನಗಾಗಿ ಕೆಲಸ ಮಾಡುವವರ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಪ್ರತಿಯ ಹಂಚಿಕೊಂಡಿದ್ದಾರೆ. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೆಳಗ್ಗೆ 9 ಗಂಟೆಯಾಗಿದೆ. ನನ್ನ ಪಿಎಸ್ ಮತ್ತು ತಂಡವು ಒಂದು ನಿಮಿಷವೂ ನಿದ್ರೆ ಮಾಡಿಲ್ಲ. ಇಸ್ಲಾಮಾಬಾದ್ ಶಮ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಇನ್ನೂ ದಾಖಲಾಗಿಲ್ಲ. ತನಿಖೆ ನಡೆಯುತ್ತಿದೆ. ಎಫ್‌ಐಆರ್ ಪ್ರತಿಗಾಗಿ ಕಾಯಲಾಗುತ್ತಿದೆ ಎಂದು ಬ್ರಿಟಿಷ್-ಪಾಕಿಸ್ತಾನ ಮೂಲದ ಪತ್ರಕರ್ತೆ, ಮಾಜಿ ಟಿವಿ ನಿರೂಪಕಿ ಹೇಳಿದ್ದಾರೆ.












Click it and Unblock the Notifications